ಫೆಬ್ರವರಿ 16 ರಿಂದ ಫೆಬ್ರವರಿ 28 ರವರೆಗೆ ಎರಡನೇ ಸುತ್ತಿನ ಜಾತಿ ಸಮೀಕ್ಷೆಯನ್ನು ನಡೆಸುವುದಾಗಿ ತೆಲಂಗಾಣ ಸರ್ಕಾರ ಬುಧವಾರ ಹೇಳಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆದ ಸಮೀಕ್ಷೆಯ ಮೊದಲ ಹಂತದಲ್ಲಿ ಭಾಗವಹಿಸದ ರಾಜ್ಯದ ಜನಸಂಖ್ಯೆಯ 3.1% ಜನರನ್ನು ಈ ಸಮೀಕ್ಷೆ ಒಳಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಹೇಳಿದ್ದಾರೆ.
ಈ ವೇಳೆ ನಾಗರಿಕರು ಎರಡನೇ ಸುತ್ತಿನಲ್ಲಿ ತಮ್ಮ ಡೇಟಾವನ್ನು ನವೀಕರಿಸಲು ಪ್ರಯತ್ನಿಸಬಹುದು ಎಂದು ಅವರು ಹೇಳಿದ್ದು, ಜೊತೆಗೆ ಇತರ ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ 42% ಮೀಸಲಾತಿ ನೀಡುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಎರಡನೇ ಸುತ್ತಿನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಫೆಬ್ರವರಿ 4 ರಂದು ವಿಧಾನಸಭೆಯಲ್ಲಿ ಜಾತಿ ಸಮೀಕ್ಷೆಯನ್ನು ಮಂಡಿಸಿದ್ದರು. ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗಗಳು ರಾಜ್ಯದ ಜನಸಂಖ್ಯೆಯಲ್ಲಿ 56.33% ರಷ್ಟಿವೆ ಎಂದು ಸಮೀಕ್ಷೆಯು ಹೇಳಿದೆ. ಮುಸ್ಲಿಮರನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪಾಲು 46.25%ದಷ್ಟು ಇದೆ.
VIDEO | Telangana caste survey: Deputy CM Mallu Bhatti Vikramarka said, "For the people who have left and not joined, including KTR, KCR, and some others, we are giving one more chance to them to get themselves enrolled and give information for the caste survey. In the first… pic.twitter.com/WmQ1mtHCuB
— Press Trust of India (@PTI_News) February 12, 2025
ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳು 17.4% ಅಥವಾ 61.8 ಲಕ್ಷ ಜನರನ್ನು ಒಳಗೊಂಡಿವೆ ಮತ್ತು ಪರಿಶಿಷ್ಟ ಪಂಗಡಗಳು 10.4% ಅಥವಾ 37 ಲಕ್ಷ ಜನರನ್ನು ಹೊಂದಿವೆ.
ಅದಾಗ್ಯೂ, ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಭಾರತ ರಾಷ್ಟ್ರ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರವಾಗಿ ವಿರೋಧಿಸುತ್ತಿವೆ.
ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಎಂದಿಗೂ ಸ್ವೀಕರಿಸಲಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್ ಗುರುವಾರ ಹೇಳಿದ್ದಾರೆ. “ಬಿಜೆಪಿ ಧಾರ್ಮಿಕ ಆಧಾರಿತ ಮೀಸಲಾತಿಯನ್ನು ನಿಸ್ಸಂದಿಗ್ಧವಾಗಿ ವಿರೋಧಿಸುತ್ತದೆ. ಇದರ ಬಗ್ಗೆ ತಿಳಿದಿದ್ದರೂ, ಕಾಂಗ್ರೆಸ್ ಇನ್ನೂ ಅದನ್ನು ಕೇಂದ್ರದ ಮೇಲೆ ಹೇರಲು ಪ್ರಯತ್ನಿಸುತ್ತಿರುವುದು ಶುದ್ಧ ಮೂರ್ಖತನ.” ಎಂದು ಅವರು ಹೇಳಿದ್ದಾರೆ.
ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಪ್ರಾಮಾಣಿಕವಾಗಿಲ್ಲ ಎಂದು ಸಂಜಯ್ ಆರೋಪಿಸಿದ್ದಾರೆ.
Muslims in the BC list will never be accepted, period.
BJP is unequivocally against religious-based reservations. Despite being aware of this, Congress still trying to push it onto the Centre is sheer foolishness.
One thing is clear, Congress lacks sincerity in implementing BC…
— Bandi Sanjay Kumar (@bandisanjay_bjp) February 13, 2025
2014 ರಲ್ಲಿ 51% ರಷ್ಟಿದ್ದ ಹಿಂದುಳಿದ ವರ್ಗಗಳ ಪಾಲನ್ನು ಈ ವರ್ಷ 46% ಕ್ಕೆ ಇಳಿಸಿದ್ದಕ್ಕಾಗಿ ಸಿಎಂ ರೇವಂತ್ ರೆಡ್ಡಿ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಭಾರತ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಟಿ. ರಾಮರಾವ್ ಬುಧವಾರ ಒತ್ತಾಯಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಜೊತೆಗೆ, ಎರಡನೇ ಸುತ್ತಿನ ಸಮೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ.
ಡಿಸೆಂಬರ್ 2023 ರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಜಾತಿ ಸಮೀಕ್ಷೆಯೂ ಒಂದಾಗಿತ್ತು. ಈ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿಯನ್ನು ಕಾಂಗ್ರೆಸ್ ಸೋಲಿಸಿ ಚುನಾವಣೆಯಲ್ಲಿ ಗೆದ್ದಿತು.
ಬಿಹಾರ ಮತ್ತು ಆಂಧ್ರಪ್ರದೇಶದ ನಂತರ ಜಾತಿ ಸಮೀಕ್ಷೆಯನ್ನು ನಡೆಸಿದ ಮೂರನೇ ರಾಜ್ಯ ತೆಲಂಗಾಣವಾಗಿದೆ.
ಇದನ್ನೂಓದಿ: ಜನಾಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್; ನಮ್ಮ ಮೆಟ್ರೋ ದರ ಶೇ. 30 ರಷ್ಟು ಇಳಿಕೆ!
ಜನಾಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್; ನಮ್ಮ ಮೆಟ್ರೋ ದರ ಶೇ. 30 ರಷ್ಟು ಇಳಿಕೆ!


