2024ರ ಲೋಕಸಭೆ ಚುನಾವಣೆಯ ಸೋಲಿನಿಂದ ಮೋದಿ ಸರಕಾರ ಏನನ್ನೂ ಕಲಿತಿಲ್ಲದಂತೆ ತೋರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೋದಿ ನೇತೃತ್ವದ ನೂತನ ಸರಕಾರದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಸೆಕ್ಷನ್ 13ರಡಿಯಲ್ಲಿ ಲೇಖಕಿ ಅರುಂಧತಿ ರಾಯ್ ಹಾಗೂ ಕಾಶ್ಮೀರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರಾಗಿದ್ದ ಡಾ. ಶೇಖ್ ಶೌಕತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಶುಕ್ರವಾರ ಅನುಮತಿ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಶಾಂತ್ ಭೂಷಣ್, 2024ರ ಸೋಲಿನಿಂದ ಮೋದಿ ಸರ್ಕಾರ ಏನನ್ನೂ ಕಲಿತಿಲ್ಲ ಎಂದು ತೋರುತ್ತದೆ. ಭಾರತವನ್ನು ಸರ್ವಾಧಿಕಾರ ಮತ್ತು ಬನಾನಾ ರಿಪಬ್ಲಿಕ್ ಮಾಡಲು ಮತ್ತಷ್ಟು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
2010ರಲ್ಲಿ ‘ಆಝಾದಿ – ದಿ ಓನ್ಲಿ ವೇ’ ತಲೆಬರಹದಲ್ಲಿ ಕಮಿಟಿ ಫಾರ್ ದಿ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್ ಸಂಘಟನೆಯು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಎಂದು ಹಲವಾರು ಮಂದಿಯ ವಿರುದ್ಧ ಸುಶೀಲ್ ಪಂಡಿತ್ ದೂರು ದಾಖಲಿಸಿದ್ದರು.
ಕಳೆದ ವರ್ಷ ಲೇಖಕಿ ಅರುಂಧತಿ ರಾಯ್ ಮತ್ತು ಡಾ. ಶೇಖ್ ಶೌಕತ್ ವಿರುದ್ಧ ಇದೇ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ/153ಬಿ ಹಾಗೂ 505ರ ಅಡಿ ವಿಚಾರಣೆಗೊಳಪಡಿಸಲು ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 196ರ ಅಡಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದರು.
So LG has granted prosecution sanction under UAPA terror law on a 14 yr old FIR against Arundhati Roy on a charge of advocating Azaadi for Kashmir.
Seems that Modi govt has learnt nothing from the 2024 debacle. Even more determined to make India into a dictatorship&Banana…— Prashant Bhushan (@pbhushan1) June 14, 2024
ಇದನ್ನು ಓದಿ: ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಅಂಗೀಕಾರ


