Homeಮುಖಪುಟಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ

ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ

ಸರ್ಕಾರ ಅಂಗೀಕರಿಸುವ ವಿವಿಧ ನಿರ್ಣಯಗಳು, ಸಾಮಾನ್ಯ ಆದೇಶಗಳು, ನಿಯಮಗಳು, ಅಧಿಸೂಚನೆಗಳು ಇತರ ಭಾಷೆಗಳಲ್ಲಿ ಕೇಳಿದರೆ ತಪ್ಪೇನು? ಅದು ನಮ್ಮ ಹಕ್ಕಲ್ಲವೆ ? ನಾವು ಆಯ್ಕೆ ಮಾಡಿರುವ ಸರ್ಕಾರ ನಮ್ಮ ಜೊತೆ ನಮಗೆ ಗೊತ್ತಿರುವ ಭಾಷೆಯಲ್ಲಿ ವ್ಯವಹರಿಸುವುದರಲ್ಲಿ ತಪ್ಪೇನಿದೆ. ಅದು ಅವರ ಕರ್ತವ್ಯವಲ್ಲವೆ?

- Advertisement -
- Advertisement -

ಮತ್ತೆ ಸೆಪ್ಟೆಂಬರ್‌ 14 ಹಿಂದಿ ದಿನ ಬರುತ್ತಿದೆ. ಭಾರತ ಹಲವು ರಾಜ್ಯಗಳ ಒಕ್ಕೂಟ ವ್ಯವಸ್ಥೆಯಾಗಿದ್ದುಕೊಂಡು, ಇಲ್ಲಿನ ಯಾವುದೇ ಭಾಷೆಗಳಿಗೆ ಕೊಡದಷ್ಟು ಮಹತ್ವವನ್ನು ಹಿಂದಿಗೆ ಕೊಡುತ್ತಿದೆ. ಇದುವರೆಗೆ ಬಂದ ಎಲ್ಲಾ ಆಡಳಿತಗಳು ಕೂಡಾ ಹಿಂದಿಯನ್ನು ಪೊಷಿಸುತ್ತಲೇ ಬಂದಿದೆ. ಈಗಿನ ಸರ್ಕಾರವಂತೂ ಹಿಂದಿಯಿಂದಲೇ ಭಾರತದ ಅಭಿವೃದ್ದಿ ಸಾಧ್ಯ ಎಂದು ಸುಳ್ಳನ್ನು ಹೇಳುತ್ತಿದೆ. ಇದಕ್ಕೆ ಹಲವಾರು ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಎಂದಿನಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಅಲ್ಲಿನ ಕಲಾವಿದರು ಸಹ ಹಿಂದಿ ಹೇರಿಕೆ ವಿರುದ್ದ ತೀವ್ರ ಧ್ವನಿ ಎತ್ತುತ್ತಲೇ ಇದ್ದಾರೆ.

ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ

ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಕರೆಯುವುದು ಹಾಗೂ ಇತರ ಭಾಷೆಗಳನ್ನು ಪ್ರಾದೇಶಿಕ ಭಾಷೆ ಎಂದು ಕರೆಯುವುದರಲ್ಲೇ ಒಂದು ರಾಜಕೀಯ ಅಡಗಿದೆ. ಬಹುಮುಖ್ಯವಾಗಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದ, ಅದೂ ಅಲ್ಲದೆ ಪಕ್ಕಾ ಭಾರತೀಯವಲ್ಲದ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಕರೆಯುವುದು ಕೂಡಾ ವ್ಯಂಗ್ಯವೆ ಆಗಿದೆ. ಬಹುಸಂಸ್ಕೃತಿಯ ದೇಶವನ್ನು ಏಕ ಭಾಷೆಯ ದೇಶವನ್ನಾಗಿ ಮಾಡಲು ಹೊರಟಿರವುದು ಮೂರ್ಖತನವಲ್ಲದೆ ಬೇರೇನು ಎಂಬ ಪ್ರಶ್ನೆ ಭಾರತೀಯರದು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಹಕ ವ್ಯವಹಾರದಲ್ಲಿ ಕನ್ನಡ ಭಾಷೆಯಾಗಿ ಹೋರಾಡುತ್ತಿರುವ ಅರುಣ್ ಜಾವಗಲ್, “ಭಾಷಾ ವೈವಿದ್ಯತೆ ಇರುವ ದೇಶದಲ್ಲಿ ಕೇವಲ ಒಂದು ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ ಎಂದರೆ ಉಳಿದ ಭಾಷೆಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ. ಹಾಗಾಗಿ ನಾವು ಹಿಂದಿ ದಿನವನ್ನು ಎರಡು ರೀತಿಯಲ್ಲಿ ವಿರೋಧಿಸುತ್ತೇವೆ. ಮೊದಲನೆಯದಾಗಿ ವಿವಿದ ಭಾಷೆಗಳಿರುವ ದೇಶದಲ್ಲಿ ಒಂದು ಭಾಷೆಯನ್ನು ಹೇರುವುದರ ವಿರುದ್ಧ ಹಾಗೂ ಎರಡನೆಯದಾಗಿ ಬೇರೆ ಯಾವುದೇ ಭಾಷೆಗಿರದ ಹೆಚ್ಚುಗಾರಿಕೆಯನ್ನು ಹಿಂದಿಗೆ ನೀಡುವುದನ್ನು ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.

“1930 ರ ದಶಕದಲ್ಲೆ ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ ಭಾಷಾವಾರು ರಾಜ್ಯಗಳ ಸ್ಥಾಪನೆಗೆ ತಾತ್ವಿಕವಾಗಿ ಒಪ್ಪಿಕೊಂಡಿದ್ದರು. ಸ್ವಾತಂತ್ರ್ಯ ಬಂದಮೇಲೆ ಅವರುಗಳು ಕೊಟ್ಟಿದ್ದ ಮಾತನ್ನು ಜಾರಿಗೆ ತರುವುದು ಕಾಂಗ್ರೆಸ್‌ನ ಜವಾಬ್ದಾರಿ ಕೂಡ ಆಗಿತ್ತು. ಆದರೆ ಕಾಂಗ್ರೆಸ್ ನ ಹಲವಾರು ನಾಯಕರು ಮತ್ತು ಅಂಬೇಡ್ಕರ್‌ರಂತಹವರಿಗೆ ಭಾಷಾವಾರು ರಾಜ್ಯಗಳ ಸ್ಥಾಪನೆ ಮಾಡಿದರೆ ಭಾರತೀಯ ರಾಷ್ಟ್ರೀಯತೆಗೆ ಧಕ್ಕೆ ಬರುತ್ತದೆ, ಜೊತೆಗೆ ಒಕ್ಕೂಟ ವ್ಯವಸ್ಥೆಯ ಬುನಾದಿಯೇ ದುರ್ಬಲ ಆಗಬಹುದು ಅನ್ನುವ ಆತಂಕ ಇತ್ತು. ಆದರೆ ದೇಶಾದ್ಯಂತ ಇದ್ದ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸ್ಥಳೀಯ ಜನರ ಇಚ್ಚೆ ಏನಿತ್ತು ಅನ್ನುವುದು ಗೊತ್ತಿದ್ದರಿಂದ ಕಾಂಗ್ರೆಸ್ ಸರ್ಕಾರದೊಳಗೆ ಇದ್ದುಕೊಂಡು ಭಾರತವನ್ನು ಭಾಷಾವಾರು ರಾಜ್ಯಗಳ ಒಂದು ಒಕ್ಕೂಟ ವ್ಯವಸ್ಥೆಯನ್ನಾಗಿ ರೂಪಿಸಿದರು.” ಎಂದು ಪ್ರಾಧ್ಯಾಪಕರಾದ ನಾಗೇಗೌಡ ಕೀಲಾರ ಶಿವಲಿಂಗಯ್ಯ ಹೇಳುತ್ತಾರೆ.

“ಅಂದು ನೆಹರೂ ಭಾಷಾವಾರು ರಾಜ್ಯಗಳ ಸ್ಥಾಪನೆಯನ್ನು ಮಾಡದೇ ಇದ್ದಿದ್ದರೆ ಕಾಂಗ್ರೆಸ್ ಪಕ್ಷ ಒಡೆದು ಹೋಗುತ್ತಿತ್ತು, ಜೊತೆಗೆ ಒಕ್ಕೂಟ ವ್ಯವಸ್ಥೆ ಕೂಡ ಒಡೆದು ಹೋಗುತ್ತಿತ್ತು. ಆದರೆ ನೆಹರೂ ಇದಕ್ಕೆ ಅವಕಾಶ ಕೊಡದೇ ಜನರ ಆಶೋತ್ತರಗಳನ್ನು ಪೂರೈಸುತ್ತಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದರ ಜೊತೆಗೆ ಇನ್ನೂ ಗಟ್ಟಿ ಮಾಡಿದ್ದಾರೆ. ಈಗ ಹಿಂದಿ ಹೇರಿಕೆ ಮೂಲಕ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬಾರದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್;‌ ತಯಾರಿಕರಿಗೆ ಬೆದರಿಕೆ!‌

ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಪ್ರಚಾರ ಮಾಡಲು ಪ್ರತಿ ವರ್ಷ ಕೋಟ್ಯಾಂತರ ರೂಗಳನ್ನು ಖರ್ಚು ಮಾಡುತ್ತದೆ. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೃತ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತದ ಪ್ರಚಾರಕ್ಕಾಗಿ 643.84 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದರೆ ಇತರ ಐದು ಶಾಸ್ತ್ರೀಯ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾಗಳ ಅಭಿವೃದ್ದಿಗೆ ಕೇವಲ 29 ಕೋಟಿ ರೂ.ಗಳನ್ನಷ್ಟೆ ಖರ್ಚು ಮಾಡಿದೆ.

PC: Kanimozhi@twitter

2014-19 ರಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ವಿಶ್ವದಾದ್ಯಂತ ಹರಡಲು 43.48 ಕೋಟಿ ರೂ. ಖರ್ಚು ಮಾಡಿದೆ. ಹಿಂದಿಯನ್ನು ವಿಶ್ವದಾದ್ಯಂತ ಹರಡಲು ಖರ್ಚು ಮಾಡುವಾಗ ಭಾರತದ ಇತರ ಭಾಷೆಗಳ ಅಭಿವೃದ್ದಿಗೆ ಏಕೆ ಮುಂದಾಗುವುದಿಲ್ಲ? ಒಟ್ಟಿನಲ್ಲಿ ಭಾರತ ಎಂದರೆ ಹಿಂದಿ ಎಂದು ವಿಶ್ವಕ್ಕೆ ಹೇಳಲು ಕೇಂದ್ರ ಸರ್ಕಾರ ಹೊರಟಿದೆ.

ಕೇಂದ್ರ ಸರ್ಕಾರದ ಭಾಷಾ ದಬ್ಬಾಳಿಕೆ ಎಷ್ಟಿದೆ ಎಂದರೆ, ಹೊಸ ಕರಡು ಪರಿಸರ ಪರಿಣಾಮಗಳ ಅಧ್ಯಯನ (ಇಐಎ) ಅಧಿಸೂಚನೆ- 2020 ಅನ್ನುಭಾರತದ ಇತರ ಭಾಷೆಗಳಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಕೊಡುತ್ತಿರುವ ಕಾರಣ ಎಷ್ಟು ಹಾಸ್ಯಾಸ್ಪದವೆಂದರೆ ಭಾರತದ ಇತರ ಭಾಷೆಗಳಲ್ಲಿ ಅದಕ್ಕೆ ಪದಗಳು ಸಿಗುತ್ತಿಲ್ಲ ಎಂಬುದಾಗಿದೆ.

“ಆಡಳಿತದ ಅಗತ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಅಂಗೀಕರಿಸಲಾಗುತ್ತಿದ್ದ ವಿವಿಧ ನಿರ್ಣಯಗಳು, ಸಾಮಾನ್ಯ ಆದೇಶಗಳು, ನಿಯಮಗಳು, ಅಧಿಸೂಚನೆಗಳು ಇತ್ಯಾದಿಗಳ ’ಸ್ಥಳೀಯ ಭಾಷೆ’ಗಳ ಅನುವಾದವನ್ನು ಕೋರಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭವಾಗುತ್ತದೆ” ಎಂದು ಕೇಂದ್ರ ಸರ್ಕಾರ ಕೋರ್ಟ್‌‌ನಲ್ಲಿ ಹೇಳಿದೆ.

ಇದನ್ನೂ ಓದಿ: ‘ಹಿಂದಿ ಹೇರಿಕೆಯು ಬ್ರಾಹ್ಮಣರಿಗೆ ಕುರಾನ್ ಕೊಟ್ಟಂತೆ’: ಪತ್ರಬರೆದ IRS ಅಧಿಕಾರಿ

ಅಷ್ಟಕ್ಕೂ ಸರ್ಕಾರ ಅಂಗೀಕರಿಸುವ ವಿವಿಧ ನಿರ್ಣಯಗಳು, ಸಾಮಾನ್ಯ ಆದೇಶಗಳು, ನಿಯಮಗಳು, ಅಧಿಸೂಚನೆಗಳು ನಮ್ಮ ಭಾಷೆಗಳಲ್ಲಿ ಕೇಳಿದರೆ ತಪ್ಪೇನು? ಅದು ನಮ್ಮ ಹಕ್ಕಲ್ಲವೆ ? ನಾವು ಆಯ್ಕೆ ಮಾಡಿರುವ ಸರ್ಕಾರ ನಮ್ಮ ಜೊತೆ ನಮಗೆ ಗೊತ್ತಿರುವ ಭಾಷೆಯಲ್ಲಿ ವ್ಯವಹರಿಸುವುದರಲ್ಲಿ ತಪ್ಪೇನಿದೆ. ಅದು ಅವರ ಕರ್ತವ್ಯವಲ್ಲವೆ?

ಒಟ್ಟಿನಲ್ಲಿ ಹಿಂದಿ ಭಾಷೆಗೆ ನಮ್ಮ ವಿರೋಧ ಇರಬಾರದು. ಒಂದು ಭಾಷೆಯಾಗಿ ಹಿಂದಿ ಬೇಕಾದವರು ಕಲಿಯಲಿ, ಅದರಲ್ಲಿ ತಪ್ಪೇನಿಲ್ಲ. ಬಲವಂತವಾಗಿ ಕಲಿಯಲೇ ಬೇಕೆನ್ನುವುದು ಅಥವಾ ಹಿಂದಿಯೇರ ರಾಜ್ಯದಲ್ಲಿರುವ ಭಾಷೆಯನ್ನು ಕಡೆಗಣಿಸಿ ಹಿಂದಿಗೆ ಪ್ರಾಧಾನ್ಯತೆಯನ್ನು ಬಿತ್ತುವುದು ಅನ್ಯಾಯವಲ್ಲದೆ ಇನ್ನೇನು? ಈ ಹಿನ್ನಲೆಯಲ್ಲಿ ಮುಂದಿನ ವಾರ ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸುವ ’ಹಿಂದಿ ದಿನ’ವನ್ನು ನಾವು ವಿರೋಧಿಸಲೇ ಬೇಕಿದೆ.

ಒಂದು ಒಕ್ಕೂಟ ಸರ್ಕಾರವಾಗಿ ಹೆಚ್ಚಿನ ಜನರು ಬಳಸುತ್ತಾರೆ ಎಂಬ ಕಾರಣಕ್ಕೆ ಅದನ್ನು ಮೆರೆಸುವುದು ಅಥವಾ ಅದಕ್ಕೆ ಪ್ರಾಧಾನ್ಯತೆ ನೀಡುವುದನ್ನು ನಾವು ಪದೇ ಪದೇ ಪ್ರಶ್ನಿಸಲೇಬೇಕು. ಪ್ರಜಾಪ್ರಭುತ್ವವೆಂದರೆ ಬಹುಸಂಖ್ಯಾತವಾದ ಅಲ್ಲ ಅಲ್ಪಸಂಖ್ಯಾತ ಧ್ವನಿಯನ್ನು ಸಹ ಕಿವಿಗೊಟ್ಟು ಆಲಿಸುವುದಾಗಿದೆ.

ಇದನ್ನೂ: ಮೆಟ್ರೋದಲ್ಲಿ ಹಿಂದಿ ತೆಗೆಯಿರಿ, ಇಲ್ಲ ಎಲ್ಲಾ ಅಧಿಕೃತ 22 ಭಾಷೆಗಳನ್ನು ಬಳಸಿ: ಟಿ.ಎಸ್.ನಾಗಾಭರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...