ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ದೆಹಲಿ ವಿಶ್ವವಿದ್ಯಾಲಯದ ಉಪ ಕುಲಪತಿಗಳ ಎಕ್ಸ್ ಖಾತೆಯನ್ನು ಫಾಲೋ ಮಾಡುವಂತೆ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಒತ್ತಾಯಿಸಿದ್ದು, ವಿವಾದದ ಬಳಿಕ ಸೂಚನೆಯನ್ನು ಹಿಂತೆಗೆದುಕೊಂಡಿದೆ.
ದೆಹಲಿ ವಿಶ್ವವಿದ್ಯಾಲಯದ ಶಹೀದ್ ಭಗತ್ ಸಿಂಗ್ ಕಾಲೇಜಿನ ಆಡಳಿ ಮಂಡಳಿ ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಕುಲಪತಿ ಯೋಗೇಶ್ ಸಿಂಗ್ ಅವರ ಅಧಿಕೃತ ಎಕ್ಸ್ ಹ್ಯಾಂಡಲ್ ಅನ್ನು ಫಾಲೋ ಮಾಡುವಂತೆ ಹಾಗೂ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವ ಅವರ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಒತ್ತಾಯಿಸಿತು. ಆದರೆ, ಟೀಕೆಗಳ ಹಿನ್ನೆಲೆಯಲ್ಲಿ ನೋಟಿಸ್ ಅನ್ನು ಹಿಂತೆಗೆದುಕೊಂಡಿತು.
“ಸಶಸ್ತ್ರ ಪಡೆಗಳ ನೈತಿಕತೆಯನ್ನು ಹೆಚ್ಚಿಸಲು ನೋಟಿಸ್ ನೀಡಲಾಗಿದೆ; ಉಪಕುಲಪತಿಗಳಿಗೂ ಹಾಗೂ ಈ ವಿಚಾರಕ್ಕೆ ಯಾವುದೇ ಸಂಬಂಧವಿಲ್ಲ” ಎಂದು ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್ ಅಟ್ರೀ ಅವರು ವಿವರಿಸಿದರು. “ಕೆಲವರು ಒಳ್ಳೆಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ” ಎಂದು ಕಾಲೇಜು ಪ್ರಾಂಶುಪಾಲರು ತಮ್ಮ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.
ಮೇ 12 ನೀಡಿದ್ದ, ಈಗ ಹಿಂತೆಗೆದುಕೊಳ್ಳಲಾದ ಸೂಚನೆಯಲ್ಲಿ, “ಕಾಲೇಜಿನ ಎಲ್ಲಾ ಶಿಕ್ಷಕರು, ಸಿಬ್ಬಂದಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಕುಲಪತಿ ಪ್ರೊ. ಯೋಗೇಶ್ ಸಿಂಗ್ ಅವರ ಅಧಿಕೃತ ಟ್ವಿಟರ್ (ಈಗ ಎಕ್ಸ್) ಖಾತೆಯನ್ನು ಅನುಸರಿಸಲು ಇಲ್ಲಿ ವಿನಂತಿಸಲಾಗಿದೆ” ಎಂದು ಹೇಳಲಾಗಿತ್ತು. ದೇಶದ ರಕ್ಷಣಾ ಪಡೆಗಳಿಗೆ ಬೆಂಬಲ ಮತ್ತು ಕೃತಜ್ಞತೆಯ ಸಂಕೇತವಾಗಿ ಕಾಲೇಜು ಸಮುದಾಯದ ಸದಸ್ಯರು “ಎಕ್ಸ್ ಮೂಲಕ ಹಂಚಿಕೊಂಡ ಪೋಸ್ಟ್‌ಗಳನ್ನು ಮರುಟ್ವೀಟ್ ಮಾಡಲು ಪ್ರೋತ್ಸಾಹಿಸಲಾಗುತ್ತದೆ” ಎಂದು ಅದು ಹೇಳಿದೆ.
“ಈ ಸಂದೇಶಗಳನ್ನು ವರ್ಧಿಸುವ ಮೂಲಕ, ನಾವು ಅವರ ಧೈರ್ಯ ಮತ್ತು ತ್ಯಾಗಗಳ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ನಮ್ಮ ಸಮುದಾಯದಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಬಲವಾದ ಪ್ರಜ್ಞೆಯನ್ನು ನಿರ್ಮಿಸಲು ಕೊಡುಗೆ ನೀಡುತ್ತೇವೆ” ಎಂದು ಕಾಲೇಜು ಪ್ರಾಂಶುಪಾಲರ ಸಹಿಯನ್ನು ಹೊಂದಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕಾಲೇಜಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನೋಟಿಸ್ ಈಗ ಲಭ್ಯವಿಲ್ಲ.
ಬೆಳವಣಿಗೆಗಳನ್ನು ವಿವರಿಸಿದ ಪ್ರಾಂಶುಪಾಲ ಅಟ್ರೀ, “ನಮ್ಮ ಸಶಸ್ತ್ರ ಪಡೆಗಳ ನೈತಿಕತೆಯನ್ನು ಹೆಚ್ಚಿಸಲು ಯುಜಿಸಿಯ ರಾಷ್ಟ್ರ ಮೊದಲು ಅಭಿಯಾನದ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ಗೆ ಡಿಯು ವಿಸಿ ಯೋಗೇಶ್ ಸಿಂಗ್‌ಗೂ ಯಾವುದೇ ಸಂಬಂಧವಿಲ್ಲ. ಕೆಲವರು ಒಳ್ಳೆಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಂಡ ಕಾರಣ ಕಾಲೇಜು ಆಡಳಿತವು ನೋಟಿಸ್ ಅನ್ನು ಹಿಂತೆಗೆದುಕೊಂಡಿದೆ” ಎಂದರು.
ಕಾಲೇಜಿನ ಸೂಚನೆಯನ್ನು ಟೀಕಿಸಿದ ಡಿಯು ಅಕಾಡೆಮಿಕ್ ಕೌನ್ಸಿಲ್ ಸದಸ್ಯೆ ಪ್ರೊಫೆಸರ್ ಮಾಯಾ ಜಾನ್, “ಎಕ್ಸ್‌ನಲ್ಲಿ ಯಾರನ್ನಾದರೂ ಅನುಸರಿಸುವುದು ಅಥವಾ ಅನುಸರಿಸದಿರುವುದು ಒಬ್ಬರ ಸ್ವಂತ ಆದ್ಯತೆಯನ್ನು ಅವಲಂಬಿಸಿರುತ್ತದೆ. ಅಧಿಕಾರದಲ್ಲಿರುವ ಇನ್ನೊಬ್ಬ ವ್ಯಕ್ತಿ ಅಧಿಕಾರದಲ್ಲಿರುವ ವ್ಯಕ್ತಿಯನ್ನು ಅನುಸರಿಸಲು ನಿರ್ದೇಶನ ನೀಡುವುದು ಕೇವಲ ವಿಚಿತ್ರವಲ್ಲ. ಆದರೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಅಧೀನತೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಡಿಯು ಕಾಲೇಜು ಪ್ರಾಂಶುಪಾಲರ ಈ ನಿರ್ದೇಶನವು ಅತ್ಯಂತ ಖಂಡನೀಯ” ಎಂದು ನಿರ್ಧಾರವನ್ನು ವಿರೋಧಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಸಿಂಗ್ ಈ ತಿಂಗಳ ಆರಂಭದಲ್ಲಿ ಎಕ್ಸ್‌ಗೆ ಸೇರಿದರು. ಮೇ 8 ರಂದು ತಮ್ಮ ಮೊದಲ ಪೋಸ್ಟ್ ಮಾಡಿದರು.
ಮೇ 12 ರಂದು, ಅವರು ಆಪರೇಷನ್ ಸಿಂಧೂರ್ ಬಗ್ಗೆ ಪೋಸ್ಟ್ ಮಾಡಿದರು. ಇದನ್ನು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಪಡೆಗಳು ನಡೆಸಿವೆ ಎಂದು ಅವರು ಹೇಳಿದರು.
ಹಿಂದಿಯಲ್ಲಿರುವ ಪೋಸ್ಟ್ ಮಾಡಿರುವ ಸಿಂಗ್, “ಭಾರತೀಯ ಪಡೆಗಳು ಪಾಕಿಸ್ತಾನಿ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದವು, 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಿದವು, ಇದರಲ್ಲಿ (ವಿಮಾನ) ಐಸಿ-814 ಮತ್ತು ಪುಲ್ವಾಮಾ ಭಯೋತ್ಪಾದಕರು ಸೇರಿದ್ದಾರೆ” ಎಂದು ಹೇಳಿದರು.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡನೇ ದಲಿತ ನ್ಯಾಯಮೂರ್ತಿ ಬಿ.ಆರ್. ಗವಾಯಿ


