ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರು ದೇಶವನ್ನು ಮುನ್ನಡೆಸುವ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ NCP ಮತ್ತು ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಂಚಿಕೊಂಡಿರುವ ಶಿವಸೇನೆಯ ಮುಖಂಡ ಸಂಜಯ್ ರಾವತ್ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಭೂಸುಧಾರಣಾ ಮಸೂದೆಗೆ ಸಹಿ ಇಲ್ಲ, ರೈತರೊಡನೆ ಚರ್ಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ: ರಾಜ್ಯಪಾಲ ವಾಜುಬಾಯಿ…
“ಶರದ್ ಪವಾರ್ ಅವರಿಗೆ ಅಪಾರ ಅನುಭವವಿದೆ. ದೇಶದ ಮುಂದಿರುವ ಸಮಸ್ಯೆಗಳ ಜ್ಞಾನವಿದೆ. ಮುಖ್ಯವಾಗಿ ಜನರ ನಾಡಿಮಿಡಿತ ತಿಳಿದಿದೆ. ಹಾಗಾಗಿ ಅವರು ರಾಷ್ಟ್ರವನ್ನು ಮುನ್ನಡೆಸುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದ್ದಾರೆ” ಎಂದು ಹೇಳಿದರು.
ಡಿಸೆಂಬರ್ 12 ರಂದು ಶರದ್ ಪವಾರ್ ಅವರ 80 ನೇ ಹುಟ್ಟುಹಬ್ಬದ ಪ್ರಯುಕ್ತ “ಶಿವಸೇನೆ ಅವರಿಗೆ ಶುಭಾಶಯಗಳನ್ನು ತಿಳಿಸುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ದೆಹಲಿ ಗಲಭೆಗೆ ಅಮಿತ್ ಶಾ ಅವರೇ ನೇರ ಹೊಣೆ: ಸತ್ಯಶೋಧನಾ ಸಮಿತಿಯ ವರದಿ!
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಬದಲಿಸಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಧ್ಯಕ್ಷರಾಗಿ ಶರದ್ ಪವಾರ್ ಅವರನ್ನು ನೇಮಕ ಮಾಡಬಹುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, “ರಾಜಕೀಯವು ಅನಿರೀಕ್ಷಿತವಾಗಿದೆ. ಮುಂದೆ ಏನಾಗಲಿದೆ ಎಂಬುದು ತಿಳಿಯುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಆತಂಕ ವ್ಯಕ್ತಪಡಿಸಿದ ಮೃಗಾಲಯದ ಅಧಿಕಾರಿಗಳು!


