ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಾಗಿದ್ದು ಅಬ್ದುಲ್ ಜಫರ್ ಅಲಿ ಮತ್ತು ಆರ್.ಮಂಜುನಾಥರವರ ನಾಮಪತ್ರ ತಿರಸ್ಕೃತಗೊಂಡಿವೆ.
ಅಬ್ದುಲ್ ಜಫರ್ ಅಲಿ ಅವರು ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದು ಮತ್ತು ಆರ್.ಮಂಜುನಾಥ್‌ರವರು ತಡವಾಗಿ ನಾಮಪತ್ರ ಸಲ್ಲಿಸಿದ್ದು ಅವರಿಬ್ಬರ ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವಾಗಿದೆ.
ವಿದೇಶದಲ್ಲಿದ್ದ ಕಾರಣ ಅಬ್ದುಲ್ ಜಫರ್ ಅಲಿಯವರ ಹೆಸರು ಮತದಾರರ ಪಟ್ಟಿಯಲ್ಲಿರಲಿಲ್ಲ. ಆನಂತರ ಅವರು ಏಪ್ರಿಲ್ 20 ರಂದು ಮತದಾರರ ಗುರತಿನ ಚೀಟಿಗೆ ಅರ್ಜಿ ಹಾಕಿದ್ದರು. ಆದರೆ ಏಪ್ರಿಲ್ 11 ಕೊನೆಯ ದಿನವಾದ ಕಾರಣ ಅವರ ಹೆಸರು ಸೇರ್ಪಡೆಗೊಂಡಿರಲಿಲ್ಲ.
ಇನ್ನು ಅವರ ನಾಮಪತ್ರ ತಿರಸ್ಕೃತಗೊಳ್ಳುವ ಸಂಭವವನ್ನು ಅರಿತು ಜೆಡಿಎಸ್‌ನಿಂದ ಆರ್.ಮಂಜುನಾಥ್‌ರವರಿಗೂ ಬಿ ಫಾರಂ ಕೊಟ್ಟು ತರಾತುರಿಯಲ್ಲಿ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ ಮಧ್ಯಾಹ್ನ 3 ಗಂಟೆ ಸಮಯ ಮೀರಿದ ನಂತರ ನಾಮಪತ್ರ ಸಲ್ಲಿಕೆಯಾದ ಕಾರಣ ಅದನ್ನೂ ತಿರಸ್ಕೃತಗೊಳಿಸಲಾಗಿದೆ.

ಸದ್ಯ ಶಿವಾಜಿನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿಲ್ಲ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಮತ್ತು ಬಿಜೆಪಿಯಿಂದ ಎನ್ ಚಂದ್ರುರವರು ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂ ಓದಿ: ‘ಲಿಂಗಾಯತ ಸಿಎಂ’ ಪ್ರಸ್ತಾಪ ತಿರಸ್ಕರಿಸಿದ ಅಮಿತ್ ಶಾ


