Homeಎಕಾನಮಿದಾಖಲೆಯ 8.2%ಕ್ಕೆ ಏರಿದ ನಿರುದ್ಯೋಗ ದರ: ಹರ್ಯಾಣದಲ್ಲಿ ಗರಿಷ್ಠ, ಕರ್ನಾಟಕದಲ್ಲಿ ಕನಿಷ್ಠ

ದಾಖಲೆಯ 8.2%ಕ್ಕೆ ಏರಿದ ನಿರುದ್ಯೋಗ ದರ: ಹರ್ಯಾಣದಲ್ಲಿ ಗರಿಷ್ಠ, ಕರ್ನಾಟಕದಲ್ಲಿ ಕನಿಷ್ಠ

- Advertisement -
- Advertisement -

ನಿರುದ್ಯೋಗ ದರವು ದಿನೇ ದಿನೇ ಏರುತ್ತಿದ್ದ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಸೆಂಟರ್ ಫಾರ್ ಮಾನಿಟರಿ ಇಂಡಿಯನ್ ಎಕಾನಮಿ (ಸಿ.ಎಂ.ಐ.ಇ) ಪ್ರಕಾರ ಭಾರತದಲ್ಲಿ 8.2% ಏರಿದ್ದು ನಗರ ಪ್ರದೇಶಗಳಲ್ಲಿ ಇನ್ನು ಹೆಚ್ಚು ಅಂದರೆ 9.2% ಏರಿದೆ. ಆಶ್ಚರ್ಯಕರವಾಗಿ ಗ್ರಾಮೀಣ ಭಾಗದಲ್ಲಿ 7.7% ರಷ್ಟಿದೆ.

ಈ ಕುರಿತು ಅಧಿಕೃತವಾಗಿ CMIE ಟ್ವೀಟ್ ಮಾಡಿದ್ದು ನಿರುದ್ಯೋಗ ದರದ ಚಾರ್ಟ್ ಒಂದನ್ನು ಹಾಕಿದೆ. 2017ರ ಆಗಸ್ಟ್ ನಿಂದ ಆರಂಭವಾಗ ನಿರುದ್ಯೋಗ ಹೆಚ್ಚಳದ ದರ ನಿರಂತರವಾಗಿ ಹೆಚ್ಚುತ್ತಲೇ ಇದ್ದಿದ್ದು ಈಗ 8.2% ರಷ್ಟರ ಅಪಾಯಕಾರಿ ಮಟ್ಟಕ್ಕೆ ತಲುಪಿದೆ.

ಹರ್ಯಾಣ ರಾಜ್ಯದಲ್ಲಿ 28.7% ರಷ್ಟು ಅತಿ ಹೆಚ್ಚಿನ ನಿರುದ್ಯೋಗವಿದ್ದರೆ, ಕರ್ನಾಟಕವೂ 0.9% ಅತಿ ಕಡಿಮೆ ನಿರುದ್ಯೋಗ ದರ ಹೊಂದಿರುವ ರಾಜ್ಯವಾಗಿದೆ.

ಈ ಕುರಿತು ಖ್ಯಾತ ಚಿಂತಕ ಮತ್ತು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದು “ಆಗಸ್ಟ್ 2019 ರಲ್ಲಿ ಹರಿಯಾಣವು ಆಘಾತಕಾರಿ 28.9% ನಿರುದ್ಯೋಗ ದರದೊಂದಿಗೆ ಅಗ್ರಸ್ಥಾನದಲ್ಲಿದೆ, ಹರಿಯಾಣದ ಮುಖ್ಯಮಂತ್ರಿಗಳು ಉದ್ಯೋಗಗಳಿಗೆ ಬೆನ್ನು ತಿರುಗಿಸಿದ್ದಾರೆ” ಎಂದು ಟೀಕಿಸಿದ್ದಾರೆ.

ಕಳೆದ ವರ್ಷವೂ 45 ವರ್ಷಗಳಲ್ಲೇ ನಿರುದ್ಯೋಗ ದರವೂ 7.5% ದಾಖಲೆಯ ಮಟ್ಟಕ್ಕೆ ಏರಿದೆ ಎಂದು ಸಿಎಂಐಇ ವರದಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಳ್ಳದೇ ಸಿಎಂಐಇ ತಪ್ಪು ಮಾಹಿತಿ ನೀಡಿದೆ ಎಂದು ಆರೋಪ ಮಾಡಿತ್ತು. ಆದರೆ ಚುನಾವಣೆಗಳು ಮುಗಿದ ಕೂಡಲೇ ಅದೇ ಸರ್ಕಾರ ಆ ಅಂಕಿ ಅಂಶಗಳು ನಿಜ ಎಂದು ಒಪ್ಪಿಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಈ ವಿಷಯದ ಬಗ್ಗೆ ನಾನುಗೌರಿ.ಕಾಂ ನೊಂದಿಗೆ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಸಂಚಾಲಕ ಸರೋವರ್ ಬೆಂಕಿಕೇರೆ ಮಾತನಾಡಿ ‘ಇಂದು ಭಾರತದಲ್ಲಿ ತೀವ್ರಮಟ್ಟದಲ್ಲಿ ಆರ್ಥಿಕ ಕುಸಿತವುಂಟಾಗುತ್ತಿದೆ. ಈ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಸುವುದಿರಲಿ, ಇರುವ ಉದ್ಯೋಗಗಳನ್ನೇ ಕಿತ್ತು ಹಾಕಲಾಗುತ್ತಿದೆ. ಮುನ್ನೋಟವಿಲ್ಲದ ನೋಟು ರದ್ಧತಿ ಮತ್ತು ಅವೈಜ್ಞಾನಿಕ ಜಿ.ಎಸ್.ಟಿ ಜಾರಿಗೆ ತಂದ ನಂತರವೇ ಈ ಉದ್ಯೋಗ ಕಡಿತ ಇನ್ನಷ್ಟು ಹೆಚ್ಚಾಗಿದೆ. ಸರ್ಕಾರಗಳು ಈ ದುಸ್ಥಿತಿಯನ್ನು ಒಪ್ಪಿಕೊಳ್ಳದಿರುವುದರಿಂದ ಪರಿಹಾರ ಸಾಧ್ಯವಾಗುತ್ತಿಲ್ಲ. ಈ ಕುರಿತು ಉದ್ಯೋಗಕ್ಕಾಗಿ ಯುವಜನರು ವೇದಿಕೆಯು ಹೋರಾಟ ರೂಪಿಸುವ ಸಲುವಾಗಿ ಸೆಪ್ಟಂಬರ್ 16 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ದುಂಡುಮೇಜಿನ ಸಭೆಯೊಂದನ್ನು ಕರೆದಿದ್ದೇವೆ’ ಎಂದಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...