Homeಮುಖಪುಟ'ಅಮ್ಮ' ಚುನಾವಣೆಯಲ್ಲಿ ಶ್ವೇತಾ ಮೆನನ್‌, ಕುಕ್ಕು ಪರಮೇಶ್ವರನ್‌ಗೆ ಗೆಲುವು: ಉನ್ನತ ಹುದ್ದೆಗಳಿಗೆ ಮೊದಲ ಬಾರಿಗೆ ಮಹಿಳೆಯರು...

‘ಅಮ್ಮ’ ಚುನಾವಣೆಯಲ್ಲಿ ಶ್ವೇತಾ ಮೆನನ್‌, ಕುಕ್ಕು ಪರಮೇಶ್ವರನ್‌ಗೆ ಗೆಲುವು: ಉನ್ನತ ಹುದ್ದೆಗಳಿಗೆ ಮೊದಲ ಬಾರಿಗೆ ಮಹಿಳೆಯರು ಆಯ್ಕೆ

- Advertisement -
- Advertisement -

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಎ.ಎಂ.ಎಂ.ಎ- ಅಮ್ಮ) ಅಧ್ಯಕ್ಷೆಯಾಗಿ ನಟಿ ಶ್ವೇತಾ ಮೆನನ್ ಆಯ್ಕೆಯಾಗಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಟ್ಟು 159 ಮತಗಳನ್ನು ಪಡೆದು ಶ್ವೇತಾ ಮೆನನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ನಟ ದೇವನ್ ಅವರಿಗೆ ಸೋಲಾಗಿದೆ. ದೇವನ್ 132 ಮತಗಳನ್ನು ಪಡೆದಿದ್ದಾರೆ. ನಟಿ ಹಾಗೂ ಡಬ್ಬಿಂಗ್ ಕಲಾವಿದೆ ಕುಕ್ಕು ಪರಮೇಶ್ವರನ್ ಅವರು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಎ.ಎಂ.ಎಂ.ಎನ ಉನ್ನತ ಹುದ್ದೆಗಳಿಗೆ ಮಹಿಳೆಯರು ಆಯ್ಕೆಯಾಗಿದ್ದಾರೆ.

 

View this post on Instagram

 

A post shared by AMMA (@amma.association)

“ನಾವು ಮಹಿಳೆಯರು ಚುನಾವಣೆಯಲ್ಲಿ ಗೆದ್ದಿದ್ದೇವೆ. ನನಗೆ ತುಂಬಾ ಸಂತೋಷವಾಗಿದೆ” ಎಂದು ಶ್ವೇತಾ ಮಾಧ್ಯಮಗಳಿಗೆ ತಿಳಿಸಿದ್ದು, ಎಲ್ಲಾ ಸದಸ್ಯರು ಒಟ್ಟಾಗಿ ಸಂಘವಾಗಿ ಮುಂದುವರಿಯುತ್ತೇವೆ.
ಈ ಹಿಂದೆ ಎ.ಎಂ.ಎಂ.ಎ ತೊರೆದ ಮಹಿಳಾ ನಟರನ್ನು ಮರಳಿ ಕರೆತರಲು ಕರೆ ನೀಡುತ್ತೇವೆ. ಅವರಿಗೆ ಸ್ವಾಗತ, ನಾವೆಲ್ಲರೂ ಒಂದೇ ಕುಟುಂಬ. ಅವರಿಗೆ ಒಳ್ಳೆಯದಾಗುವುದಾದರೆ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಿದ್ಧಳಿದ್ದೇನೆ” ಎಂದಿದ್ದಾರೆ.

ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ನಡೆದ ಮತ್ತು ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಜಸ್ಟೀಸ್ ಹೇಮಾ ಸಮಿತಿ ನೀಡಿದ್ದ ವರದಿಯನ್ನು 2024 ರ ಆಗಸ್ಟ್ 19 ರಂದು ಸರ್ಕಾರ ಸಾರ್ವಜನಿಕಗೊಳಿಸಿತ್ತು. ಆ ಬಳಿಕ ಅನೇಕ ನಟರ ಮೇಲೆ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದಿತ್ತು, ಪ್ರಕರಣಗಳು ದಾಖಲಾಗಿತ್ತು. ಈ ನಡುವೆ ನಟ ಮೋಹನ್‌ಲಾಲ್‌ ನೇತೃತ್ವದ ಎ.ಎಂ.ಎಂ.ಎ ಆಡಳಿತ ಸಮಿತಿಯಿಂದ ಸಿನಿಮಾ ದಿಗ್ಗಜರು ಕೆಳಗಿಳಿದಿದ್ದರು. ಹಾಗಾಗಿ, ಸಮಿತಿಗೆ ಚುನಾವಣೆ ಅಗತ್ಯವಾಗಿತ್ತು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಹೇಮಾ ಸಮಿತಿಯನ್ನು 2019ರಲ್ಲಿ ಸರ್ಕಾರ ರಚಿಸಿತ್ತು. ಈ ಸಮಿತಿಯ ವರದಿಯು ಲೈಂಗಿಕ ಕಿರುಕುಳ ಮತ್ತು ಇತರ ಹಿಂಸಾಚಾರ ಸೇರಿದಂತೆ ಪುರುಷ ಸಹೋದ್ಯೋಗಿಗಳಿಂದ ಮಹಿಳೆಯರು ಎದುರಿಸುತ್ತಿರುವ ಭಯಾನಕ ದೌರ್ಜನ್ಯಗಳನ್ನು ಬಹಿರಂಗಪಡಿಸಿತ್ತು.

ವರದಿ ಬಿಡುಗಡೆಯಾದ ನಂತರ, ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಸೇರಿದಂತೆ ಹಲವಾರು ನಟರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪಗಳು ಕೇಳಿ ಬಂದಿತ್ತು. ಪತ್ರಿಕಾ ಹೇಳಿಕೆಯಲ್ಲಿ, ಎ.ಎಂ.ಎಂ.ಎ. ಆಡಳಿತ ಸಮಿತಿಯು ನೈತಿಕ ಹೊಣೆಗಾರಿಕೆಯನ್ನು ಉಲ್ಲೇಖಿಸಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿತ್ತು.

2025ರ ಆಗಸ್ಟ್ 15ರಂದು ನಡೆದ ಚುನಾವಣೆಯಲ್ಲಿ, ಕುಕ್ಕು ಪರಮೇಶ್ವರನ್ 172 ಮತಗಳನ್ನು ಪಡೆದಿದ್ದು, ಅವರ ವಿರುದ್ಧ ಸ್ಪರ್ಧಿಸಿದ್ದ ರವೀಂದ್ರನ್ 115 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಸಂಘಕ್ಕೆ ಜಯನ್ ಆರ್ ಮತ್ತು ಲಕ್ಷ್ಮಿ ಪ್ರಿಯಾ ಅವರು ಉಪಾಧ್ಯಕ್ಷರಾಗಿ, ಹನ್ಸಿಬಾ ಹಸನ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಉನ್ನಿ ಶಿವಪಾಲ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಮೀಸಲಾದ ಹುದ್ದೆಗಳಿಗೆ ಸರಯು ಮೋಹನ್, ಅಂಜಲಿ ನಾಯರ್, ಆಶಾ ಅರವಿಂದ್ ಮತ್ತು ನೀನಾ ಕುರುಪ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸಾಮಾನ್ಯ ಸದಸ್ಯ ಹುದ್ದೆಗಳಿಗೆ, ಸಂತೋಷ್ ಕೀಜತ್ತೂರ್, ವಿನು ಮೋಹನ್, ಕೈಲಾಶ್, ಟಿನಿ ಟಾಮ್, ಜಾಯ್ ಮ್ಯಾಥ್ಯೂ, ರೋನಿ ಡೇವಿಡ್ ರಾಜ್, ಮತ್ತು ಸಿಜೋಯ್ ವರ್ಗೀಸ್ ಆಯ್ಕೆಗೊಂಡಿದ್ದಾರೆ.

ಧರ್ಮಸ್ಥಳ ಶವಶೋಧ| ಮಧ್ಯಂತರ ವರದಿ ಇಲ್ಲ; ನ್ಯಾಯಾಲಯಕ್ಕೆ ಪೂರ್ಣ ವರದಿ: ಎಸ್‌ಐಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಪ್ರಶಸ್ತಿ ಬಗ್ಗೆ ನನಗೆ ಗೊತ್ತೂ ಇಲ್ಲ, ಸ್ವೀಕರಿಸುವುದೂ ಇಲ್ಲ : ಶಶಿ ತರೂರ್

ಹಿಂದುತ್ವವಾದಿ ವಿ.ಡಿ ಸಾವರ್ಕರ್ ಹೆಸರಿನಲ್ಲಿ ಪ್ರಶಸ್ತಿ ಘೋಷಣೆಯಾದ ಬಗ್ಗೆ ನನಗೆ ಗೊತ್ತೂ ಇಲ್ಲ, ಅಂತಹ ಪ್ರಶಸ್ತಿ ಸ್ವೀಕರಿಸುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಬುಧವಾರ (ಡಿಸೆಂಬರ್...

ಮಧ್ಯಪ್ರದೇಶ| ಯುವಕನನ್ನು ಅಪಹರಿಸಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರು

18 ವರ್ಷದ ಯುವಕನನ್ನು ಬಸ್ಸಿನಿಂದ ಅಪಹರಿಸಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ಸಮಗ್ರತೆ ಮತ್ತು ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಇಂದೋರ್...

ಮುಟ್ಟಿನ ರಜೆ ನೀತಿ ಬಲವಾಗಿ ಸಮರ್ಥಿಸಿಕೊಂಡ ಸರ್ಕಾರ : ಅಧಿಸೂಚನೆ ತಡೆ ತೆರವುಗೊಳಿಸಿದ ಹೈಕೋರ್ಟ್

ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಸಂಬಂಧ ಹೊರಡಿಸಿದ್ದ ತನ್ನ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಸರ್ಕಾರದ ವಾದ ಆಲಿಸಿದ ಹೈಕೋರ್ಟ್, ಅಧಿಸೂಚನೆಗೆ...

ದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತಿತರರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಸಲ್ಲಿಸಿದ್ದ ಅರ್ಜಿಗಳ...

ಪಕ್ಷಪಾತ ಆರೋಪದಿಂದ ದೀಪಸ್ತಂಭದವರೆಗೆ..ಕಟಕಟೆಯಲ್ಲಿರುವ ನ್ಯಾಯಮೂರ್ತಿ ಸ್ವಾಮಿನಾಥನ್ ಯಾರು?

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪದಚ್ಯುತಿ ಕೋರಿ ಮಂಗಳವಾರ (ಡಿಸೆಂಬರ್ 9) ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಲಾಗಿದೆ. ತಮಿಳುನಾಡಿನ ಡಿಎಂಕೆ ಸೇರಿದಂತೆ ವಿವಿಧ...

ಗುಜರಾತ್‌| 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಗಂಭೀರವಾಗಿ ಹಲ್ಲೆ ನಡೆಸಿದವನ ಬಂಧನ

ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ನಂತರ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಈ ಪ್ರಕರಣ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, 35 ವರ್ಷದ...

‘ಮತಗಳ್ಳತನ ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ’: ‘ಬಿಜೆಪಿ-ಇಸಿ ಒಪ್ಪಂದ’ವನ್ನು ನೇರವಾಗಿ ಟೀಕಿಸಿದ ರಾಹುಲ್ ಗಾಂಧಿ

ನವದೆಹಲಿ: "ಮತಗಳ್ಳತನ"(ವೋಟ್ ಚೋರಿ) ಒಂದು "ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ”,  ಬಿಜೆಪಿ ಮತ್ತು ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು "ಜನರ ಧ್ವನಿಯನ್ನು ಕಸಿದುಕೊಳ್ಳಲು" ಪಿತೂರಿ ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ...

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ

16 ವರ್ಷದೊಳಗಿನ ಎಲ್ಲರಿಗೂ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ದೇಶಾದ್ಯಂತ ನಿಷೇಧಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನು ಬುಧವಾರ ಜಾರಿಗೆ ಬಂದಿದ್ದು, ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್, ಥ್ರೆಡ್ಸ್,...

ಎಸ್.ನಿಜಲಿಂಗಪ್ಪನವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಎಸ್. ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 10ರಂದು, ಮಾಜಿ ಮುಖ್ಯಮಂತ್ರಿ ದಿ| ಎಸ್. ನಿಜಲಿಂಗಪ್ಪರವರ...

ನಕಲಿ ತುಪ್ಪ ವಿವಾದದ ಬಳಿಕ ಮತ್ತೊಂದು ಹಗರಣ; ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಹೆಸರಿನಲ್ಲಿ ‘ಪಾಲಿಯೆಸ್ಟರ್‌’ ದುಪಟ್ಟಾ ಪೂರೈಕೆ

ಲಡ್ಡು ಪ್ರಸಾದಕ್ಕೆ ನಕಲಿ ತುಪ್ಪ ಪೂರೈಕೆ ವಿವಾದದ ಬಳಿಕ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರೇಷ್ಮೆ ದುಪಟ್ಟಾಗಳ ಖರೀದಿಯಲ್ಲಿ...