ಅತಿವೃಷ್ಟಿಯಿಂದ ಆಗಿರುವ ನಷ್ಟ ರೂ.35,160 ಕೋಟಿ ಎಂದು ಅಂದಾಜು ಮಾಡಿರುವ ರಾಜ್ಯಸರ್ಕಾರ, ಪರಿಹಾರಕ್ಕಾಗಿ ಕೇವಲ ರೂ.1500 ಕೋಟಿ ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿರುವ ಘೋರ ಅನ್ಯಾಯ. ಯಡಿಯೂರಪ್ಪನವರೆ ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅತಿವೃಷ್ಟಿಯಿಂದ ಆಗಿರುವ ನಷ್ಟ ರೂ.35,160 ಕೋಟಿ ಎಂದು ಅಂದಾಜು ಮಾಡಿರುವ ರಾಜ್ಯಸರ್ಕಾರ, ಪರಿಹಾರಕ್ಕಾಗಿ ಕೇವಲ ರೂ.1500 ಕೋಟಿ ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿರುವ ಘೋರ ಅನ್ಯಾಯ. @BSYBJP ಅವರೇ ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ?#InjusticetoState#WakeUpBJP
— Siddaramaiah (@siddaramaiah) September 19, 2019
ಅತಿವೃಷ್ಟಿಯಂತಹ ತುರ್ತು ಸ್ಥಿತಿಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಸಂದರ್ಶನ ನಿರಾಕರಿಸುತ್ತಿರುವುದು ಯಡಿಯೂರಪ್ಪನವರಿಗೆ ಅವಮಾನವಾದರೆ, ಅದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸರು ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ತಮ್ಮ ಟ್ವೀಟ್ ನಲ್ಲಿ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿಯವರನ್ನು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಸಿ.ಟಿ ರವಿಯವರು ‘ಮಾನ್ಯ ಸಿದ್ದರಾಮಯ್ಯನವರೆ, ರಾಜಸ್ತಾನದಲ್ಲಿ 6 ಬಿಎಸ್ಪಿ ಶಾಸಕರು ತಮ್ಮ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಿಮ್ಮ ಪ್ರಕಾರ ಇದು “ಆಪರೇಷನ್ ನೀಚ್ ಹಸ್ತ” ಆಗಿರುವುದರಿಂದ ನೀವು ಕಾಂಗ್ರೆಸ್ ಮತ್ತು ಸೋನಿಯಾ-ರಾಹುಲ್ ಅವರ “ಮರ್ಡರ್ ಆಫ್ ಡೆಮಾಕ್ರಸಿ” ಯ ವಿರುದ್ಧ ಪ್ರತಿಭಟನೆ ನಡೆಸುವಿರಿ ಎಂದು ನನಗೆ ವಿಶ್ವಾಸವಿದೆ.’ ಎಂದು ಟ್ವೀಟ್ ಮಾಡಿದ್ದರು.
My Dear @CTRavi_BJP,
People of Rajasthan will worry about political developments of their state. When will you protest in front of @PMOIndia office for his apathy towards flood situation in our state?
I will also join you in the protest.. https://t.co/hONpivUAAy— Siddaramaiah (@siddaramaiah) September 19, 2019
ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯನವರು, “ಸಿ.ಟಿ.ರವಿಯವರೇ, ರಾಜಸ್ತಾನದ ಪಕ್ಷಾಂತರದ ಬಗ್ಗೆ ಅಲ್ಲಿಯ ಜನ ಮತ್ತು ಪಕ್ಷಗಳು ನೋಡಿಕೊಳ್ತಾರೆ. ನಮ್ಮ ರಾಜ್ಯಕ್ಕೆ ಪ್ರಧಾನಿ ಮಾಡುತ್ತಿರುವ ಅನ್ಯಾಯಕ್ಕೆ ಅವರ ಕಚೇರಿ ಮುಂದೆ ನೀವು ಯಾವಾಗ ಧರಣಿ ನಡೆಸ್ತೀರಿ? ನಿಮಗೆ ಜೊತೆ ನೀಡಲು ನಾನೂ ಬರ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ನೆರೆ ನಷ್ಟದ ಬಗ್ಗೆ ಇರುವ ಪತ್ರಿಕಾ ವರದಿಗಳನ್ನೂ ಲಗತ್ತಿಸಿದ್ದಾರೆ.


