ಯಾವ ಸರ್ಕಾರ ಜನಪರ, ಸಮಾಜವಾದಿ ಸರ್ಕಾರ ಎಂದು ಭಾವಿಸಿದ್ದೆವೊ, ಅದೇ ಸರ್ಕಾರವೆ ಎಲ್ಲಾ ಜನವಿರೋಧಿ ನೀತಿಯನ್ನು ತಂದು ಜನ ಚಳವಳಿಯನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನ ಮಾಡುತ್ತಿದ್ದು, ಭೂ ದಾಹಕ್ಕೆ ಸಿದ್ದರಾಮಯ್ಯ ಸರ್ಕಾರ ಕೂಡಾ ಹೊರತಾಗಿಲ್ಲ ಎಂದು 1142 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಚೆನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಹೇಳುತ್ತಾ ಕಣ್ಣೀರಾಗಿದ್ದಾರೆ.
ಮಂಗಳವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಂಯುಕ್ತ ಹೋರಾಟ ಕರ್ನಾಟಕ’ ಆಯೋಜಿಸಿದ್ದ ಜನಾಗ್ರಹ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ‘ಸಂಯುಕ್ತ ಹೋರಾಟ-ಕರ್ನಾಟಕ’ ರಾಜ್ಯದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿದೆ.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳಾದ ಹಿನ್ನಲೆ ಪಕ್ಷವು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಮಂಗಳವಾರ ಆಯೋಜಿಸಿದೆ. ಈ ಸಮಾವೇಶದ ನೈತಿಕತೆಯನ್ನು ಪ್ರಶ್ನಿಸಿ ಸಂಯುಕ್ತ ಹೋರಾಟ – ಕರ್ನಾಟಕ ಜನ ಚಳವಳಿಗಳಿಂದ ಜನಾಗ್ರಹ ಸಮಾವೇಶವನ್ನು ನಡೆಸಿದೆ.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಕಾರಹಳ್ಳಿ ಶ್ರೀನಿವಾಸ್, ಈ ಸಮಾವೇಶಕ್ಕೆ ಭಾಗವಸಿದ್ದಕ್ಕೆ ಸಂತೋಷ ಮತ್ತು ಸಂಕಟದ ಅನುಭವಾಗುತ್ತಿದೆ. ಯಾವ ಸರ್ಕಾರ ಜನಪರ ಸರ್ಕಾರ, ಸಮಾಜವಾದಿ ಸರ್ಕಾರ ಎಂದು ಭಾವಿದ್ದೆವೊ, ಅದೇ ಸರ್ಕಾರ ಎಲ್ಲಾ ಜನವಿರೋಧಿ ನೀತಿಯನ್ನು ತಂದು ಜನ ಚಳವಳಿಯನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಚನ್ನರಾಯಪಟ್ಟಣ ಹೋರಾಟದ ಬಗ್ಗೆ ಮಾತನಾಡಿದ ಅವರು, 2022ರ ಎಪ್ರಿಲ್ 4ರಂದು ಹೋರಾಟ ಪ್ರಾರಂಭವಾಗಿ ಇಂದಿಗೆ 1000ಕ್ಕೂ ಹೆಚ್ಚು ದಿನಗಳು ಕಳೆದಿವೆ. ಇವತ್ತಿಗೂ ಹೋರಾಟ ಸುದೀರ್ಘವಾಗಿ ನಡೆಯುತ್ತಿದೆ. ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದು, ಇವತ್ತಿಗೂ ಕೇಸ್‌ಗಳನ್ನು ಮೈಗೆಳೆದುಕೊಂಡು ರೈತರು ಹೋರಾಟ ನಡೆಸುತ್ತಿದ್ದಾರೆ” ಎಂದು ಹೇಳಿದರು.
“ಸ್ವತಃ ಸಿದ್ದರಾಮಯ್ಯ ಅವರು ವಿಪಕ್ಷದಲ್ಲಿದ್ದಾಗ ನಾವು ಅಧಿಕಾರಕ್ಕೆ ಬಂದರೆ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರು ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾ, ನೀಡಿದ್ದ ಮಾತು ಮರೆತಿದೆ. ಭೂ ದಾಹಕ್ಕೆ ಸಿದ್ದರಾಮಯ್ಯ ಸರ್ಕಾರ ಕೂಡಾ ಹೊರತಾಗಿಲ್ಲ” ಎಂದು ರೈತ ಹೋರಾಟಗಾರ ಶ್ರಿನಿವಾಸ್ ಅವರು ಕಣ್ಣೀರಾದರು.
ದೆಹಲಿ ಮಾದರಿ ಹೋರಾಟಗಳು ನಮಗೆ ಸ್ಪೂರ್ತಿಯಾಗಿದ್ದು ನಿಜವೇ ಆದರೂ, ನಮ್ಮದೇ ನೆಲದ ಹೋರಾಟವನ್ನು ನಗಣ್ಯ ಮಾಡುವುದು ಸರಿಯಲ್ಲ. ಕರ್ನಾಟಕದ ಈ ಹೋರಾಟಕ್ಕೆ ನಿಮ್ಮ ಶಕ್ತಿ ಬೇಕಿದೆ ಎಂದು ರಾಜ್ಯದ ಸಂಘಟನೆಗಳಿಗೆ ಶ್ರೀನಿವಾಸ್ ಅವರು ವಿನಂತಿಸಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕಾಂಗ್ರೆಸ್ ಯಾವ ಮುಖ ಇಟ್ಟು ಸಾಧನಾ ಸಮಾವೇಶ ನಡೆಸುತ್ತಿದೆ: ರೈತ ಮುಖಂಡ ಚಾಮರಸಮಾಲೀ ಪಾಟೀಲ್ ಪ್ರಶ್ನೆ
ಕಾಂಗ್ರೆಸ್ ಯಾವ ಮುಖ ಇಟ್ಟು ಸಾಧನಾ ಸಮಾವೇಶ ನಡೆಸುತ್ತಿದೆ: ರೈತ ಮುಖಂಡ ಚಾಮರಸಮಾಲೀ ಪಾಟೀಲ್ ಪ್ರಶ್ನೆ