Homeಕರ್ನಾಟಕಮೈತ್ರಿ ಸರ್ಕಾರ ಪತನಕ್ಕೆ ಯಡಿಯೂರಪ್ಪನವರೊಂದಿಗೆ ಸಿದ್ದರಾಮಯ್ಯ ಸಾಥ್: ಸಂದರ್ಶನದಲ್ಲಿ ದೇವೇಗೌಡರ ಆರೋಪ

ಮೈತ್ರಿ ಸರ್ಕಾರ ಪತನಕ್ಕೆ ಯಡಿಯೂರಪ್ಪನವರೊಂದಿಗೆ ಸಿದ್ದರಾಮಯ್ಯ ಸಾಥ್: ಸಂದರ್ಶನದಲ್ಲಿ ದೇವೇಗೌಡರ ಆರೋಪ

- Advertisement -
- Advertisement -

ಕಳೆದ ಒಂದೂವರೆ ವರ್ಷದಿಂದ ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದೇ ಅಂತರ ಕಾಯ್ದುಕೊಂಡಿದ್ದ ಮಾಜಿ ಪ್ರಧಾನಿ ದೇವೆಗೌಡರು ಈಗ ಮೈತ್ರಿ ಸರ್ಕಾರದ ಪತನದ ನಂತರ ಅದರ ಹೊಣೆಯನ್ನು ಸಿದ್ದರಾಮಯ್ಯನವರ ತಲೆಗೆ ಕಟ್ಟಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ತಿರುವು ತೆಗೆದುಕೊಳ್ಳಬಹುದಾದ ವಿಷಯವಾಗಿದೆ. ದಿ ಹಿಂದು ಪತ್ರಿಕೆಯ ಶರತ್ ಎಸ್. ಶ್ರೀವತ್ಸ ರವರು ದೇವೇಗೌಡರವರೊಂದಿಗೆ ನಡೆಸಿದ ಸಂದರ್ಶನವನ್ನು ಕನ್ನಡ ಓದುಗರಿಗಾಗಿ ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ

ಕೃಪೆ: ದಿ ಹಿಂದು
ಅನುವಾದ: ನಿಖಿಲ್ ಕೋಲ್ಪೆ

ಪ್ರಶ್ನೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಎಡವಟ್ಟಾದುದು ಎಲ್ಲಿ?

ಕಾಂಗ್ರೆಸ್‌ನ ಉದ್ದೇಶ ಬಿಜೆಪಿಯನ್ನು ಹೊರಗಿಡುವುದಾಗಿತ್ತು; ಆದರೆ, ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಒಗ್ಗಿಕೊಳ್ಳಲಿಲ್ಲ. ಸ್ಪರ್ಧೆ ಅವರ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ಇತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ನೋಡುವುದು ಅವರಿಗೆ ಕಷ್ಟವಾಗಿತ್ತು. ಅವರಿಗೆ ನೋವಾಗಿತ್ತು, ಸಿಟ್ಟೂ ಬಂದಿತ್ತು. ಮೈಸೂರಿನಲ್ಲಿ (ಚಾಮುಂಡೇಶ್ವರಿ) ತನ್ನ ಸೋಲಿನ ಬಳಿಕ ಜೆಡಿಎಸ್ ಪಕ್ಷವನ್ನು ನಾಶಗೊಳಿಸುವ ಅವರ ನಿರ್ಧಾರ ಇನ್ನಷ್ಟು ಬಲವಾಯಿತು.

ಪ್ರಶ್ನೆ: ಸಮ್ಮಿಶ್ರ ಸರಕಾರದ ವೈಫಲ್ಯಕ್ಕೆ ನೀವು ಸಿದ್ದರಾಮಯ್ಯ ಒಬ್ಬರನ್ನೇ ಹೊಣೆಮಾಡುತ್ತೀರಾ?

ಮೈತ್ರಿ ಸರಕಾರದ ಕುರಿತು ನಿರ್ಧಾರಕ್ಕೆ ಬರುವ ಮೊದಲು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಜೊತೆ ಸಮಾಲೋಚನೆ ನಡೆಸಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ನನ್ನ ಮತ್ತು ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಹೊಣೆ ಎಂದು ಅವರ ಸ್ವಂತ ಬೆಂಬಲಿಗರೇ (ಬಂಡುಕೋರ ಕಾಂಗ್ರೆಸಿಗರು) ಬಹಿರಂಗವಾಗಿ ಹೇಳಿದ್ದಾರೆ. ನಮ್ಮ ವಿರುದ್ದ ಕೆಲಸ ಮಾಡಿದ ಕಾಂಗ್ರೆಸಿಗರಿಗೆ ಅವರು ನೋಟೀಸು ನೀಡಿದ್ದರೆಯೆ? ಕಾಂಗ್ರೆಸ್ ಒಳಗೆಯೇ ಈಗ ಸಿದ್ದರಾಮಯ್ಯರನ್ನು ಪ್ರಶ್ನಿಸಬಲ್ಲವರಾಗಲೀ, ಅವರ ವಿರುದ್ದ ಸ್ಪರ್ಧಿಸುವವರಾಗಲೀ ಯಾರೂ ಇಲ್ಲ.

ಪ್ರಶ್ನೆ: ಅವರು ಅದನ್ನು ಮಾಡಿದ್ದಾದರೂ ಏಕೆ?

ಸಿದ್ದರಾಮಯ್ಯ ಅವರ ಗುರಿ ಎಂದರೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ, ತಾನು ಪ್ರತಿಪಕ್ಷದ ನಾಯಕನಾಗುವುದು. ಅವರು ಮತ್ತು ಯಡಿಯೂರಪ್ಪ ಹಿಂದೆ ಜೊತೆಯಲ್ಲಿ ಕೆಲಸ ಮಾಡಿದ್ದಿದೆ. ಬಳ್ಳಾರಿಗೆ ಪಾದಯಾತ್ರೆ (ಅಕ್ರಮ ಗಣಿಗಾರಿಕೆ ವಿರುದ್ಧ) ಹೋದದ್ದು ಬಿಟ್ಟರೆ, ಪ್ರತಿಪಕ್ಷ ನಾಯಕರಾಗಿ ಅವರು ಬೇರೇನು ಮಾಡಿದ್ದಾರೆ? ಯಡಿಯೂರಪ್ಪ ಸರಕಾರದ ವಿರುದ್ಧ ಹೋರಾಟ ಮಾಡಿದವರು ಯಾರು? ನಿಜವಾದ ಹೋರಾಟಗಾರ ಕುಮಾರಸ್ವಾಮಿ. ಸಿದ್ದರಾಮಯ್ಯ ಕೇವಲ ಮೆಲ್ನೋಟಕ್ಕೆ ಮಾತ್ರ ಇದ್ದಂತೆ ತೋರಿಸಿದರು.

ಪ್ರಶ್ನೆ: ಆದರೆ ಅವರು ಒಂದು ದಶಕಕ್ಕೂ ಹಿಂದೆ ಪಕ್ಷದಿಂದ ಹೊರಹೋದಾಗಿನಿಂದಲೇ ಜೆಡಿಎಸ್‌ಗೆ ವಿರೋಧವಿದ್ದಾರೆ ಅಲ್ಲವೇ?

ಸಿದ್ದರಾಮಯ್ಯ ಜೆಡಿಎಸ್‌ಗೆ ಹಾನಿ ಮಾಡಲು ಬಯಸುತ್ತಾರೆ ಎಂಬುದು ಹೊಸ ವಿಷಯವಲ್ಲ. 2016ರ ರಾಜ್ಯಸಭಾ ಚುನಾವಣೆಯ ವೇಳೆ ನಮ್ಮ ಎಂಟು ಶಾಸಕರನ್ನು ಅವರು ಹೊತ್ತೊಯ್ದಿದ್ದರು. ವಾಸ್ತವವಾಗಿ ನಮ್ಮ ಪಕ್ಷಕ್ಕೆ ಹಾನಿ ಮಾಡುವ ಅವರ ಕಾರ್ಯಾಚರಣೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೆರವಿನೊಂದಿಗೆ 2004ರಲ್ಲಿಯೇ ಆರಂಭವಾಗಿತ್ತು. ಅಹಿಂದ ಸಮಾವೇಶಗಳಲ್ಲಿ ಎನ್. ಧರಂಸಿಂಗ್ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಕಾಂಗ್ರೆಸ್ ನಾಯಕರು ನನ್ನ ಮೇಲೆ ದಾಳಿ ನಡೆಸಿದರು; ಮತ್ತಾಗ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದರು. ಇದು ಜೆಡಿಎಸ್‌ನಿಂದ ಅವರ ಉಚ್ಛಾಟನೆಗೆ ಕಾರಣವಾಯಿತು….

ನಾನು 1996ರಲ್ಲಿ ಪ್ರಧಾನಮಂತ್ರಿ ಆಗಲು ದಿಲ್ಲಿಗೆ ಹೋದಾಗ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಅವರು ಕೋಪಗೊಂಡಿದ್ದರು; ಮತ್ತೊಮ್ಮೆ 2004ರಲ್ಲಿ ಸಮ್ಮಿಶ್ರ ಸರಕಾರ ರಚನೆಯಾದಾಗ. 2004ರಲ್ಲಿ ನಾನು ಅವರನ್ನು ಮುಖ್ಯಮಂತ್ರಿ ಮಾಡಲು ಎಷ್ಟೊಂದು ಪ್ರಯತ್ನಪಟ್ಟೆ ಎಂಬುದನ್ನು ಕಾಂಗ್ರೆಸ್‌ನ ತಾತ್ಕಾಲಿಕ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರಿಗಾಗಿ ನಾನು- ತನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಬೇಕೆಂಬ ಎಸ್.ಎಂ. ಕೃಷ್ಣ ಅವರ ಮನವಿಯನ್ನೂ ಒಪ್ಪಿಕೊಂಡಿರಲಿಲ್ಲ.

ಪ್ರಶ್ನೆ: ಪರಿಣಾಮ ಏನಾಗಿತ್ತು?

ನಮ್ಮನ್ನು ನಾಶಮಾಡಲು ಅವರು ಮಾಡಿದ ಪ್ರಯತ್ನದ ಪರಿಣಾಮವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 130ರಿಂದ 79ಕ್ಕೆ ಕುಸಿಯಿತು. ಶಾದಿಭಾಗ್ಯ ಮತ್ತು ಬಾಕಿ ಎಲ್ಲಾ ಭಾಗ್ಯಗಳಿಗೆ ಏನಾಯಿತು? ಅಹಿಂದಕ್ಕೆ ಏನಾಯಿತು? ಅವರಿಂದ ತಪ್ಪುದಾರಿಗಿಳಿದ ರಾಹುಲ್ ಗಾಂಧಿ ನಮ್ಮನ್ನು ಹಾಸನದಲ್ಲಿ ಬಿಜೆಪಿಯ ಬಿ. ಟೀಮ್ ಎಂದು ಕರೆದರು. ಪರಿಣಾಮವಾಗಿ ಹಾಸನ ಬಿಜೆಪಿ ಪರವಾಯಿತು ಮತ್ತು ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಮೊದಲ ಬಾರಿಗೆ 14 ಸ್ಥಾನಗಳನ್ನು ಗೆದ್ದಿತು. ಇವತ್ತು ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ನುಸುಳಲು ಪ್ರಯತ್ನಿಸುತ್ತಿದೆ ಎಂದರೆ, ಮತ್ತೆ ಅವರ ಕಾರಣದಿಂದ. ಅವರು ಪರೋಕ್ಷವಾಗಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನು (ಸುಮಲತಾ) ಮಂಡ್ಯದಲ್ಲಿ ಬೆಂಬಲಿಸಿದರು.

ಪ್ರಶ್ನೆ: ಇತ್ತೀಚೆಗೆ ನೀವವರನ್ನು ಸಂಪರ್ಕಿಸಲು ಯತ್ನಿಸಿದ್ದೀರಾ?

ನನ್ನನ್ನು ನಂಬಿ,  ಮೈತ್ರಿ ಸರಕಾರ ಆದ ಮೇಲೆ ನಾನು ಅವರಲ್ಲಿ ಹೋಗಿ, ಎರಡು ಸಲ ರಾಜ್ಯದಲ್ಲಿ ಜಂಟಿ ಯಾತ್ರೆ ಮಾಡೋಣ ಎಂದು ವಿನಂತಿದೆ. ಹಿಂದಿನದ್ದು ಮರೆಯೋಣ ಎಂದೆ. ಆದರೂ ಏನೂ ಆಗಲಿಲ್ಲ.

ಪ್ರಶ್ನೆ: ಸದ್ಯಕ್ಕೆ ಕಾಂಗ್ರೆಸ್ ಜೊತೆ ನಿಮ್ಮ ಹೊಂದಾಣಿಕೆ ಏನು? ಒಂದುವೇಳೆ ಉಪಚುನಾವಣೆ ನಡೆದರೆ, ಎರಡೂ ಪಕ್ಷಗಳು ಜೊತೆಗೆ ಬರುತ್ತವೆಯೆ?

ಕಾಂಗ್ರೆಸ್ ಜೊತೆ ಯಾವುದೇ ಸಂಪರ್ಕ ಇಲ್ಲ. ಕುಮಾರಸ್ವಾಮಿ ಕೂಡಾ ಹಾಗೆ ಮಾಡುತ್ತಾರೆ ಎಂದು ನನಗನಿಸುವುದಿಲ್ಲ. ಸಿದ್ದರಾಮಯ್ಯ ಹೇಳುವುದೇನೆಂದರೆ ದೇವೇಗೌಡರ ಜೊತೆ ಹೋಗಿ ತಾವು ಸೋತೆವು ಎಂದು. (ನಗು) ಯಾವುದೇ ಸ್ಥಳೀಯ ನಾಯಕರು ಮಾತನಾಡಲು ಸಿದ್ಧರಿಲ್ಲ. ಸಿದ್ದರಾಮಯ್ಯ ಅವರು ಬಲಪ್ರದರ್ಶನ ಮಾಡಲು ಬಯಸುತ್ತಿದ್ದಾರೆ. ಆದರೆ, ಸೋನಿಯಾ ಗಾಂಧಿಯವರು ಉಪಚುನಾವಣೆಯಲ್ಲಿ ಸ್ಥಾನ ಹಂಚಿಕೆ ವಿಷಯ ಮಾತನಾಡಿದರೆ, ಅದು ಬೇರೆಯೇ ವಿಷಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ? ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿಯುತ್ತಿತಾ ತಿಳಿದುಕೊಂಡಿರುವಂತಿದೆ…family politics dangerous to democracy

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...