ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸ್ಟಾಕ್ ಬ್ರೋಕರ್ ಒಬ್ಬರು ಕೇಳಿದ ಪ್ರಶ್ನೆಗೆ ಸೂಕ್ತವಾದ ಉತ್ತರ ನೀಡದೆ ನಗಾಡುವ ಮೂಲಕ ತಮಾಷೆಯಾಗಿ ಪರಿಗಣಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಪ್ರತಿಪಕ್ಷ ನಾಯಕರು ಮತ್ತು ಸಾರ್ವಜನಿಕರು ಕಿಡಿಕಾರಿದ್ದಾರೆ.
ಮಂಗಳವಾರ ನಡೆದ ಬಿಎಸ್‌ಇಯ ‘ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಸ್ಟಾಕ್ ಮಾರ್ಕೆಟ್ ಬ್ರೋಕರ್‌ಗಳ ಮೇಲೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಭಾರತ ಸರ್ಕಾರ ವಿಧಿಸುತ್ತಿರುವ ಹಲವು ತೆರಿಗೆಗಳ ಬಗ್ಗೆ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಬ್ರೋಕರ್ ಪ್ರಶ್ನಿಸಿದ್ದರು. “ನಾನು ಎಲ್ಲಾ ಹೂಡಿಕೆ ಮಾಡುತ್ತೇನೆ, ಎಲ್ಲಾ ಸಂಕಷ್ಟಗಳನ್ನು ಎದುರಿಸುತ್ತೇನೆ. ಆದರೆ, ನನ್ನ ಸಂಪೂರ್ಣ ಲಾಭವನ್ನು ಭಾರತ ಸರ್ಕಾರ ಪಡೆಯುತ್ತಿದ್ದೆ. ಇಷ್ಟೊಂದು ತೆರಿಗೆಗಳೊಂದಿಗೆ ಬ್ರೋಕರ್ ಒಬ್ಬರು ಹೇಗೆ ಕಾರ್ಯಾಚರಿಸಬಹುದು? ಇಲ್ಲಿ ‘ಸರ್ಕಾರ ನನ್ನ ಸ್ಲೀಪಿಂಗ್ ಪಾರ್ಟ್‌ನರ್ ಮತ್ತು ನಾನು ಯಾವುದೇ ಆದಾಯವಿಲ್ಲದ ವರ್ಕಿಂಗ್ ಪಾರ್ಟ್‌ನರ್’ ರೀತಿ ಆಗಿದ್ದೇನೆ” ಎಂದಿದ್ದರು.
Nirmala Sitharaman reaction, 'out of syllabus question aa gaya' pic.twitter.com/Ljh1PXekVx
— Gabbar (@Gabbar0099) May 16, 2024
ನಂತರ ಎರಡನೇ ಪ್ರಶ್ನೆಯನ್ನು ಮುಂದುವರಿಸಿದ ಅವರು, “ಇಂದು, ಯಾರಾದರೂ ಮುಂಬೈನಲ್ಲಿ ಮನೆ ಖರೀದಿಸಲು ಬಯಸಿದರೆ ಅದು ದುಃಸ್ವಪ್ನವಾಗಿದೆ. ಏಕೆಂದರೆ ನನ್ನ ಬಳಿ ಬಿಳಿ ಹಣವಿದೆ ಎಂದು ನಾನು ತೆರಿಗೆ ಪಾವತಿಸುತ್ತಿದ್ದೇನೆ. ಈಗ ನಾವು ಎಲ್ಲವನ್ನೂ ಚೆಕ್ ಮೂಲಕ ಪಾವತಿಸಬೇಕಾಗಿದೆ. ಭಾರತ ಸರ್ಕಾರಕ್ಕೆ ಎಲ್ಲಾ ತೆರಿಗೆಗಳನ್ನು ಪಾವತಿಸಿದ ನಂತರ ಉಳಿದ್ದದ್ದು ನನ್ನ ಬ್ಯಾಂಕ್ ಬ್ಯಾಲೆನ್ಸ್ ಆಗಿದೆ. ಮನೆಯನ್ನು ಖರೀದಿಸುವಾಗ ಭಾರತ ಸರ್ಕಾರಕ್ಕೆ ಎಲ್ಲಾ ತೆರಿಗೆಗಳನ್ನು ಪಾವತಿಸಿದ ನಂತರವೂ, ನಾನು ಸ್ಟ್ಯಾಂಪ್ ಡ್ಯೂಟಿ, ಜಿಎಸ್‌ಟಿ ಪಾವತಿಸಬೇಕು. ಮನೆ ಖರೀದಿಸುವಾಗ ಸುಮಾರು 11 ಶೇಖಡಾ ನನ್ನ ಜೇಬಿನಿಂದ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಸಂಪನ್ಮೂಲ ಹೊಂದಿರುವ ವ್ಯಕ್ತಿಗೆ ಮನೆ ಖರೀದಿಸಲು ಹೇಗೆ ಸಹಾಯ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದರು.
ವಿತ್ತ ಸಚಿವರು ಆರಂಭದಲ್ಲಿ “ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ” ಎಂದು ಹೇಳಿ ಜಾರಿಕೊಂಡಿದ್ದರು. ಬಳಿಕ “ನಾನು ಸ್ಲೀಪಿಂಗ್ ಪಾರ್ನರ್ ಆದರೆ ಇಲ್ಲಿ ಕುಳಿತು ಉತ್ತರಿಸಲು ಸಾಧ್ಯವಿಲ್ಲ” ಎಂದು ತಮಾಷೆಯಾಗಿ ನಕ್ಕಿದ್ದಾರೆ. ಈ ಮೂಲಕ ಗಂಭೀರ ಪ್ರಶ್ನೆಯೊಂದಕ್ಕೆ ಉತ್ತರಿಸಬೇಕಿದ್ದ ವಿತ್ತ ಸಚಿವರು ವರ್ತಿಸಿದ ರೀತಿಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ “ಸಾರ್ವಜನಿಕರಿಗೆ ತೆರಿಗೆಯಿಂದ ತೊಂದರೆಯಾಗಿದೆ. ಮೋದಿ ಸರ್ಕಾರದ ಮಂತ್ರಿಗಳು ನಗುತ್ತಿದ್ದಾರೆ” ಎಂದು ಹೇಳಿದೆ.
जनता टैक्स से परेशान है। मोदी सरकार की मंत्री मुस्कुरा रही हैं। pic.twitter.com/jZebycuu8A
— Congress (@INCIndia) May 16, 2024
ಇದನ್ನೂ ಓದಿ : ಕಾಂಗ್ರೆಸ್-ಎಸ್‌ಪಿ ಅಧಿಕಾರಕ್ಕೆ ಬಂದರೆ ರಾಮ್ ಲಲ್ಲಾನನ್ನು ಟೆಂಟ್‌ನಲ್ಲಿ ಹಾಕುತ್ತಾರೆ: ಹಳೆ ಹೇಳಿಕೆ ಪುನರುಚ್ಛರಿಸಿದ ಮೋದಿ


