Homeಕರ್ನಾಟಕಸುಳ್ಳು ಕೇಸುಗಳಿಂದ ಸಂಪೂರ್ಣ ಖುಲಾಸೆಯಾದ ನೂರ್‌ ಶ್ರೀಧರ್‌ರವರ ಮನದಾಳದ ಮಾತುಗಳು

ಸುಳ್ಳು ಕೇಸುಗಳಿಂದ ಸಂಪೂರ್ಣ ಖುಲಾಸೆಯಾದ ನೂರ್‌ ಶ್ರೀಧರ್‌ರವರ ಮನದಾಳದ ಮಾತುಗಳು

- Advertisement -
- Advertisement -

ಇಲ್ಲಿಗೆ ನಾನು ಹಳೆಯ ಅಜ್ಞಾತದಿಂದ ಹೊರಬಂದು ಹೆಚ್ಚು ಕಡಿಮೆ ಐದು ವರ್ಷಗಳಾಗುತ್ತಿವೆ . 2014ರ ಡಿಸೆಂಬರ್‌ನಲ್ಲಿ ಹೊರಗೆ ಬಂದೆ. ಮುಖ್ಯವಾಗಿ ನಾವು ಮುಖ್ಯವಾಹಿನಿಗೆ ಬರಲು ಪ್ರಮುಖವಾಗಿ ಸರ್ಕಾರ ಮತ್ತು ನಮ್ಮ ಮಧ್ಯೆ ಇದ್ದು ಕೆಲಸ ಮಾಡಿದ ಸ್ವತಂತ್ರ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಹಿರಿಯರಾದ ನಮ್ಮ ನಡುವೆ ಈಗ ಇಲ್ಲದ ಪತ್ರಕರ್ತೆ ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯನವರು ಕಾರಣವಾಗಿದ್ದಾರೆ.

ಇವರು ನಾವು ಮುಖ್ಯವಾಹಿನಿಗೆ ಬರಲು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸಭೆಯಲ್ಲಿ ಬಹಳ ಸಮರ್ಥವಾಗಿ ನಮ್ಮ ಮೇಲೆ ಹಾಕಿದ ಕೇಸುಗಳು ಸುಳ್ಳು ಕೇಸುಗಳು ಎಂದು ವಾದಿಸಿದ್ದರು. ನಮ್ಮ ಮೇಲೆ ಹಾಕಿರುವಂತಹ ಕೇಸುಗಳು 2006ರ ನಂತರದ್ದಾಗಿದೆ. ಆದರೆ ಅಷ್ಟೋತ್ತಿಗಾಗಲೆ ನಾವು ಸಂಘಟನೆ ತೊರೆದಿದ್ದೆವು. ನಾವು ಇದ್ದ ಪಕ್ಷವು ಸಹ ನಾವು ಪಕ್ಷ ಬಿಟ್ಟು ಬಂದ ಬಗ್ಗೆ ಅಧಿಕೃತ ಹೇಳಿಕೆ ಪ್ರಕಟಿಸಿತ್ತು. ಆದರೆ ಪೋಲಿಸರು ಮಾತ್ರ ಬೇರೆ ಬೇರೆ ಕೇಸುಗಳಲ್ಲಿ ನಮ್ಮ ಹೆಸರನ್ನು ಸುಮ್ಮನೆ ಸೇರಿಸಿತ್ತು.

ಸಾಕೇತ್ ರಾಜನ್ ಹತ್ಯೆಯಾದ ನಂತರ ರಾಜ್ಯ ಸಮಿತಿಯ ನಾಯಕತ್ವವನ್ನು ನಾನು ವಹಿಸಬೇಕೆಂಬ ಮಾತು ಬಂದಾಗ ನಾನು ಈ ಹೋರಾಟದಲ್ಲಿ ಭಿನ್ನಾಭಿಪ್ರಾಯವಿದ್ದುದರಿಂದ ಅದಕ್ಕೆ ಒಪ್ಪಲಿಲ್ಲ. ಇದು ಹೇಗೋ ಮಾಹಿತಿ ಮಾಧ್ಯಮಗಳವರೆಗೂ ಬಂದು ಆಗಲೇ ನೂರ್ ಶ್ರೀಧರ್ ಎಂಬ ವ್ಯಕ್ತಿ ಇದಾನೆ ಅನ್ನುವುದು ಗೊತ್ತಾಗಿದ್ದು. ಅಲ್ಲಿಯವರೆಗೂ ಪೋಲಿಸರಿಗೂ ಸಹ ಈ ವಿಷಯ ಗೊತ್ತಿರಲಿಲ್ಲ. ನಾನು ಪಕ್ಷ ಬಿಟ್ಟರೂ ಕೂಡ ಹೇಗೆ ನನ್ನ ಸುಳ್ಳು ಕೇಸ್‍ಗಳು ದಾಖಲಾಗುತ್ತವೆ ಎನ್ನುವುದನ್ನು ಈ ಪ್ರಕರಣ ಸೂಚಿಸುತ್ತದೆ.

ಒಬ್ಬ ಯಾವುದೋ ಪ್ರಕರಣದಲ್ಲಿ ಕಾಣಿಸಿಕೊಂಡರೆ ಸಾಕು ಏನಾದರೂ ಘಟನೆ ನಡೆದಾಗ ಮನಸೋ ಇಚ್ಚೆ ಪೋಲಿಸರು ಇಂತಹ ಕೇಸುಗಳಲ್ಲಿ ಅನುಮಾನ ಬಂದವರನ್ನೆಲ್ಲ ಸೇರಿಸುತ್ತಾ ಹೋಗುತ್ತಾರೆ. ಈ ಮಾದರಿ ಬದಲಾಗಬೇಕಿದೆ. ನಮ್ಮ ಸ್ನೇಹಿತ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಕೇಸು ಕೂಡ ಹಾಗೆ ಆಗಿದೆ.

ನರಸಿಂಹ ಮೂರ್ತಿಯವರು ಎಲ್ಲಾ ಸಂಘಟನೆಗಳ ಹೋರಾಟಗಳಿಗೂ ಬೆಂಬಲಿಸುತ್ತಿದ್ದರು. ಆದರೆ ಅವರಿಗೂ ನಕ್ಸಲ್ ಹೋರಾಟಕ್ಕೂ ನಂಟೇ ಇರಲಿಲ್ಲ. ಆದರೆ ನರಸಿಂಹ ಮೂರ್ತಿಯವರನ್ನು ಈಗ ಈ ರೀತಿ ಅನುಮಾನಿಸಲಾಗುತಿದೆ. ನರಸಿಂಹಮೂರ್ತಿಯವರು ಎಲ್ಲರ ಕಣ್ಣಮುಂದೆಯೇ ದೊಡ್ಡ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೂ ಅವರನ್ನು ತಲೆಮರೆಸಿಕೊಂಡಿದ್ದವರು ಎಂದು ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಇದೆಲ್ಲ ಸರ್ಕಾರ ನಡೆದುಕೊಳ್ಳುತ್ತಿರುವ ತಪ್ಪು ಮಾದರಿಯಾಗಿದೆ.

ನರಸಿಂಹ ಮೂರ್ತಿಯವರಿಗೆ ಒಂದು ಕುಟುಂಬವಿದೆ. ಆತನ ವ್ಯಾಪಾರ ವಹಿವಾಟು ಆರ್ಥಿಕ ಬಿಕ್ಕಟ್ಟನ್ನ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದಿಂದ ಈ ರೀತಿ ಮಾಡುವುದು ಬರಿ ತಪ್ಪಲ್ಲ ದೊಡ್ಡ ಅಫರಾದವಾಗಿದೆ. ಇದ್ಕಕ್ಕೆ ಕರ್ನಾಟಕದ ನೆಲದಲ್ಲಿ ಬರುತ್ತಿರುವ ಪ್ರತಿರೋಧ, ಹೋರಾಟ ಎಲ್ಲಾ ಪ್ರಜಾತಾಂತ್ರಿಕ ದನಿಗಳು ನರಸಿಂಹಮೂರ್ತಿಯವರ ಜೊತೆ ನಿಂತುಕೊಂಡಿವೆ. ಈ ದನಿಯೇ ನಾವು ಮುಖ್ಯವಾಹಿನಿಗೆ ಬರಲು ಕೂಡ ಕಾರಣವಾದದ್ದು.

ಪ್ರಜಾತಾಂತ್ರಿಕ ಅವಕಾಶಗಳನ್ನ ಉಳಿಸಿಕೊಳ್ಳಲಿಕ್ಕೆ ಸುಧೀರ್ಘವಾದ ಸಂಘರ್ಷ ಮಾಡಲು ನಾವು ಸಿದ್ದರಿದ್ದೇವೆ. ನನ್ನ ಮೇಲೂ ಕೂಡ ಮುಂದೆ ಸುಳ್ಳು ಕೇಸುಗಳು ಮತ್ತೆ ಬೀಳಬಹುದು. ಅದರ ಬಗ್ಗೆ ನನಗೆ ಅನುಮಾನವೇ ಇಲ್ಲ. ಆದರೆ ಪ್ರಜಾತಾಂತ್ರಿಕ ದನಿ ಕರ್ನಾಟಕದಲ್ಲಿದೆ ಇದೇ ಹಾದಿಯೇಲ್ಲಿ ದಿಟ್ಟವಾದ ಹೋರಾಟವನ್ನು ಮುಂದುವರೆಸಬೇಕು ಅಂದುಕೊಂಡಿದ್ದೇನೆ.

ಸಾಕಷ್ಟು ಜನಕ್ಕೆ ಈ ಸಂಧರ್ಭದಲ್ಲಿ ಕೃತಜ್ಞತೆ ಹೇಳಬೇಕು, ಪಟ್ಟಿ ದೊಡ್ಡದಿದೆ. ಜಿ,ರಾಜಶೇಖರ್ ಅಂತಹವರು ಸಹ ನನ್ನ ಬೆಂಬಲಕ್ಕೆ ನಿಂತು ಪ್ರತಿ ಕೇಸಿದ್ದಾಗಲೂ ನಮ್ಮ ಜೊತೆ ಆರೋಪಿಯ ರೀತಿ ಬಂದು ಕೋರ್ಟ್‍ಲ್ಲಿ ನಿಂತಿದ್ದಾರೆ, ನನ್ನ ಕೇಸಿಗೆ ಬೇಲ್‌ ಕೊಟ್ಟಿದ್ದಾರೆ. ತುಂಬಾ ಜನ ನಮ್ಮ ಜೊತೆಗೆ ನಿಂತಿದ್ದಾರೆ ಈ ಎಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು ಮತ್ತು ಒಂದು ದೊಡ್ಡ ಸಲಾಂ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...