ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಕಳಂಕ ತರುವ ಉದ್ದೇಶದಿಂದ ವದಂತಿಗಳು ಮತ್ತು ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಪೊಲೀಸರು ಸೋಮವಾರ ಏಳು ಸಾಮಾಜಿಕ ಮಾಧ್ಯಮ ಖಾತೆದಾರರು/ಬಳಕೆದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ
ವದಂತಿಗಳು ಮತ್ತು ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಏಳು ಸಾಮಾಜಿಕ ಮಾಧ್ಯಮ ಖಾತೆದಾರರು/ಬಳಕೆದಾರರ ವಿರುದ್ಧ ಮೇಳ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ (ಕುಂಭಮೇಳ) ರಾಜೇಶ್ ದ್ವಿವೇದಿ ದೃಢಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಕರಣದ ತನಿಖೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸೈಬರ್ ಅಪರಾಧ ಮತ್ತು ಮೇಳದ ಪೊಲೀಸರ ಜಂಟಿ ತಂಡಕ್ಕೆ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ, ಕುಟುಂಬ ಸದಸ್ಯರು ಮೂರು ಶವಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊಂದು ವೈರಲ್ ಆಗಿದೆ, ಇದು ತಪ್ಪಾಗಿ ಬಿಂಬಿಸುವ ವೀಡಿಯೊವಾಗಿದ್ದು, ಈ ನಕಲಿ ವೀಡಿಯೊವನ್ನು ಖಾತೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿಕೊಂಡಿದ್ದಾರೆ.
ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ ಮತ್ತು ಕುಟುಂಬವು ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಅವರ ಮನೆಗೆ ಶವವನ್ನು ಈ ರೀತಿಯಾಗಿ ಸಾಗಿಸಬೇಕಾಯಿತು ಎಂದು ಬಳಕೆದಾರರು ಆರೋಪಿಸಿದ್ದಾರೆ.
“ಮೌತ್ ಕಾ ಮಹಾಕುಂಭ” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಬಳಕೆದಾರರು ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಶವಗಳನ್ನು ಅವರ ಸ್ವಂತ ಮನೆಗೆ ಸಾಗಿಸಲು ಕನಿಷ್ಠ ಒಂದು ಆಂಬ್ಯುಲೆನ್ಸ್ ಕೂಡಾ ಒದಗಿಸಿಲ್ಲ ಎಂದು ಪ್ರತಿಪಾದಿಸಲಾಗಿದೆ. ಆದಾಗ್ಯೂ, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ಆ ವೀಡಿಯೊ ವರ್ಷಗಳಷ್ಟು ಹಳೆಯದಾಗಿದ್ದು, ನೇಪಾಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಕಂಡುಬಂದಿದೆ.
ಅಪರಿಚಿತ ವ್ಯಕ್ತಿಗಳು ಮೂತ್ರಪಿಂಡವನ್ನು ಹೊರತೆಗೆದು ಶವವನ್ನು ನದಿಗೆ ಎಸೆದಿದ್ದಾರೆ ಎಂದು ಪ್ರತಿಪಾದಿಸುವ ವೀಡಿಯೊವನ್ನು ಮತ್ತೊಬ್ಬ ಸಾಮಾಜಿಕ ಮಾಧ್ಯಮ ಖಾತೆದಾರರ ಅಪ್‌ಲೋಡ್ ಮಾಡಿದ್ದಾರೆ ಎಂದು ಅವರ ವಿರುದ್ಧ ಮೇಳ ಪೊಲೀಸರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಖಾತೆದಾರರ ಗುರುತುಗಳು ಮತ್ತು ಕುಂಭಮೇಳವನ್ನು ದೂಷಿಸುವ ಹಿಂದಿನ ಅವರ ಉದ್ದೇಶಗಳನ್ನು ಕಂಡುಹಿಡಿಯಲು ಜಂಟಿ ತಂಡವು ಕೆಲಸ ಮಾಡುತ್ತಿದೆ ಎಂದು ಎಸ್‌ಎಸ್‌ಪಿ ದ್ವಿವೇದಿ ಹೇಳಿದರು. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
“ಮೇಳ ಪೊಲೀಸರು ಎಲ್ಲಾ ಪ್ರಕರಣಗಳನ್ನು ಕೂಲಂಕಷವಾಗಿ ತನಿಖೆ ಮಾಡುತ್ತಾರೆ” ಎಂದು ದ್ವಿವೇದಿ ಹೇಳಿದದ್ದಾರೆ. “ಬಸಂತ್ ಪಂಚಮಿಯ ಮೂರನೇ ಅಮೃತ ಸ್ನಾನಕ್ಕೆ ಮುಂಚಿತವಾಗಿ ಈ ನಕಲಿ ವೀಡಿಯೊಗಳನ್ನು ಏಕೆ ಅಪ್‌ಲೋಡ್ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಈ ಪ್ರಕರಣಗಳನ್ನು ತೀವ್ರವಾಗಿ ತನಿಖೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಬಾಬಾ ರಾಮ್‌ದೇವ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್


