Homeಮುಖಪುಟಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಅಪರ್ಣಾ ಯಾದವ್‌‌ ಸೇರ್ಪಡೆ ಬಿಜೆಪಿಗೆ ಬಲ ತರುತ್ತದೆ ಎಂದು ಅನೇಕ ಕನ್ನಡ ಮಾಧ್ಯಮಗಳು ವರದಿ ಮಾಡಿವೆ. ಆದರೆ ಯೂಪಿ ರಾಜ್ಯದಾಚೆಗೆ ತಿಳಿಯಬೇಕಾದ ಅನೇಕ ಸಂಗತಿಗಳಿವೆ.

- Advertisement -
- Advertisement -

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು ವೆಬ್‌ಸೈಟ್‌, ಪತ್ರಿಕೆಗಳು ವರದಿ ಮಾಡಿವೆ. ಸಾಮಾನ್ಯವಾಗಿ ಬಹುತೇಕ ಮಾಧ್ಯಮಗಳು, “ಮುಲಾಯಂ ಸಿಂಗ್ ಯಾದವ್ ಅವರ ಮಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮಲ ಸಹೋದರ ಪ್ರತೀಕ್ ಯಾದವ್ ಅವರ ಪತ್ನಿಯೇ ಅಪರ್ಣಾ ಯಾದವ್. ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ ಪ್ರತೀಕ್ ಯಾದವ್. ಅಖಿಲೇಶ್ ಯಾದವ್ ಮೊದಲ ಪತ್ನಿ ಮಗ” ಎಂದು ವರದಿ ಮಾಡಿವೆ. (ಕನ್ನಡ ನ್ಯೂಸ್‌ ವೆಬ್‌ಸೈಟ್‌ಗಳ ವರದಿಗಳನ್ನು ಗಮನಿಸಬಹುದು.)

ಇದರ ಜೊತೆಗೆ ಅಪರ್ಣಾ ಸಿಂಗ್ ಯಾದವ್ ಅವರ ಪರಿಚಯವನ್ನು ವರದಿಗಳಲ್ಲಿ ಗಮನಿಸಬಹುದು. “ರಾಷ್ಟ್ರದ ಸೇವೆಗಾಗಿ ಬಿಜೆಪಿ ಸೇರಿದ್ದೇನೆ” ಎಂದು ಅಪರ್ಣಾ ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೀತಿಗಳಿಂದ ಪ್ರಭಾವಿತಳಾಗಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

“ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯುಪಿಯ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳುವ ವಿಚಾರಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಅವರ ನೀತಿಗಳು ಏನೇ ಇರಲಿ, ನಾನು ಅದಕ್ಕೆ ಬದ್ಧಳಾಗಿದ್ದೇನೆ” ಎಂದು ಇಂಡಿಯಾ ಟುಡೇಗೆ ಅಪರ್ಣಾ ತಿಳಿಸಿದ್ದಾರೆ.

ಅಪರ್ಣಾ ಯಾದವ್ ಅವರ ತಂದೆ ಅರವಿಂದ್ ಸಿಂಗ್ ಬಿಶ್ತ್ ಪತ್ರಕರ್ತರಾಗಿದ್ದಾರೆ. ಅವರ ತಾಯಿ ಲಕ್ನೋ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಅಧಿಕಾರಿ.

ಅಪರ್ಣಾ ಯಾದವ್ ಲಕ್ನೋದ ಲೊರೆಟೊ ಕಾನ್ವೆಂಟ್ ಶಾಲೆಯ ಹಳೆಯ ವಿದ್ಯಾರ್ಥಿ. ಅವರು UKಯ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಿಂದ ‘ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ’ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಪರ್ಣಾ ಮತ್ತು ಪ್ರತೀಕ್ 2010ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್ 2011ರಲ್ಲಿ ವಿವಾಹವಾದರು.

ರಾಜಕಾರಣಿಯಾಗಿರುವುದರ ಹೊರತಾಗಿ, ಅಪರ್ಣಾ ಯಾದವ್ ಶಾಸ್ತ್ರೀಯ ಗಾಯಕಿಯೂ ಹೌದು. ಅವರು ಲಕ್ನೋದ ಭಾತಖಂಡೆ ಸಂಗೀತ ವಿಶ್ವವಿದ್ಯಾಲಯದಲ್ಲಿ ಒಂಬತ್ತು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ಮಾಡಿದ್ದಾರೆ.

ವರದಿಗಳ ಪ್ರಕಾರ, ಅಪರ್ಣಾ ಯಾದವ್ ಅವರು 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದಾರೆ. ಅಖಿಲೇಶ್ ಯಾದವ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ಇಚ್ಛಿಸಲಿಲ್ಲ. ಹೀಗಾಗಿ ಅಪರ್ಣಾ ಯಾದವ್ ಬಿಜೆಪಿಯತ್ತ ಮುಖ ಮಾಡಿದರು.

ಲಕ್ನೋ ಕ್ಯಾಂಟ್ ಬಿಜೆಪಿಯ ಭದ್ರಕೋಟೆ: ಲಕ್ನೋ ಕ್ಯಾಂಟ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಹೇಳಲಾಗುತ್ತಿದೆ. 2017ರ ಯುಪಿ ಚುನಾವಣೆಯಲ್ಲಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಗೆಲುವು ಸಾಧಿಸಿದ್ದರು. ಇದಾದ ನಂತರ ಆದ ಉಪಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ತಿವಾರಿ ಶಾಸಕರಾದರು.

ಲಕ್ನೋ ಕ್ಯಾಂಟ್ ಬ್ರಾಹ್ಮಣ ಪ್ರಾಬಲ್ಯದ ಪ್ರದೇಶವಾಗಿದೆ. ಕ್ಷೇತ್ರದಲ್ಲಿ ಕನಿಷ್ಠ 1 ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ. ಸಿಂಧಿ-ಪಂಜಾಬಿ ಮತದಾರರು ಈ ಪ್ರದೇಶದಲ್ಲಿ ಎರಡನೇ ಪ್ರಬಲ ಸಮುದಾಯವಾಗಿದ್ದರೆ, ಮುಸ್ಲಿಮರು ಸುಮಾರು 25,000 ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಯಾದವ ಸಮುದಾಯದ 20,000 ಹಾಗೂ ಠಾಕೂರ್ ಸಮುದಾಯದ 15,000 ಮತಗಳಿವೆ.

ಇಷ್ಟು ಮಾತ್ರ ಓದಿಕೊಂಡರೆ ಅಪರ್ಣಾ ಯಾದವ್‌ ಅವರು ಬಿಜೆಪಿಗೆ ಬಲ ತುಂಬುತ್ತಾರೆಂದೂ, ಎಸ್‌ಪಿಯಲ್ಲಿ ಬಂಡಾಯ ಉಂಟಾಗಿದೆ ಎಂದೂ ಭಾವಿಸುವ ಸಾಧ್ಯತೆಗಳಿರುತ್ತವೆ. ಅಪರ್ಣಾ ಯಾದವ್‌ ಅವರು ಬಿಜೆಪಿಗೆ ಸೇರಿದ್ದರಿಂದ ಸಮಾಜವಾದಿ ಪಾರ್ಟಿಗೆ ದೊಡ್ಡ ಪ್ರಮಾಣದ ನಷ್ಟವೇನೂ ಆಗದು ಎಂದು ರಾಜಕೀಯ ವಿಶ್ಲೇಷಕರು ಊಹಿಸುತ್ತಾರೆ. ಯುಪಿಯಾಚೆಗೆ ಅಷ್ಟಾಗಿ ಚರ್ಚೆಯಾಗದ ಸಂಗತಿಯೊಂದು ಅಖಿಲೇಶ್‌ ಪರ ಜನಮತ ತರುವ ಸಾಧ್ಯತೆಯನ್ನು ರಾಜಕೀಯ ಚಿಂತಕರು ಉಲ್ಲೇಖಿಸುತ್ತಾರೆ.

ಇದನ್ನೂ ಓದಿರಿ: ಯೋಗಿ ಆದಿತ್ಯನಾಥ್ ಸರ್ಕಾರ ಕ್ರಿಮಿನಲ್‌ಗಳೊಂದಿಗೆ ಜೈಲ್‌-ಜೈಲ್ ಆಟವಾಡುತ್ತಿದೆ: ನರೇಂದ್ರ ಮೋದಿ

ಅಪರ್ಣಾ ಸೇರ್ಪಡೆ ಬಿಜೆಪಿಗೆ ಬಲವೇ?

ಅಪರ್ಣಾ ಸಿಂಗ್‌ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಎಂಬುದು ನಿರ್ವೀವಾದ. ಇದರ ಜೊತೆಗೆ ಅಪರ್ಣಾ ಅವರ ಪತಿ ಪ್ರತೀಕ್ ಅವರ ಕುರಿತೂ ತಿಳಿದುಕೊಳ್ಳಬೇಕಾಗುತ್ತದೆ.

1987ರಲ್ಲಿ ಜನಿಸಿದ ಪ್ರತೀಕ್ ಯಾದವ್ ಅವರಿಗೆ ಈಗ 34 ವರ್ಷ ವಯಸ್ಸು. ಪ್ರತೀಕ್‌ ಅವರು ಮುಲಾಯಂ ಸಿಂಗ್ ಯಾದವ್ ಅವರ ಮಲ ಮಗ ಮತ್ತು ಅಖಿಲೇಶ್ ಯಾದವ್ ಅವರ ಮಲ ಸಹೋದರ. ಮುಲಾಯಂ ಸಿಂಗ್ ತಮ್ಮ ಮೊದಲ ಪತ್ನಿ ನಿಧನರಾದ ಬಳಿಕ ಎರಡನೇ ಮದುವೆಯಾಗುತ್ತಾರೆ. ಸಾಧನಾ ಗುಪ್ತ ಅವರನ್ನು ಮುಲಾಯಂ ಸಿಂಗ್ ಯಾದವ್ ಮದುವೆಯಾಗುವ ಮುನ್ನ ಸಾಧನಾ ಗುಪ್ತ ಅವರಿಗೆ ಮೊದಲನೇ ವಿವಾಹವಾಗಿರುತ್ತದೆ. ಸಾಧನಾ ಗುಪ್ತಾ ಹಾಗೂ ಚಂದ್ರ ಗುಪ್ತಾ ಅವರಿಗೆ ಜನಿಸಿದವರು ಪ್ರತೀಕ್‌. ಸಾಧನಾ ಗುಪ್ತಾ ಅವರು 23, ಮೇ 2003ರಂದು ಮುಲಾಯಂ ಸಿಂಗ್ ಅವರನ್ನು ವಿವಾಹವಾಗುತ್ತಾರೆ.

ಮುಲಾಯಂ ಸಿಂಗ್‌ ಯಾದವ್ ಹಾಗೂ ಸಾಧನಾ ಗುಪ್ತಾ

ಹೀಗಾಗಿ ಅಪರ್ಣಾ ಯಾದವ್‌ ಅವರು ಬಿಜೆಪಿಗೆ ಸೇರಿದ ಸಂಗತಿ ಉತ್ತರ ಪ್ರದೇಶದಾಚೆಗೆ ಅತಿದೊಡ್ಡ ವಿದ್ಯಮಾನದಂತೆ ಕಂಡರೂ ಯುಪಿಯ ಗಡಿಯೊಳಗಿನ ಚರ್ಚೆಗಳೇ ಬೇರೆ ಎಂದು ಮೂಲಗಳು ಹೇಳುತ್ತದೆ.


ಇದನ್ನೂ ಓದಿರಿ: ಯೋಗಿ ವಿರುದ್ಧ ಗೋರಕ್‌ಪುರ ಕ್ಷೇತ್ರದಿಂದ ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಸ್ಪರ್ಧೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಕ್ಕಮಾಯಾವತಿಯವರ ಬಹುಜನ ಸಮಾಜ ಪಕ್ಷದ ಇತ್ತೀಚಿನ ಉತ್ತರ ಪ್ರದೇಶದಲ್ಲಿನ ಸಮೀಕ್ಷೆಯನ್ನು ಎಲ್ಲಾ ಮನುವಾದಿ ಮಾಧ್ಯಮಗಳು ಮರೆಮಾಚುತ್ತವೆ ನೀವು ಕೂಡ ಮಾಯಾವತಿಯವರ ಪಕ್ಷದ ಬಗ್ಗೆ ಮಾಹಿತಿಯನ್ನೂ ಕ್ರೋಡೀಕರಿಸಿ ಒಂದು ಅಂಕಣವನ್ನು ಬರೆಯಬೇಕಾಗಿ ಮನವಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...