ಸ್ಥಳೀಯರ ತೀವ್ರ ವಿರೋಧ ಮತ್ತು ಈ ಹಿಂದಿನ ಸರ್ಕಾರವು ಯೋಜನೆಗಳಿಗೆ ಹೇಗೆ ಅನುಮೋದನೆ ನೀಡಿತು ಎಂಬ ವಿಚಾರದಲ್ಲಿ ಹೆಚ್ಚಿದ ಪರಿಶೀಲನೆಯ ನಂತರ, ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯು ಶ್ರೀಲಂಕಾದಲ್ಲಿನ ತನ್ನ ಪವನ ಶಕ್ತಿ ಯೋಜನೆ ಮತ್ತು ಎರಡು ಪ್ರಸರಣ ಯೋಜನೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ. ತೀವ್ರ ಪ್ರತಿಭಟನೆ ಹಿನ್ನಲೆ
ಈ ಕ್ರಮವನ್ನು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರಿಗೆ ರಾಜಕೀಯ ವಿಜಯವೆಂದು ಪರಿಗಣಿಸಲಾಗಿದ್ದು, ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ತೀವ್ರ ಪ್ರತಿಭಟನೆ ಹಿನ್ನಲೆ
“ಶ್ರೀಲಂಕಾದಲ್ಲಿ ಆರ್‌ಇ ಪವನ ಶಕ್ತಿ ಯೋಜನೆ ಮತ್ತು ಎರಡು ಪ್ರಸರಣ ಯೋಜನೆಗಳಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವಿಕೆಯಿಂದ ಗೌರವಯುತವಾಗಿ ಹಿಂದೆ ಸರಿಯುವ ತನ್ನ ಮಂಡಳಿಯ ನಿರ್ಧಾರವನ್ನು ಅದಾನಿ ಗ್ರೀನ್ ಎನರ್ಜಿ ತಿಳಿಸಿದೆ. ಆದಾಗ್ಯೂ, ನಾವು ಶ್ರೀಲಂಕಾಕ್ಕೆ ಬದ್ಧರಾಗಿದ್ದು, ಶ್ರೀಲಂಕಾ ಸರ್ಕಾರ ಬಯಸಿದರೆ ಭವಿಷ್ಯದ ಸಹಯೋಗಕ್ಕೆ ಮುಕ್ತರಾಗಿದ್ದೇವೆ” ಎಂದು ಅದಾನಿ ಗ್ರೂಪ್ ವಕ್ತಾರರು ಗುರುವಾರ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಧ್ಯಕ್ಷ ದಿಸಾನಾಯಕೆ ನೇತೃತ್ವದ ಶ್ರೀಲಂಕಾದ ಸಚಿವ ಸಂಪುಟವು ಅದಾನಿ ಗ್ರೂಪ್‌ನೊಂದಿಗಿನ ವಿದ್ಯುತ್ ಖರೀದಿ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಸರ್ಕಾರವು ಒಪ್ಪಂದವನ್ನು ರದ್ದುಗೊಳಿಸಿದ್ದು, ಸಂಪೂರ್ಣ ಯೋಜನೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದೆ ಎಂದು ಶ್ರೀಲಂಕಾದ ಇಂಧನ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಶ್ರೀಲಂಕಾದ ಮನ್ನಾರ್ ಮತ್ತು ಪೂನೆರಿನ್ ಕರಾವಳಿ ಪ್ರದೇಶಗಳಲ್ಲಿ 484 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜಿಸಲಾದ ಪವನ ವಿದ್ಯುತ್ ಯೋಜನೆಗೆ ಮೇ 2024 ರಲ್ಲಿ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಆಡಳಿತದಲ್ಲಿ ಸಹಿ ಹಾಕಲಾಗಿತ್ತು.
ಈ ಒಪ್ಪಂದವು ಪ್ರತಿ kWh ಗೆ USD 0.0826 ವಿದ್ಯುತ್ ಖರೀದಿ ದರವನ್ನು ನಿಗದಿಪಡಿಸಿತು. ಈ ದರವು ಸ್ಥಳೀಯ ಬಿಡ್ಡರ್‌ಗಳು ನೀಡುವ ದರಗಳಿಗಿಂತ ಭಾರಿ ಹೆಚ್ಚಿನ ದರವಾಗಿದೆ. ಈ ಬೆಲೆ ವ್ಯತ್ಯಾಸವು ಸ್ಥಳೀಯ ಬಿಡ್ಡರುಗಳು ಮತ್ತು ಜನರಿಂದ ಭಾರಿ ಟೀಕೆ ಮತ್ತು ಪ್ರತಿರೋಧ ಉಂಟಾಗಿತ್ತು.
ವನ್ಯಜೀವಿ, ಪ್ರಕೃತಿ ಸಂರಕ್ಷಣಾ ಸೊಸೈಟಿ ಮತ್ತು ಪರಿಸರ ಪ್ರತಿಷ್ಠಾನ ಸೇರಿದಂತ ಹಲವಾರು ಪರಿಸರ ಸಂಘಟನೆಗಳು ಈ ಯೋಜನೆಯನ್ನು ತೀವ್ರವಾಗಿ ಆಕ್ಷೇಪಿಸಿದ್ದವು. ಈ ಯೋಜನೆಯಿಂದ ವಲಸೆ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಸಮರ್ಪಕ ಪರಿಸರ ಪರಿಣಾಮ ಮೌಲ್ಯಮಾಪನ (EIA) ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಮನ್ನಾರ್‌ನ ಬಿಷಪ್ ನೇತೃತ್ವದ ಸ್ಥಳೀಯ ಸಮುದಾಯಗಳು ಸಹ ಯೋಜನೆಯನ್ನು ಪ್ರತಿಭಟಿಸಿ, ಯೋಜನೆಯು ಕೈಗಾರಿಕೆಗಳನ್ನು ಅಡ್ಡಿಪಡಿಸಲಿದ್ದು, ಜನರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದರು.
ಕಳೆದ ವರ್ಷ ನವೆಂಬರ್‌ನಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಏಳು ಜನರ ವಿರುದ್ಧ ಲಂಚದ ಆರೋಪದ ಮೇಲೆ ಅಮೆರಿಕದ ಇಲಾಖೆಯೊಂದು ದೋಷಾರೋಪಣೆ ಮಾಡಿತ್ತು. ಇದರ ನಂತರ, ಶ್ರೀಲಂಕಾದಲ್ಲಿ ಕಂಪನಿಯ ಕಾರ್ಯಾಚರಣೆಗಳನ್ನು ಪರಿಶೀಲಿಸಲಾಗುತ್ತಿತ್ತು. ಈ ವೇಳೆ ಅದಾನಿ ಗ್ರೂಪ್‌ನ ಪವನ ಶಕ್ತಿ ಯೋಜನೆಯ ಭ್ರಷ್ಟಾಚಾರ ಹೊರಬಂದಿತ್ತು. ಅದಾಗ್ಯೂ, ಅಮೆರಿಕದ ಆರೋಪವನ್ನು ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸಿದ್ದು, ಅವುಗಳನ್ನು ಆಧಾರರಹಿತ ಎಂದು ಕರೆದಿದೆ.
ಪವನ ಶಕ್ತಿ ಮತ್ತು ಪ್ರಸರಣ ಯೋಜನೆಗಳಿಂದ ಹಿಂದೆ ಸರಿದಿದ್ದರೂ, ಅದಾನಿ ಗ್ರೂಪ್ ಶ್ರೀಲಂಕಾ ಬಂದರು ಪ್ರಾಧಿಕಾರ (SLPA) ಮತ್ತು ಜಾನ್ ಕೀಲ್ಸ್ ಹೋಲ್ಡಿಂಗ್ಸ್‌ನ ಸಹಭಾಗಿತ್ವದಲ್ಲಿ ಕೊಲಂಬೊ ಬಂದರಿನಲ್ಲಿ ವೆಸ್ಟ್ ಕಂಟೇನರ್ ಟರ್ಮಿನಲ್ ನಿರ್ಮಾಣವನ್ನು ಮುಂದುವರೆಸಿದೆ.
ಯೋಜನೆಯನ್ನು ಔಪಚಾರಿಕವಾಗಿ ರದ್ದುಗೊಳಿಸಲಾಗಿಲ್ಲ ಮತ್ತು ಸರ್ಕಾರದ ನಿರ್ಧಾರವು “ಪ್ರಮಾಣಿತ ಪರಿಶೀಲನಾ ಪ್ರಕ್ರಿಯೆಯ” ಭಾಗವಾಗಿದೆ ಎಂದು ಅದಾನಿ ಗ್ರೂಪ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಶ್ರೀಲಂಕಾದ ಹಸಿರು ಇಂಧನ ವಲಯದಲ್ಲಿ 1 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ಕಂಪನಿಯು ಉಳಿಸಿಕೊಂಡಿದೆ.
ಇದನ್ನೂಓದಿ: ಸಿದ್ದರಾಮಯ್ಯ ಬಗ್ಗೆ ಸುಳ್ಳು ಸುದ್ದಿ – ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್
ಸಿದ್ದರಾಮಯ್ಯ ಬಗ್ಗೆ ಸುಳ್ಳು ಸುದ್ದಿ – ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್


