Homeಕರ್ನಾಟಕಶೃಂಗೇರಿ: ಅಡಿಕೆ ಆಮದು ನೀತಿ, ಅರಣ್ಯ ಕಾಯ್ದೆಯ ಕಿರುಕುಳ ಖಂಡಿಸಿ ಪ್ರತಿಭಟನೆ

ಶೃಂಗೇರಿ: ಅಡಿಕೆ ಆಮದು ನೀತಿ, ಅರಣ್ಯ ಕಾಯ್ದೆಯ ಕಿರುಕುಳ ಖಂಡಿಸಿ ಪ್ರತಿಭಟನೆ

- Advertisement -
- Advertisement -

ಚಿಕ್ಕಮಗಳೂರು: ಸುಂಕರಹಿತ ಭೂತಾನ್ ಅಡಿಕೆ ಆಮದು ನೀತಿಯನ್ನು ತಕ್ಷಣವೇ ಹಿಂಪಡೆಯಬೇಕು. ಎಲೆ ಚುಕ್ಕಿ, ಹಳದಿ ಎಲೆರೋಗದ ಸಂಶೋಧನೆಗಾಗಿ ಸರ್ಕಾರ ವಿಜ್ಞಾನಿಗಳ ಕಾರ್ಯಪಡೆ ರಚಿಸಬೇಕು ಹಾಗೂ ರೈತರಿಗೆ ಮಾರಕವಾಗಿರುವ ಅರಣ್ಯ ಕಾಯ್ದೆಯ ಸೆಕ್ಷನ್‌ 4(1) ರದ್ದು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘಟನೆ ನೇತೃತ್ವದಲ್ಲಿ ಶೃಂಗೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಶೃಂಗೇರಿ ಬಸ್‌ಸ್ಟಾಂಡ್‌ನಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಗಿದ್ದು, “ನಮ್ಮನ್ನಾಳುವ ಸರ್ಕಾರಗಳು ನಿರಂತರವಾಗಿ ಕೃಷಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಸಂಕಷ್ಟದಿಂದ ನರಳುತ್ತಿರುವ ರೈತಾಪಿ ಜನ, ಕೂಲಿಕಾರ್ಮಿಕರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಇದರ ಪರಿಣಾಮಗಳು ಎಲ್ಲ ಜನವರ್ಗಕ್ಕೂ ತಟ್ಟುತ್ತದೆ. ಈ ಜನವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳಬೇಕು” ಎಂದು ಆಗ್ರಹಿಸಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಲೆನಾಡಿನ ಜನರ ಕೈಯಲ್ಲಿ ಒಂದಷ್ಟು ಹಣ ಓಡಾಡುತ್ತಿದೆ ಎಂದರೆ ಅದಕ್ಕೆ ಕಾರಣ ಅಡಿಕೆ ಎಂಬ ವಾಣಿಜ್ಯ ಬೆಳೆ. ಇದಕ್ಕೆ ಎಷ್ಟು ಮೌಲ್ಯವಿತ್ತೋ ಅಷ್ಟೇ ಕಂಟಕ ಮೊದಲಿನಿಂದಲೂ ಎದುರಾಗಿದೆ. ಈಗ ಎದುರಾಗಿರುವ ಎಲೆ ಚುಕ್ಕಿ ರೋಗ ಬೆಳೆಗಾರರನ್ನು ಸಂಪೂರ್ಣ ನಿರ್ನಾಮ ಮಾಡಲು ಹೊರಟಿದೆ. ಅದರ ಜೊತೆಗೆ ಆಮದು ನೀತಿಯನ್ನು ರೂಪಿಸಿ ಸಂಕಷ್ಟಕ್ಕೆ ಸಿಲುಕಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

“ಎಲೆ ಚುಕ್ಕಿ, ಹಳದಿ ಎಲೆ ರೋಗದ ಸಂಶೋಧನೆಗಾಗಿ ತಕ್ಷಣವೇ ಸರ್ಕಾರ ವಿಜ್ಞಾನಿಗಳ ಕಾರ್ಯಪಡೆ ರಚಿಸಬೇಕು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯು ರೈತರ ಭೂಮಿಯ ಮಣ್ಣು ಪರೀಕ್ಷೆ ಸೇರಿದಂತೆ ವೈಜ್ಞಾನಿಕ ಪರಿಹಾರಗಳ ಮತ್ತು ಉಪಯೋಗದ ಬಗ್ಗೆ ರೈತರಿಗೆ ಮಾಹಿತಿ ಕೊಡಬೇಕು” ಎಂದು ಒತ್ತಾಯಿಸಲಾಯಿತು.

ಕೊಳೆ ರೋಗ, ಎಲೆ ಚುಕ್ಕಿ ರೋಗದಿಂದ ಬಾಧಿತರಾದ ಎಲ್ಲಾ ರೈತರಿಗೂ ಪರಿಹಾರ ಕೊಡಬೇಕು. ಹಾಗೂ ಕಾರ್ಮಿಕ ಮತ್ತು ಬಡ ಕುಟುಂಬಕ್ಕೆ ವಿವಿಧ ಪ್ಯಾಕೇಟ್ ಘೋಷಿಸಬೇಕು. ಎಲ್ಲಾ ಮಂಜೂರಾತಿ ಹಾಗೂ ಅಭಿವೃದ್ಧಿ ಕೆಲಸಕ್ಕೆ ಮಾರಕವಾದ ಅರಣ್ಯ ಕಾಯ್ದೆಯ ಸೆಕ್ಷನ್ 4(1) ಹಾಗೂ ಇತರೆ ಅರಣ್ಯ ಕಾಯ್ದೆಗಳು ರದ್ದಾಗಬೇಕು. ಸುಂಕರಹಿತ ಭೂತಾನ್ ಅಡಿಕೆ ಆಮದು ನೀತಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು.

ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರಾತಿ ಮಾಡಬೇಕು. ಎಲ್ಲಾ ಹಳ್ಳಿಗಳ ರಸ್ತೆಗಳನ್ನು (ವೈಜ್ಞಾನಿಕವಾಗಿ, ಪರಿಸರಕ್ಕೆ ಪೂರಕವಾಗಿ) ದುರಸ್ಥಿಗೊಳಸಬೇಕು. ರೈತರ ಖಾತೆಗೆ ಜಮಾ ಆಗಬೇಕಿದ್ದ ಪಸಲ್ ಭೀಮಾ ವಿಮಾ ಯೋಜನೆಯ ಹಣವನ್ನು ಪೂರ್ಣ ಪ್ರಮಾಣದಲ್ಲಿ ತಕ್ಷಣವೇ ಬಿಡುಗಡೆ ಮಾಡಿ ಸರ್ಕಾರವೇ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಸಂಘಟನೆ ತಿಳಿಸಿದೆ.

ಪ್ರತಿಭಟನೆಯಲ್ಲಿ ಆದಿವಾಸಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಕಲ್ಕುಳಿ ವಿಠಲ್ ಹೆಗ್ಡೆ, ಜನಶಕ್ತಿ ರಾಜ್ಯ ಕಾರ್ಯದರ್ಶಿ ಸುರೇಶ್, ಕರ್ನಾಟಕ ಜನಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್, ಜಿಲ್ಲಾ ಸಮಿತಿ ಗೌರವ ಅಧ್ಯಕ್ಷರಾದ ರಾಧಾ, ಕೌಳಿ ರಾಮು, ಹಾಗಲಾಗಂಚಿ ವೆಂಕಟೇಶ್, ಸರೋಜಾ, ಆನಂದ್, ರೈತ ಮುಖಂಡರಾದ ಕಂಬಳಗೆರೆ ರಾಜೇಂದ್ರ, ನವೀನ್ ಕರ್ವಾಲೆ ಇತರರು ಹಾಜರಿದ್ದರು.

ಏತಕ್ಕಾಗಿ ಈ ಹೋರಾಟ? ಸಂಘಟನೆ ಹೇಳುವುದೇನು?

ಕೊಳೆರೋಗವು ನಿನ್ನೆ ಮೊನ್ನೆ ಜನ್ಮ ತಾಳಿದವುಗಳಲ್ಲ. ಇದಕ್ಕೆ ಕಾರಣ ತೇವಾಂಶ ಜಾಸ್ತಿಯಾಗುವಿಕೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗೆ ಮನುಷ್ಯರಂತೆ ಸಕಲ ಜಲಚರ ಸಸ್ಯಗಳಿಗೂ ಮಾರಕ ರೋಗಗಳು ಬಾಧಿಸುತ್ತಲೇ ಇರುತ್ತವೆ.

ನಮ್ಮನ್ನಾಳುವ ಸರ್ಕಾರಗಳು ಈ ರೋಗದ ಬಗ್ಗೆ ನಿರಂತರವಾದ ಸಂಶೋಧನೆ ನಡೆಸಿ, ಬಾಧೆಗೊಳಗಾದ ಜನರಿಗೆ ಅವಶ್ಯಕ ಸಲಹೆ ಸೂಚನೆ, ಔಷಧಿ, ಪರಿಹಾರಗಳನ್ನು ನೀಡಬೇಕಿತ್ತು. ಅದನ್ನು ಬಿಟ್ಟು, ರೈತರ ಬಗ್ಗೆ ಒಂದಿನಿತೂ ಕಾಳಜಿಯಿಲ್ಲದ ಸರ್ಕಾರಗಳು ಇನ್ನಷ್ಟು ಕೃಷಿ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಉತ್ಸುಕವಾಗಿದೆ. ತೊಂಡೆರೋಗ, ಎಲೆ ಚುಕ್ಕಿ ರೋಗ, ಕೊಳೆ ರೋಗದ ಸಮಸ್ಯೆ ತಾಂಡವವಾಡುತ್ತಿದೆ. ಈಗ ಕೇಂದ್ರ ಸರ್ಕಾರ ಭೂತನ್ ಅಡಿಕೆಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ತಯಾರಿ ನಡೆಸಿದೆ. ಇದು ಇಲ್ಲಿನ ರೈತರ ಬದುಕಿಗೆ ಹಾಗೂ ಮಲೆನಾಡಿನ ಆರ್ಥಿಕ ಚಟುವಟಿಕೆಗೆ ಕೊಡಲಿ ಪೆಟ್ಟು ಕೊಡಲಿದೆ. 17,000 ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಹುನ್ನಾರದ ಹಿಂದೆ ಅಮಿತ್‌ ಶಾ ಮಗ ಜೈ ಶಾ, ಹಾಗೂ ಕ್ಯಾಂಪ್ಪೋ ಅಧ್ಯಕ್ಷರ ಮಗನ ಸಹಯೋಗದಲ್ಲಿ ನಡೆಯುತ್ತಿರುವ “ಗಣೇಶ್ ಟ್ರೇಡಿಂಗ್” ಎಂಬ ಕಂಪನಿಯ ಕೈಗಳಿವೆ, ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ನಮ್ಮ ದೇಶದಲ್ಲಿ ಲಕ್ಷಾಂತರ ಎಕರೆ ಅಡಿಕೆ ತೋಟಗಳಿವೆ. 70 ಲಕ್ಷಕ್ಕೂ ಹೆಚ್ಚು ಅಡಿಕೆ ಕೃಷಿ ಕುಟುಂಬಗಳಿವೆ. ಹಾಗೆ ಇದನ್ನು ನಂಬಿ ತಮ್ಮ ಬದುಕನ್ನು ಕಟ್ಟಿಕೊಂಡ ಕೋಟ್ಯಂತರ ಕೂಲಿ ಕಾರ್ಮಿಕರಿದ್ದಾರೆ. ಸರ್ಕಾರ ಈ ಸುಂಕರಹಿತ ಆಮದು ನೀತಿಯಿಂದ ಹತ್ತಾರು ಕೋಟಿ ಕುಟುಂಬಗಳನ್ನು ಬೀದಿಗೆ ತಳ್ಳಲಿದೆ. ಮಲೆನಾಡ ಹಾಗೂ ಇತರೆ ಪ್ರದೇಶದ ಬೀದಿ ವ್ಯಾಪಾರಿಗಳು, ದಲ್ಲಾಳಿ ವ್ಯಾಪಾರಿಗಳು, ದಿನಸಿ ಅಂಗಡಿ ವ್ಯಾಪಾರಸ್ಥರಿಗೂ ಈ ನೀತಿ ದೊಡ್ಡ ಹೊಡೆತ ಕೊಡಲಿದೆ. ಅಷ್ಟೇ ಅಲ್ಲದೇ, ಮಿತ್ರರಾಷ್ಟ್ರವಾದ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುವ ನೆಪದಲ್ಲಿ ಹಿಂಬಾಗಿಲಿನಿಂದ ಬರ್ಮಾ ದೇಶದ ಅಡಿಕೆ ತರಿಸುವ ಸಾಧ್ಯತೆಯೇ ಹೆಚ್ಚು.

ಇದನ್ನೂ ಓದಿರಿ: ‘ಹಿಂದೂ’ ಪದ ವಿವಾದ: ಬಹಿರಂಗ ಚರ್ಚೆಗೆ ಸತೀಶ್‌ ಜಾರಕಿಹೊಳಿ ಪಂಥಾಹ್ವಾನ- ಏನಂದರು ಜನ?

ಭೂತಾನ್ ನಿಂದ ಭಾರತಕ್ಕೆ ಸಮುದ್ರ ಮಾರ್ಗವಿಲ್ಲ. ಬರ್ಮಾದಿಂದ ಕೊಲ್ಕತ್ತಾಗೆ ಸಮುದ್ರ ಮಾರ್ಗವಿದೆ ಮತ್ತು ಈ ಬಂದರಿನಲ್ಲಿ ಸುಂಕವಿಲ್ಲ. ಅಂದ್ರೆ ಭೂತಾನ್ ಅಡಿಕೆಯ ಹೆಸರಿನಲ್ಲಿ ಬರ್ಮಾ ದೇಶದ ಅಡಿಕೆ ನಮ್ಮ ದೇಶಕ್ಕೆ ಕಳ್ಳ ಮಾರ್ಗದಲ್ಲಿ ಬರುವುದರಲ್ಲಿ ಸಂಶಯವಿಲ್ಲ. ಅದರ ಪ್ರಮಾಣ ಕೂಡ 17,000 ಟನ್‌ಗೆ ಬದಲಾಗಿ ಲಕ್ಷಾಂತರ ಟನ್ ಭಾರತದ ಮಾರುಕಟ್ಟೆಯನ್ನು ಆವರಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಸುಳ್ಳಿನ ಕವಚದೊಳಗೆ ರೈತರ ಮತ್ತು ಆರ್ಥಿಕ ವಹಿವಾಟಿನ ನೋವಿನ ಬದುಕಿದೆ. ಇದನ್ನು ಪ್ರಜ್ಞಾವಂತ ಜನರು ಬೀದಿಗಿಳಿದು ವಿರೋಧಿಸಬೇಕಲ್ಲವೇ?

ಹಾಗೆಯೇ ಮಲೆನಾಡಿನ ಜನರನ್ನು ಬಿಟ್ಟುಬಿಡದೆ ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಮತ್ತೊಂದು ಅರಣ್ಯ ಕಾಯ್ದೆಗಳು. ಇದರ ಭಾಗವಾಗಿ ಎಲ್ಲೆಡೆಯು ಜನರನ್ನ ಬಾಧಿಸುತ್ತಿರುವುದು ಸೆಕ್ಷನ್ 4(1). ಕಂದಾಯ ಭೂಮಿಯನ್ನು ಕರಾಳ ಸೆಕ್ಷನ್‌ಗಳ ಅಡಿಯಲ್ಲಿ ಮೀಸಲು ಅರಣ್ಯ ಮಾಡುವ ಹುನ್ನಾರವಿದೆ. ಈ ಕಾಡನ್ನು ನಂಬಿ ಬದುಕು ಕಟ್ಟಿಕೊಂಡವರು ಸಾವಿರಾರು ಜನ ಇವತ್ತಿಗೂ ನೂರಾರು ವರ್ಷಗಳಿಂದ ಅಲ್ಲಿ ಬದುಕುತ್ತಿದ್ದರೂ, ತಾನು ನಿಂತ ನೆಲ ನನ್ನದೇ ಎಂದು ಹೇಳಲು ಸಾಧ್ಯವಿಲ್ಲ ಅನ್ನುವ ಸ್ಥಿತಿ ಉಂಟಾಗಿದೆ. ಜೀವ ಭದ್ರತೆಗಾಗಿ ಒಂದು ಅಧಿಕೃತ ದಾಖಲಾತಿ ಇಲ್ಲವಾಗಿದೆ. 94ಸಿ, 94ಸಿಸಿ, 5 ಮಂಜೂರಾತಿಗಾಗಿ ವಿವಿಧ ಫಾರಂ ಹಾಕಿಕೊಂಡು ಆದೇಶಕ್ಕಾಗಿ ಭರವಸೆಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಎಲ್ಲದಕ್ಕೂ ಈ ಕಾಯ್ದೆಗಳನ್ನು ನೆಪವಾಗಿಟ್ಟುಕೊಂಡು, ಜನರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಈ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...