Homeಕರ್ನಾಟಕರೈತ ಹೋರಾಟ ಮಾದರಿಯಲ್ಲೇ ಕಾರ್ಮಿಕ ಹೋರಾಟಕ್ಕೆ ವೇದಿಕೆ ಸಜ್ಜು!

ರೈತ ಹೋರಾಟ ಮಾದರಿಯಲ್ಲೇ ಕಾರ್ಮಿಕ ಹೋರಾಟಕ್ಕೆ ವೇದಿಕೆ ಸಜ್ಜು!

ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಡಿಸೆಂಬರ್‌ 19ರ ಭಾನುವಾರದಂದು ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ‘ಕಾರ್ಮಿಕರ ಬೃಹತ್‌ ಹಕ್ಕೊತ್ತಾಯ ರ್‍ಯಾಲಿ’ ನಡೆಯಲಿದೆ.

- Advertisement -
- Advertisement -

ರೈತ ಆಂದೋಲನದ ಮುಂದೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಯೂರಿದ ಬೆನ್ನಿಗೆ ಪ್ರಬಲ ಕಾರ್ಮಿಕ ಆಂದೋಲನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕಾರ್ಮಿಕ ಸಂಘಟನೆಗಳ ಒಕ್ಕೂಟವಾದ, “ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ(MASA)” ಅಡಿಯಲ್ಲಿ ಡಿಸೆಂಬರ್‌ 19ರ ಭಾನುವಾರದಂದು ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ “ಕಾರ್ಮಿಕರ ಬೃಹತ್‌ ಹಕ್ಕೊತ್ತಾಯ ರ್‍ಯಾಲಿ” ನಡೆಯಲಿದೆ.

“ಕ್ರೌರ್ಯಕ್ಕೆ ಕರುಣೆ ಎಂದು, ಸುಲಿಗೆಗೆ ಸುಧಾರಣೆ ಎಂದು, ದಮನ ದಬ್ಬಾಳಿಕೆಗಳಿಗೆ ದಯಾ ದಾಕ್ಷಿಣ್ಯವೆಂದು, ದೇಶ ಮಾರಾಟವನ್ನು ಅಪ್ಪಟ ದೇಶ ಪ್ರೇಮವೆಂದು ಬಿಂಬಿಸುವ ಮೋದಿ ಆಳ್ವಿಕೆಯಡಿ ನಾವಿದ್ದೇವೆ” ಎಂದು MASA ಹೇಳಿದ್ದು, ವಂಚಕ ಮತ್ತು ಕ್ರೂರ ಆಳುವ ವಿಧಾನ ಈ ದೇಶದ ಜನಸಾಮಾನ್ಯರನ್ನು ವಿಶೇಷವಾಗಿ ದುಡಿವ ಜನರ ಬದುಕನ್ನು ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಬೆಂಗಳೂರು: ಕನಿಷ್ಠ ವೇತನಕ್ಕೆ ಆಗ್ರಹಿಸಿ ಪೌರಕಾರ್ಮಿಕರ ಬೃಹತ್ ಪ್ರತಿಭಟನೆ

“ಕೃಷಿರಂಗ ಮತ್ತು ರೈತಾಪಿ ವರ್ಗವನ್ನು ಕಾರ್ಪೊರೇಟ್‌ ಕೃಷಿ ಕಂಪನಿಗಳಿಗೆ ಬಲಿಕೊಡುವ ಉದ್ದೇಶದಿ೦ದ ತರಲಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಮೋದಿ ಸರ್ಕಾರ ಮಹಾನ್‌ ಕ್ರಾಂತಿ ತರಲಿರುವ ಕಲ್ಯಾಣ ಕಾಯಿದೆಗಳೆಂದು ಬಣಿಸಿತ್ತು. ಆದರೆ ದೇಶದ ರೈತರು ತಮ್ಮ ಅಚಲವಾದ ಧೀರ್ಫಕಾಲಿನ ಸಾಮೂಹಿಕ ಹೋರಾಟದಿಂದ ಈ ಕಾಯಿದೆಗಳ ಬಣ್ಣ ಬಯಲು ಮಾಡಿ ವಿಜಯಿಗಳಾಗಿದ್ದಾರೆ. ಈಗ ಅಂತಹದ್ದೆ ಅತೀ ದೊಡ್ಡ ಸವಾಲು ಭಾರತದ ಕಾರ್ಮಿಕ ವರ್ಗದ ಮುಂದಿದೆ” ಎಂದು MASA ಹೇಳಿದೆ.

“ಶತಮಾನದ ಹೋರಾಟಗಳ ಫಲವಾಗಿ ಬಂದಿದ್ದ 44 ಕೇಂದ್ರ ಕಾರ್ಮಿಕ ಕಾಯಿದೆಗಳನ್ನು ಕಿತ್ತುಹಾಕಿ 4 ಕಾರ್ಮಿಕ ಸಂಹಿತೆಗಳನ್ನು ಒಕ್ಕೂಟ ಸರಕಾರ ಜಾರಿಗೆ ತಂದಿದೆ. ಇಲ್ಲಿಯು ಕಾರ್ಮಿಕ ಕಲ್ಯಾಣದ ಘೋಷಣೆ ಮೊಳಗಿಸಲಾಗುತ್ತಿದೆ. ವಾಸ್ತವದಲ್ಲಿ ಕಾರ್ಮಿಕರಿಗಿದ್ದ ಸಂವಿಧಾನಿಕ ಹಕ್ಕುಗಳನ್ನೆಲ್ಲಾ ಕಸಿದುಕೊಳ್ಳುವ, ಕಾರ್ಮಿಕರು ಖಾಯಂ ಕೆಲಸದ ಬಗ್ಗೆ ವಿಚಾರ ಮಾಡುವುದೇ ಪ್ರಗತಿ ವಿರೋಧಿಯೆಂದು ಸಾರಿ, ‘ಉದ್ಯೋಗಿ-ಉದ್ಯೋಗದಾತ-ಸರ್ಕಾರ’ ಎಂಬ ತ್ರಿಪಕ್ಷೀಯ ಸಂಭಂದದಿಂದ ಸರ್ಕಾರ ನುಣುಚಿಕೊಂಡಿದೆ” ಎಂದು MASA ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಸಂಘ ಕಟ್ಟಿ ಹಕ್ಕು ಕೇಳಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ ಬೆಂಗಳೂರಿನ ITI ಕಂಪೆನಿ: ಕಾರ್ಮಿಕರ ಆರೋಪ- ಪ್ರತಿಭಟನೆ

“ಒಟ್ಟಾರೆ ದೇಶದ 50 ಕೋಟಿ ಕಾರ್ಮಿಕರಿಗೆ ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರ ದುಡಿಮೆಗೆ ಇದ್ದ ಕನಿಷ್ಠ ಕಾನೂನಿನ ಸಂರಕ್ಷಣೆಯನ್ನು ತೆಗೆದು ಹಾಕುವ ದುರುದ್ದೇಶ ಈ ಕಾರ್ಮಿಕ ಸಂಹಿತೆಗಳ ಹಿಂದೆ ಅಡಗಿದೆ. ಆದ್ದರಿಂದ ಕೃಷಿ ಕಾಯಿದೆಗಳನ್ನು ಹಿಂಪಡೆದಂತೆ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೇಶವ್ಯಾಪಿ ಪ್ರಬಲ ಕಾರ್ಮಿಕ ಆಂದೋಲನವನ್ನು ಕಟ್ಟಲು ‘ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ’ (Mazoor Adhikar Sangharsha Abhiyan – MASA) ಮುಂದಾಗಿದೆ” ಎಂದು MASA ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಗೈ ತುಂಬದ ಅರ್ಧ ಕೂಲಿ ಹಾಗೂ ಮುಂಗೈಗೆ ನಿಲುಕದ ಜೀವನಾಗತ್ಯ ಪದಾರ್ಥಗಳ ಬೆಲೆ ಏರಿಕೆಯ ನಡುವೆ ಕಾರ್ಮಿಕರು ನಜ್ಜುಗುಜ್ಜಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ MASA, “ಕಾರ್ಮಿಕ ಕುಟುಂಬವೊಂದು ಬದುಕುಳಿಯಬೇಕಾದರೆ ಮಾಸಿಕ 25,000 ರೂ. ಕನಿಷ್ಠ ಕೂಲಿ ಬೇಕು. ಕಾಯಂ ಸ್ವರೂಪದ ಕೆಲಸವಿದ್ದಕಡೆ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದಗೋಳಿಸಬೇಕು” ಎಂದು ಒತ್ತಾಯಿಸಿದೆ.

ಇದನ್ನೂ ಓದಿ:ಪತ್ರಕರ್ತೆ ಗೌರಿ ಲಂಕೇಶ್ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆಂಬುಲೆನ್ಸ್ ಸೇವೆ

ಕಟ್ಟಡ, ಪೌರಸೇವೆ, ಪ್ಲಾಂಟೇಶನ್‌, ಗಣಿ, ಮನೆಗೆಲಸ ಸೇರಿದಂತೆ ಹಾಗೂ ಅತ್ಯಧಿಕ ಲಾಭ ತಂದುಕೊಡುವ ಸಾರ್ವಜನಿಕ ಉದ್ದಿಮೆಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ದಿನಗೂಲಿ ಹಾಗೂ ಶಾಸನಬದ್ಧ ಹಕ್ಕುಗಳಾದ ಭವಿಷ್ಯನಿಧಿ, ನೌಕರರ ಸಾಮಾಜಿಕ ವಿಮೆ ಹಾಗೂ ಸಂರಕ್ಷಣೆ ನೀಡಬೇಕು ಎಂದು MASA ಆಗ್ರಹಿಸಿದೆ. ಜೊತೆಗೆ ವಲಸೆ ಕಾರ್ಮಿಕರು ಮತ್ತು ನೇಕಾರ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗಳನ್ನು ರಚಿಸಬೇಕೆಂದು ಅದು ಒತ್ತಾಯಿಸಿದೆ.

ಭಾರತದ ಸಂವಿಧಾನದ ಅನ್ವಯ ಕೊಡಮಾಡಲಾದ ಕಾರ್ಮಿಕ ಹಕ್ಕುಗಳ ರಕ್ಷಣೆ ಹಾಗೂ ಅವುಗಳ ಅನುಷ್ಠಾನಕ್ಕೆ ಒತ್ತಾಯಿಸಿ ದೇಶದ ವಿವಿಧ ಕಡೆ ನಿರಂತರವಾದ ಹಾಗೂ ಹೋರಾಟವನ್ನು ಮುಂದುವರಿಸುವುದರ ಭಾಗವಾಗಿ ಡಿಸೆಂಬರ್‌ 19,2021 ರಂದು ಬೆಂಗಳೂರಿನಲ್ಲಿ ಸಮಾವೇಶವನ್ನು ಸಂಘಟಸಲಾಗುತ್ತಿದೆ ಎಂದು MASA ಹೇಳಿದೆ.

ಇದನ್ನೂ ಓದಿ: 2 ತಿಂಗಳಿನಿಂದ ವೇತನವಿಲ್ಲ: ಎಐಸಿಸಿಟಿಯು ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಾರ್ಮಿಕರ ಪ್ರತಿಭಟನೆ

ಅಂದು ಬೆಳಿಗ್ಗೆ 1 ಘಂಟೆಗೆ ಬೆಂಗಳೂರು ರೈಲು ನಿಲ್ದಾಣದಿಂದ ಕಾರ್ಮಿಕರು ಮೆರವಣಿಗೆ ಮೂಲಕ ಸಾಗಿ ಫ್ರೀಡಂ ಪಾರ್ಕಿನಲ್ಲಿ ಅಧಿವೇಶನ ನಡೆಸಲಿದ್ದಾರೆ. ಈ ಬಹಿರಂಗ ಸಮಾವೇಶದಲ್ಲಿ ಪೌರ ಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು, ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಗಣಿ ಕಾರ್ಮಿಕರು, ನೇಕಾರ ಕಾರ್ಮಿಕರು, ಮನೆಗೆಲಸ ಸೇರಿದಂತೆ ಇನ್ನು ಹಲವಾರು ಕ್ಷೇತ್ರಗಳ ಶ್ರಮಜೀವಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು MASA ಹೇಳಿದೆ.

ಹಿರಿಯ ಹೈಕೋರ್ಟ್‌ ವಕೀಲರು ಹಾಗೂ ಕಾರ್ಮಿಕ ಮುಖಂಡರಾದ ಎಸ್‌ ಬಾಲನ್‌, ಟಯುಸಿಐನ ರಾಜ್ಯಾಧ್ಯಕ್ಷರಾಗಿರುವ ಆರ್‌. ಮಾನಸಯ್ಯ, ಶ್ರಮಿಕ ಶಕ್ತಿಯ ವರದರಾಜೇಂದ್ರ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಭಾಗವಹಿಸಲಿದ್ದು, ಪಶ್ಚಿಮ ಬಂಗಾಳದ ಕಾರ್ಮಿಕ ನೇತಾರರಾದ ಅಮಿತಾಬ್‌ ಬಟ್ಟಾಚಾರ್ಯ, ಮುಂಬೈಯ ಸಂಜಯ ಸಿಂಗ್ವಿ, ತೆಲಂಗಾಣದ ವೆಂಕಟೇಶ್ವರ ರಾವ್‌ ಸೇರಿದಂತೆ ಇನ್ನೂ ಹಲವು ಗಣ್ಯರು ಅಂದು ಸಮಾವೇಶವನ್ನು ಉದ್ದೇಶಿಸಿ ಮಾತಾಡಲಿದ್ದಾರೆ.

ಇದನ್ನೂ ಓದಿ:ಹೈದರಾಬಾದ್: ಪಿಯುಸಿಯಲ್ಲಿ 80% ಗಳಿಸಿದರೂ ಕಾಲೇಜು ಶುಲ್ಕ ಕಟ್ಟಲಾಗದೇ ಕೂಲಿ ಕಾರ್ಮಿಕಳಾದ ವಿದ್ಯಾರ್ಥಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...