Homeಮುಖಪುಟಸೈಬರ್‌ ದಾಳಿಯ ಬಗ್ಗೆ 20 ಲಕ್ಷ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸೈಬರ್‌ ದಾಳಿಯ ಬಗ್ಗೆ 20 ಲಕ್ಷ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

- Advertisement -
- Advertisement -

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಪ್ರಮುಖ ನಗರಗಳಲ್ಲಿ ಫಿಶಿಂಗ್ ದಾಳಿಯ ಬಗ್ಗೆ ತನ್ನ 20 ಲಕ್ಷ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ಭಾರತದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದ್ದು, ಉಚಿತ ಕೊರೊನಾ ಪರೀಕ್ಷೆ ಎಂದು [email protected] ನಿಂದ ಬರುವ ಇಮೇಲ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಅದು ಎಸ್‌ಬಿಐ ಎಚ್ಚರಿಕೆ ನೀಡಿದೆ.

“ಉಚಿತ ಕೋವಿಡ್-19 ಪರೀಕ್ಷೆ” ಎಂಬ ವಿಷಯದ ಸಾಲಿನ ಫಿಶಿಂಗ್ ಇಮೇಲ್ ಅನ್ನು ದೆಹಲಿ, ಮುಂಬೈ ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನ ಎಲ್ಲಾ ನಿವಾಸಿಗಳಿಗೆ ಕಳುಹಿಸಲಾಗುತ್ತಿದೆ ಎಂದು ಅದು ಹೇಳಿದೆ.

ಭಾರತದಾದ್ಯಂತ ಉಚಿತ ಕೊರೊನಾ ಪರೀಕ್ಷೆಯ ಭರವಸೆ ನೀಡುವ ನಕಲಿ ಇಮೇಲ್‌ಗಳು, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಅಥವಾ ಪಠ್ಯ ಸಂದೇಶಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸರ್ಕಾರಿ ಭದ್ರತಾ ಸಂಸ್ಥೆ ಎಲ್ಲಾ ವ್ಯಾಪಾರ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಕೋರಿದ ನಂತರ ಎಸ್‌ಬಿಐ ಈ ಎಚ್ಚರಿಕೆ ನೀಡಿದೆ.

ಸರ್ಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿ – ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ತನ್ನ ಸಲಹೆಯಲ್ಲಿ ಉಚಿತ ಕೊರೊನಾ ಪರೀಕ್ಷೆಯ ಸೋಗಿನಲ್ಲಿ ಈ ಇ-ಮೈಲ್ ಬರುತ್ತಿದೆ ಎಂದು ಎಚ್ಚರಿಸಿದೆ.

“ಇಂತಹ ಇಮೇಲ್‌ಗಳನ್ನು ಸ್ವೀಕರಿಸುವವರನ್ನು ನಕಲಿ ವೆಬ್‌ಸೈಟ್‌ಗಳತ್ತ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ, ಅಲ್ಲಿ ಅವರು ದುರುದ್ದೇಶಪೂರಿತ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ನಮೂದಿಸಿ ಮೋಸ ಹೋಗುತ್ತಾರೆ” ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ತನ್ನ ಇತ್ತೀಚಿನ ಸಲಹೆಯಲ್ಲಿ ತಿಳಿಸಿತ್ತು.


ಓದಿ: ದೆಹಲಿ ಗಲಭೆಯನ್ನು ಬಿಜೆಪಿ ಕೌನ್ಸಿಲರ್‌ಗಳು ಮುನ್ನಡೆಸಿದ್ದರು: ದೂರು


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...