ತೀವ್ರಗೊಂಡ ‘ಲಡಾಖ್ ರಾಜ್ಯತ್ವ’ ಹೋರಾಟ: ಲೇಹ್‌ನಲ್ಲಿ ಬೀದಿಗಿಳಿದ ಯುವಜನತೆ

ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಬುಧವಾರ ಬೆಳಿಗ್ಗೆ (ಸೆ.24) ಲೇಹ್ ನಗರದಲ್ಲಿ ಆಕ್ರೋಶಿತ ಯುವಜನರ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು, ಪೊಲೀಸ್ ವಾಹನವನ್ನು ಸುಟ್ಟು ಹಾಕಿದ್ದಾರೆ. ಈ ಮೂಲಕ ರಾಜತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಇದೇ ಮೊದಲ ಬಾರಿಗೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಬುಧವಾರ ಬೆಳಿಗ್ಗೆ ಲೇಹ್‌ನ … Continue reading ತೀವ್ರಗೊಂಡ ‘ಲಡಾಖ್ ರಾಜ್ಯತ್ವ’ ಹೋರಾಟ: ಲೇಹ್‌ನಲ್ಲಿ ಬೀದಿಗಿಳಿದ ಯುವಜನತೆ