ಲೋಕಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, “ಕರ್ನಾಟಕದ ಸರ್ಕಾರವನ್ನು ಉರುಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರ ಸಹಕಾರ ಕೋರಿರುವ ಕರ್ನಾಟಕದ ಬಿಜೆಪಿ ನಾಯಕರನ್ನು ಕಿತ್ತೂರು ರಾಣಿ ಚೆನ್ನಮ್ಮನ ಬೆನ್ನಿಗೆ ಚೂರಿ ಹಾಕಿದ ಮಲ್ಲಪ್ಪ ಶೆಟ್ಟಿಗೆ ಹೋಲಿಸಬಹುದು. ಏಕನಾಥ್ ಶಿಂಧೆ ಅವರೇ, ಈ ಸರ್ಕಾರ ಕನ್ನಡಿಗರ ಸ್ವಾಭಿಮಾನದ ಸರ್ಕಾರ, ಕನ್ನಡಿಗರ ಆಶೀರ್ವಾದದ ಸರ್ಕಾರ, ಕನ್ನಡಿಗರ ಪ್ರೀತಿಯ ಸರ್ಕಾರ. ಕನ್ನಡಿಗರ ತಂಟೆಗೆ ಬರುವ ಮುನ್ನ ವೀರ ರಾಣಿ ಬೆಳವಡಿ ಮಲ್ಲಮರನ್ನು ಒಮ್ಮೆ ನೆನಪು ಮಾಡಿಕೊಳ್ಳಿ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕರ್ನಾಟಕದ ಸರ್ಕಾರವನ್ನು ಉರುಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರ ಸಹಕಾರ ಕೋರಿರುವ ಕರ್ನಾಟಕದ ಬಿಜೆಪಿ ನಾಯಕರನ್ನು ಕಿತ್ತೂರು ರಾಣಿ ಚೆನ್ನಮ್ಮನ ಬೆನ್ನಿಗೆ ಚೂರಿ ಹಾಕಿದ ಮಲ್ಲಪ್ಪ ಶೆಟ್ಟಿಗೆ ಹೋಲಿಸಬಹುದು.@mieknathshinde ಅವರೇ,
ಈ ಸರ್ಕಾರ ಕನ್ನಡಿಗರ ಸ್ವಾಭಿಮಾನದ ಸರ್ಕಾರ, ಕನ್ನಡಿಗರ ಆಶೀರ್ವಾದದ ಸರ್ಕಾರ, ಕನ್ನಡಿಗರ…— Karnataka Congress (@INCKarnataka) May 14, 2024
“ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ಬಿಜೆಪಿಗರ ಹಗಲುಗನಸು. ಈ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಬೀಳುವುದು ಕಾಂಗ್ರೆಸ್ ಸರ್ಕಾರವಲ್ಲ, ನರೇಂದ್ರ ಮೋದಿಯವರ ಸರ್ಕಾರ. ಈ ಚುನಾವಣೆಯ ನಂತರ ಅಪಾಯವಿರುವುದು ಬಿಜೆಪಿಯ ವಿರೋಧ ಪಕ್ಷದ ನಾಯಕನ ಕುರ್ಚಿಗೆ ಹೊರತು ಕಾಂಗ್ರೆಸ್ಸಿಗಲ್ಲ. ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೂನ್ಯ ಸಾಧನೆ ಮಾಡುವ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್ ನಾಯಕರ ಉಗ್ರಾವಾತಾರದ ಕೋಪವನ್ನು ಎದುರಿಸಲು ಸಜ್ಜಾಗಲಿ” ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ಬಿಜೆಪಿಗರ ಹಗಲುಗನಸು.
ಈ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಬೀಳುವುದು ಕಾಂಗ್ರೆಸ್ ಸರ್ಕಾರವಲ್ಲ, ನರೇಂದ್ರ ಮೋದಿಯವರ ಸರ್ಕಾರ.
ಈ ಚುನಾವಣೆಯ ನಂತರ ಅಪಾಯವಿರುವುದು ಬಿಜೆಪಿಯ ವಿರೋಧ ಪಕ್ಷದ ನಾಯಕನ ಕುರ್ಚಿಗೆ ಹೊರತು ಕಾಂಗ್ರೆಸ್ಸಿಗಲ್ಲ.
ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೂನ್ಯ ಸಾಧನೆ…
— Karnataka Congress (@INCKarnataka) May 14, 2024
ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು:
“ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಏಕೆಂದರೆ ಎನ್.ಡಿ.ಎ ಈ ಬಾರಿ ಸೋಲಲಿದೆ. ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲು ಈಗಾಗಲೇ ಕಳೆದ ಒಂದು ವರ್ಷದಿಂದ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ? ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ, ಮಹಾರಾಷ್ಟ್ರದಲ್ಲಿ ಆದಂತೆ ಆಗಲೂ ಸಾಧ್ಯವಿಲ್ಲ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಗೆಲ್ಲಲಿದ್ದು ನಮ್ಮವರೇ ಪ್ರಧಾನ ಮಂತ್ರಿಯಾಗಲಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
“ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಸರ್ಕಾರ ಪತನವಾಗಲಿದೆ. ಮೋದಿಯವರು ಉದ್ಧವ್ ಠಾಕ್ರೆ ಬಗ್ಗೆ ಮಾತನಾಡಿದ್ದು ಏಕೆ? ಉದ್ಧವ್ ಠಾಕ್ರೆ ಅವರಿಗೆ ಅಲ್ಲಿ ಶಕ್ತಿ ಇದೆ ಎಂದರ್ಥವಲ್ಲವೇ? ಪರೇಷನ್ ಕಮಲಕ್ಕೆ ಒಳಗಾಗಿದ್ದ ಶಾಸಕರೆಲ್ಲ ಅಲ್ಲಿ ಯೂಟರ್ನ್ ಆಗಲಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತೆ ನಮ್ಮ ಸರ್ಕಾರ ರಚನೆ ಆಗಲಿದೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
“ಕಾಂಗ್ರೆಸ್ ಶಾಸಕರು ಅತೃಪ್ತರಾಗಿದ್ದಾರೆ. ಆದರೆ ಈ ಆಂತರಿಕ ಕಚ್ಚಾಟವು ಸರ್ಕಾರದ ಸ್ಥಿರತೆಗೆ ಧಕ್ಕೆ ತರುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಸ್ಥಿರತೆಯನ್ನು ಎದುರಿಸಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸುಳಿವು ಕುರಿತು ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. “ನಮ್ಮ ಹೋರಾಟವು ಪಕ್ಷದೊಳಗೆ ಇದೆ, ಸಮಸ್ಯೆಗಳಿರಬಹುದು, ಆದರೆ ಅವು ಆಂತರಿಕವಾಗಿವೆ, ಅವುಗಳು ಹೊರಗಡೆ ಸೋರಿಕೆ ಆಗುವುದಿಲ್ಲ” ಎಂದರು.
ಇದನ್ನೂ ಓದಿ; ‘ಆಪರೇಶನ್ ಕಮಲ’ ಬಿಜೆಪಿಯ ಹಗಲುಗನಸು: ಮುಖ್ಯಮಂತ್ರಿ ಸಿದ್ದರಾಮಯ್ಯ


