ಕೆಲವು ರಾಜ್ಯ ಸರ್ಕಾರಗಳು ತಾವು ನೀಡುವ ತೆರಿಗೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ನಿಧಿ ನೀಡಬೇಕು ಎಂದು ಬಯಸುತ್ತಿದ್ದು, ಈ ಬೇಡಿಕೆಯು “ಕ್ಷುಲ್ಲಕ ವಿಚಾರ”ವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಶನಿವಾರ ಟೀಕಿಸಿದ್ದಾರೆ. ರಾಜ್ಯಗಳು ತಮ್ಮ
2019 ರಿಂದ 2022 ರವರೆಗೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉಲ್ಲೇಖಿಸಿದ ಗೋಯಲ್, “ಎರಡೂವರೆ ವರ್ಷಗಳ ಕಾಲ ಇದ್ದ ಹಿಂದಿನ ಸರ್ಕಾರದ ನಾಯಕರು, ಮುಂಬೈ ಮತ್ತು ಮಹಾರಾಷ್ಟ್ರ ಪಾವತಿಸಿದ ತೆರಿಗೆಯನ್ನು ಲೆಕ್ಕಹಾಕುತ್ತಿದ್ದರು ಮತ್ತು ಅದು [ಕೇಂದ್ರ ನಿಧಿಯಾಗಿ] ಅಷ್ಟೊಂದು ಹಣವನ್ನು ಮರಳಿ ಪಡೆಯಬೇಕೆಂದು ಒತ್ತಾಯಿಸುತ್ತಿದ್ದರು.” ಎಂದು ಹೇಳಿದ್ದಾರೆ. ರಾಜ್ಯಗಳು ತಮ್ಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇದೇ ರೀತಿ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದಂತಹ ಕೆಲವು ರಾಜ್ಯಗಳು ತಾವು ಪಾವತಿಸಿದ ತೆರಿಗೆಯ ಮೊತ್ತವನ್ನು ಮರಳಿ ಪಡೆಯಬೇಕೆಂದು ಹೇಳುತ್ತವೆ. ಇದಕ್ಕಿಂತ ಕ್ಷುಲ್ಲಕ ಮತ್ತು ದುರದೃಷ್ಟಕರವಾದದ್ದು ಯಾವುದೂ ಇಲ್ಲ ಎಂದು ನಾನು ನಂಬುತ್ತೇನೆ.” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರದ ಪ್ರಸ್ತುತ ಸರ್ಕಾರವು ಈಶಾನ್ಯ ಭಾರತದ ಬಗ್ಗೆ ಬಹಳ ಸೂಕ್ಷ್ಮವಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಈಶಾನ್ಯ ಮತ್ತು ದೇಶದ ಉಳಿದ ಭಾಗಗಳ ವಿದ್ಯಾರ್ಥಿಗಳ ನಡುವಿನ ಸಂವಹನವನ್ನು ಸುಗಮಗೊಳಿಸುವ ಉಪಕ್ರಮದ ಭಾಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಮುಂಬೈ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಂಬೈ ಉತ್ತರದ ಸಂಸದ ಗೋಯಲ್ ಈ ಹೇಳಿಕೆ ನೀಡಿದ್ದಾರೆ. ಎಬಿವಿಪಿಯು ಆರೆಸ್ಸೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಕ್ಷಿಣ ರಾಜ್ಯಕ್ಕೆ ಕೇಂದ್ರ ಸರ್ಕಾರ “ಆರ್ಥಿಕ ಅನ್ಯಾಯ” ಮಾಡಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಭಾಗವಹಿಸಿದ್ದರು.
ಆದಾಗ್ಯೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳು ಕೇಂದ್ರದಿಂದ ಹಣವನ್ನು ಪಡೆಯುವುದಕ್ಕೆ ರಾಜಕೀಯ ಹಿತಾಸಕ್ತಿಗಳು ಅಡ್ಡಿಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.
ಇದನ್ನೂಓದಿ: ಕಳೆದ 6 ದಿನಗಳಿಂದ ರೈತ ನಾಯಕ ದಲ್ಲೆವಾಲ್‌ಗೆ ವೈದ್ಯಕೀಯ ನೆರವು ಸಾಧ್ಯವಾಗುತ್ತಿಲ್ಲ: ರೈತ ಸಂಘಟನೆಗಳು
ಕಳೆದ 6 ದಿನಗಳಿಂದ ರೈತ ನಾಯಕ ದಲ್ಲೆವಾಲ್‌ಗೆ ವೈದ್ಯಕೀಯ ನೆರವು ಸಾಧ್ಯವಾಗುತ್ತಿಲ್ಲ: ರೈತ ಸಂಘಟನೆಗಳು


