Homeಚಳವಳಿರೈತ ಹೋರಾಟ ಬೆಂಬಲಿಸಿ 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮುಂದಾದ ಮಾಜಿ ಸೈನಿಕರು!

ರೈತ ಹೋರಾಟ ಬೆಂಬಲಿಸಿ 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮುಂದಾದ ಮಾಜಿ ಸೈನಿಕರು!

ದೇಶದ ರೈತರು ಸುರಕ್ಷಿತವಾಗಿಲ್ಲದಿದ್ದರೆ, ದೇಶವೂ ಸುರಕ್ಷಿತವಾಗಿಲ್ಲ. ಇಂದು ದೇಶದ ರೈತರು ಮತ್ತು ಯುವಕರು ಓದಿದ್ದಾರೆ. ರೈತರು ಮತ್ತು ಸೈನಿಕರನ್ನು ಮೋಸಗೊಳಿಸುವುದು ತುಂಬಾ ಕಷ್ಟ. ಆದ್ದರಿಂದ ಕೇಂದ್ರ ಸರ್ಕಾರ ವಾಕ್ಚಾತುರ್ಯವನ್ನು ಬಿಟ್ಟು ರೈತ ವಿರೋಧಿ ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು.

- Advertisement -
- Advertisement -

ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕಳೆದ 19 ದಿನಗಳಿಂದ ಹೋರಾಡುತ್ತಿರುವ ರೈತರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ದೇಶ-ವಿದೇಶಗಳ ರಾಜಕಾರಣಿಗಳು, ಮಂತ್ರಿಗಳ ಬೆಂಬಲದ ಜೊತೆಗೆ ಈಗ ಮಾಜಿ ಸೈನಿಕರೂ ರೈತರ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಲು 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ರಾಷ್ಟ್ರಪತಿಯವರ ಭೇಟಿಗೆ ಸಮಯ ಕೇಳಿ ಸಬ್ಕಾ ಸೈನಿಕ್ ಸಂಘರ್ಷ ಸಮಿತಿ ಪತ್ರ ಬರೆದಿದೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಸಿಲಾನಿ ಕೇಸೋ “ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಮಂತ್ರಿಗಳು ರೈತರ ಸಮಸ್ಯೆ ಆಲಿಸುವುದನ್ನು ಬಿಟ್ಟು ಅವರನ್ನು ಖಾಲಿಸ್ತಾನಿಗಳು, ಭಯೋತ್ಪಾದಕರು ಎಂದು ಕರೆದು ಅವಮಾನ ಮಾಡುತ್ತಿದೆ. ಹಾಗಾಗಿ ನಾವು ರೈತರೊಂದಿಗೆ ನಿಲ್ಲಲು ಮತ್ತು ಸೇನಾ ಪದಕ ಹಿಂದಿರುಗಿಸಲು ಡಿಸೆಂಬರ್ 8 ರಂದೇ ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದಿದ್ದೇವೆ. ಆದರೆ ರಾಷ್ಟ್ರಪತಿಗಳ ಭೇಟಿಗೆ ಅವಕಾಶ ನೀಡಿಲ್ಲ. ನಾವು ನಮ್ಮ ನಿರ್ಧಾರಕ್ಕೆ ದೃಢವಾಗಿದ್ದೇವೆ. ರಾಷ್ಟ್ರಪತಿಗಳ ಭೇಟಿಗೆ ಅವಕಾಶ ನೀಡುವವರೆಗೂ ಕಾಯುತ್ತೇವೆ” ಎಂದಿದ್ದಾರೆ.

ದೇಶದ ರೈತರು ಸುರಕ್ಷಿತವಾಗಿಲ್ಲದಿದ್ದರೆ, ದೇಶವೂ ಸುರಕ್ಷಿತವಾಗಿಲ್ಲ. ಇಂದು ದೇಶದ ರೈತರು ಮತ್ತು ಯುವಕರು ಓದಿದ್ದಾರೆ. ರೈತರು ಮತ್ತು ಸೈನಿಕರನ್ನು ಮೋಸಗೊಳಿಸುವುದು ತುಂಬಾ ಕಷ್ಟ. ಆದ್ದರಿಂದ ಕೇಂದ್ರ ಸರ್ಕಾರ ವಾಕ್ಚಾತುರ್ಯವನ್ನು ಬಿಟ್ಟು ರೈತ ವಿರೋಧಿ ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು. ಆದ್ದರಿಂದ ಸಬ್ಕಾ ಸೈನಿಕ್ ಸಂಘರ್ಷ ಸಮಿತಿಯಿಂದ 25,000 ಪದಕಗಳನ್ನು ರಾಷ್ಟ್ರಪತಿಗೆ ಹಿಂದಿರುಗಿಸಲಾಗುವುದು ಎಂದಿದ್ದಾರೆ.


ಇದನ್ನೂ ಓದಿ: ‘ಐಲುದೊರೆ ನೀರೋ’ನಂಥ ಕ್ರೂರಿ ಕೇಂದ್ರ ಸರ್ಕಾರ ಸಮಯವನ್ನೂ, ರೈತರನ್ನೂ ಕೊಲ್ಲುತ್ತಿದೆ: AIKSCC

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...