ಬಿಹಾರ ಕರಡು ಮತದಾರರ ಪಟ್ಟಿ ಪ್ರಕಟಣೆ ತಡೆಯಲು ಸುಪ್ರೀಂ ನಕಾರ: ಆಧಾರ್, ವೋಟರ್ ಐಡಿ ಪರಿಗಣಿಸುವಂತೆ ಒತ್ತಾಯ

ವಿಶೇಷ ತೀವ್ರ ಪರಿಷ್ಕರಣೆಯ ವೇಳಾಪಟ್ಟಿಯಂತೆ ಆಗಸ್ಟ್ 1ರಂದು ಬಿಹಾರದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 28) ನಿರಾಕರಿಸಿತು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಇಂದು ವಿವರವಾದ ವಿಚಾರಣೆ ನಡೆಸಿಲ್ಲ. ಏಕೆಂದರೆ, ಪೀಠದ ಭಾಗವಾದ ನ್ಯಾಯಮೂರ್ತಿ ಕಾಂತ್ ಅವರು ಮಧ್ಯಾಹ್ನ ಸಿಜೆಐ ಅವರೊಂದಿಗಿನ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಹಾಗಾಗಿ, ಅರ್ಜಿದಾರರಿಗೆ ಈ ಪ್ರಕರಣಗಳನ್ನು ಆದಷ್ಟು ಬೇಗ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದ … Continue reading ಬಿಹಾರ ಕರಡು ಮತದಾರರ ಪಟ್ಟಿ ಪ್ರಕಟಣೆ ತಡೆಯಲು ಸುಪ್ರೀಂ ನಕಾರ: ಆಧಾರ್, ವೋಟರ್ ಐಡಿ ಪರಿಗಣಿಸುವಂತೆ ಒತ್ತಾಯ