ಎನ್‌ಸಿಪಿ(ಎಸ್‌ಪಿ) ಕಾರ್ಯಾಧ್ಯಕ್ಷೆ ಮತ್ತು ಬಾರಾಮತಿ ಸಂಸದರಾಗಿ ಆಯ್ಕೆಯಾದ ಸುಪ್ರಿಯಾ ಸುಳೆ ತಮ್ಮ ಸೋದರಸಂಬಂಧಿ ಅಜಿತ್ ಪವಾರ್ ಬಣದ ಎನ್‌ಸಿಪಿಯ ನಾಯಕರನ್ನು ಭೇಟಿ ಮಾಡಲು ತಾನು ಸಿದ್ಧರಿರುವುದಾಗಿ ಹೇಳಿದ್ದಾರೆ.
10-15 ಶಾಸಕರು ತಮ್ಮ ಪಕ್ಷದ ವರಿಷ್ಠ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿಕೆ ನೀಡಿದ ಬೆನ್ನಲ್ಲೇ ಸುಪ್ರಿಯಾ ಸುಳೆ ಅವರ ಈ ಹೇಳಿಕೆ ಹೊರ ಬಿದ್ದಿದೆ.
ಕಳೆದ ವರ್ಷ ಜುಲೈನಲ್ಲಿ ಎನ್‌ಸಿಪಿ ವಿಭಜನೆಯಾದಾಗ, 41 ಶಾಸಕರು ಅಜಿತ್ ಪವಾರ್ ಪರವಾಗಿ ನಿಂತಿದ್ದರೆ, 11 ಮಂದಿ ಶಾಸಕರು ಮಾತ್ರ ಚಿಕ್ಕಪ್ಪ ಶರದ್ ಪವಾರ್ ಅವರನ್ನು ಬೆಂಬಲಿಸಿದ್ದರು. ಸೋಮವಾರ ಅಜಿತ್ ಮತ್ತು ಶರದ್ ಪವಾರ್ ಬಣ 25ನೇ ಸಂಸ್ಥಾಪನಾ ದಿನ ಆಚರಿಸಿತ್ತು.
ಶಾಸಕರು ನನ್ನ ಮನೆ ಅಥವಾ ಕಚೇರಿಗೆ ಬರಲು ಬಯಸಿದರೆ, ಎಲ್ಲರಿಗೂ ಸ್ವಾಗತ. ಆದರೆ ಕೆಲವು ವಿಷಯಗಳಲ್ಲಿ, ನಾವು ಇಡೀ ಕೇಡರ್ ಮತ್ತು ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಸರ್ವಾನುಮತದ ನಿರ್ಧಾರವಾಗಿರುತ್ತದೆ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.
ಇದು ಎನ್‌ಸಿಪಿಯ ಆಂತರಿಕ ಸಮಸ್ಯೆಯಾಗಿದ್ದು, ಪಕ್ಷದ ನಾಲ್ಕು ಗೋಡೆಗಳ ನಡುವೆ ಚರ್ಚಿಸಲಾಗುವುದು. ನಾವು ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಯಾವುದೇ ವ್ಯಕ್ತಿ ಆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈ ಅಸಾಧಾರಣ ಸವಾಲಿನ ಸಮಯದಲ್ಲಿ ಹೋರಾಡಿದ ನಮ್ಮ ಎಲ್ಲಾ ಕಾರ್ಯಕರ್ತರು ಮತ್ತು ಕಾರ್ಯಕರ್ತರನ್ನು ನಾವು ಗೌರವಿಸಬೇಕು, ಆದರೆ ಈ ಕುರಿತು ಯಾವುದೇ ಮಾತುಕತೆಯ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ ಮತ್ತು ಪಕ್ಷವನ್ನು ಬದಲಾಯಿಸಲು ಸಿದ್ಧರಿರುವ ಒಟ್ಟು ಶಾಸಕರ ಸಂಖ್ಯೆಯನ್ನು ಅವರು ಹೇಳಿಕೊಂಡಿಲ್ಲ.
ಇದೇ ರೀತಿಯ ಹೇಳಿಕೆಯನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ. ಮಹರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ 40 ಶಾಸಕರು ಘರ್ ವಾಪ್ಸಿಗೆ ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ.
18ನೇ ಲೋಕಸಭೆ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವನ್ನು ಕಂಡಿತ್ತು. ರಾಯಗಢ ಕ್ಷೇತ್ರದಲ್ಲಿ ಸುನಿಲ್ ತಟ್ಕರೆ ಸ್ಪರ್ಧಿಸಿ ಗೆಲುವನ್ನು ಕಂಡಿದ್ದರು. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಬಾರಾಮತಿಯಲ್ಲಿ ಸುಪ್ರಿಯಾ ಸುಳೆ ವಿರುದ್ಧ ಸೋಲನ್ನು ಕಂಡಿದ್ದರು.
ಶರದ್ ಪವಾರ್ ಅವರ ಎನ್‌ಸಿಪಿ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 8 ಸ್ಥಾನಗಳಲ್ಲಿ ಗೆಲುವನ್ನು ಕಂಡಿದೆ. ಸುಪ್ರಿಯಾ ಸುಳೆ (ಬಾರಾಮತಿ), ಧೈರ್ಯಶೀಲ್ ಮೋಹಿತೆ-ಪಾಟೀಲ್ (ಮಾಧಾ), ಅಮೋಲ್ ಕೋಲ್ಹೆ (ಶಿರೂರು), ನೀಲೇಶ್ ಲಂಕೆ (ಅಹಮದ್‌ನಗರ), ಅಮರ್ ಕಾಳೆ (ವಾರ್ಧಾ), ಬಜರಂಗ ಸೋನಾವಣೆ (ಬೀಡು), ಸುರೇಶ್ ಮ್ಹಾತ್ರೆ (ಭಿವಂಡಿ), ಮತ್ತು ಭಾಸ್ಕರ್ ಭಾಗರೆ (ದಿಂಡೋರಿ) ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 17 ಮಹಾಯುತಿ ಅಭ್ಯರ್ಥಿಗಳು, 30 ಎಂವಿಎ ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವನ್ನು ಕಂಡಿದ್ದರು.
Supriya Sule’s statement comes shortly after the party’s State chief, Jayant Patil claimed that 10–15 MLAs are in contact with their supremo and former Union Minister, Sharad Pawar, writes @tweetateeqhttps://t.co/mxIa7sbEkW
— The Hindu (@the_hindu) June 12, 2024
ಇದನ್ನು ಓದಿ: ಏಕರೂಪ ನಾಗರಿಕ ಸಂಹಿತೆ: ನೂತನ ಎನ್‌ಡಿಎ ಸರಕಾರದ ನಿಲುವೇನು?


