ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು “ಹಿಂದೂಗಳ ಮೇಲೆ ಮುಸ್ಲಿಮರು ನಡೆಸಿದ ದಾಳಿ” ಎಂದು ಶಂಕಿತ ಭಯೋತ್ಪಾದಕಿ, ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಎಂದು ಹೇಳಿದ ವಿವಾದ ಸೃಷ್ಟಿಸುವ ಮೂಲಕ ಘಟನೆಗೆ ಕೋಮು ಬಣ್ಣ ಹಚ್ಚಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರುವಾಸಿಯಾದ ಅವರು 2008 ರ ಮಾಲೆಗಾಂವ್ ಸ್ಫೋಟದ ಶಂಕಿತ ಭಯೋತ್ಪಾದಕಿಯಾಗಿದ್ದಾರೆ. ಪಹಲ್ಗಾಮ್ ದಾಳಿಗೆ ಕೋಮು ಬಣ್ಣ
ಮಾಜಿ ಬಿಜೆಪಿ ಸಂಸದೆಯೂ ಆಗಿರುವ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಗುರುವಾರ ಇಂದೋರ್‌ನಲ್ಲಿ ನಡೆದ ಮಹಾರಾಣಾ ಪ್ರತಾಪ್ ಜಯಂತಿಯಂದು ಈ ಹೇಳಿಕೆ ನೀಡಿದ್ದಾರೆ. ಬಲಪಂಥೀಯ ಸಂಘಟನೆ ಕರ್ಣಿ ಸೇನಾ ಭಾರತ್ ಆಯೋಜಿಸಿದ್ದ ‘ಪ್ರತಾಪ್ ಪರಾಕ್ರಮ್ ಯಾತ್ರೆ’ಯ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
“ಭಯೋತ್ಪಾದಕರು ಜನರ ಧಾರ್ಮಿಕ ಗುರುತುಗಳನ್ನು ಖಚಿತಪಡಿಸಿಕೊಂಡ ನಂತರ ಅಮಾಯಕರನ್ನು ಕೊಂದು ನಮ್ಮ ಸಹೋದರಿಯರನ್ನು ವಿಧವೆಯನ್ನಾಗಿ ಮಾಡಿದ ರೀತಿಯನ್ನು ಮುಸ್ಲಿಮರು ಹಿಂದೂಗಳ ಮೇಲೆ ನಡೆಸಿದ ದಾಳಿ ಎಂದು ಕರೆಯಬೇಕು” ಎಂದು ಅವರು ಹೇಳಿದ್ದಾರೆ.
“ಅಂತಹ ದಾಳಿಗಳು ನಡೆದಾಗಲೆಲ್ಲಾ ಹಿಂದೂಗಳು ಮುಸ್ಲಿಮರು ಮತ್ತು ಮುಸ್ಲಿಂ ಭಯೋತ್ಪಾದಕರ ಮೇಲೆಯೂ ದಾಳಿ ಮಾಡಬೇಕು” ಎಂದು ಅವರು ಹೇಳಿದ್ದು ವಿವಾದ ಸೃಷ್ಟಿಸಿದ್ದಾರೆ.
“ಇಂದಿನ ಪರಿಸ್ಥಿತಿ ಮಹಾರಾಣಾ ಪ್ರತಾಪ್ ಮೊಘಲರ ವಿರುದ್ಧ ಧೈರ್ಯದಿಂದ ಹೋರಾಡಿದಾಗ ಇದ್ದಂತೆಯೇ ಇದೆ. ಅದೇ ರೀತಿ, ಮೊಘಲರು ಇನ್ನೂ ನಮ್ಮನ್ನು ಮತ್ತು ನಮ್ಮ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನಾವು ನಮಗಾಗಿ ನಿಲ್ಲಬೇಕಾಗುತ್ತದೆ.” ಎಂದು ಅವರು ಹೇಳಿದ್ದಾರೆ.
“ಮಹಾರಾಣಾ ಪ್ರತಾಪ್, ಶಿವಾಜಿ ಮಹಾರಾಜ್ ಮತ್ತು ಪೃಥ್ವಿರಾಜ್ ಚೌಹಾಣ್ ಸೇರಿದಂತೆ ನಮ್ಮ ಎಲ್ಲಾ ಮಹಾನ್ ಆಡಳಿತಗಾರರು ಶತ್ರುಗಳನ್ನು ಎಂದಿಗೂ ಭಾಯಿ (ಸಹೋದರ) ಎಂದು ಸಂಬೋಧಿಸಬಾರದು ಎಂಬುದನ್ನು ನಮಗೆ ತೋರಿಸಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಜನರು ತಮ್ಮ ಸ್ವಂತ ಸಹೋದರರನ್ನು ಭಾಯಿ ಎಂದು ಸಂಬೋಧಿಸುವುದಿಲ್ಲ. ಬದಲಾಗಿ ಅವರು ವಿದರ್ಮಿಗಳನ್ನು (ಇತರ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವವರು) ಭಾಯಿ ಎಂದು ಸಂಬೋಧಿಸುತ್ತಾರೆ.” ಎಂದು ಅವರು ತಿಳಿಸಿದ್ದಾರೆ.
ನೀವು ಅವರನ್ನು ಭಾಯಿ ಎಂದು ಕರೆಯುವುದನ್ನು ನಿಲ್ಲಿಸಿದ ದಿನ, ನೀವು ಸುರಕ್ಷಿತವಾಗಿರುತ್ತೀರಿ ಎಂಬುದನ್ನು ನೆನಪಿನಲ್ಲಿಡಿ ಎಂದು ಶಂಕಿತ ಭಯೋತ್ಪಾದಕಿ ತನ್ನ ಮುಸ್ಲಿಂ ದ್ವೇಷವನ್ನು ಕಾರಿಕೊಂಡಿದ್ದು, ದೇಶದ ಸೌಹಾರ್ದತೆ ಮತ್ತು ಬ್ರಾತೃತ್ವವನ್ನು ಹಾಳುಗೆಡವಲು ಪ್ರಯತ್ನಿಸಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಹೊಗಳಿದ್ದಾರೆ. “ಯುದ್ಧವನ್ನು ಏಕೆ ನಿಲ್ಲಿಸಲಾಯಿತು ಎಂದು ಜನರು ಕೇಳಿದರು. ಯುದ್ಧವು ಸಮಾನರ ನಡುವೆ ನಡೆಯುತ್ತದೆ, ಆನೆ ಎಂದಿಗೂ ನಾಯಿಯೊಂದಿಗೆ ಹೋರಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಶಂಕಿತ ಭಯೋತ್ಪಾದಕಿಯೊಂದಿಗೆ ಇಂದೋರ್ -2 ರ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಕೂಡ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದರು ಎಂದು ವರದಿ ಹೇಳಿದೆ. ಪಹಲ್ಗಾಮ್ ದಾಳಿಗೆ ಕೋಮು ಬಣ್ಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮುಸ್ಲಿಂ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದ ಬಿಜೆಪಿ ನಾಯಕ | ಕ್ಷಮೆಯಾಚಿಸುವಂತೆ ಸೂಚಿಸಿದ ಕರ್ನಾಟಕ ಹೈಕೋರ್ಟ್
ಮುಸ್ಲಿಂ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದ ಬಿಜೆಪಿ ನಾಯಕ | ಕ್ಷಮೆಯಾಚಿಸುವಂತೆ ಸೂಚಿಸಿದ ಕರ್ನಾಟಕ ಹೈಕೋರ್ಟ್

