ತಮಿಳುನಾಡು: ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ; ನಾಲ್ವರು ಪುನಃ ಬಂಧನ

ತಮಿಳುನಾಡಿನ ಆಂಡಿಪಟ್ಟಿ ಸಮೀಪದ ತೆಕ್ಕಂಪಟ್ಟಿ ಉಪಜೈಲಿನಲ್ಲಿ ಜೈಲು ಸಿಬ್ಬಂದಿಯನ್ನು ಥಳಿಸಿ 17 ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ ಎಂದು ಮಂಗಳವಾರ (ಅ.27) ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಜೈಲಿನಿಂದ ಪರಾರಿಯಾದವರ ಪೈಕಿ ನಾಲ್ವರನ್ನು ಕೆಲವೇ ಸಮಯದಲ್ಲಿ ಮತ್ತೆ ಬಂಧಿಸಲಾಗಿದೆ. ಹೊಟ್ಟೆನೋವು ಉಂಟಾದಂತೆ ನಾಟಕವಾಡುವ ಮೂಲಕ ಕೈದಿಗಳು ಸಂಘಟಿತವಾಗಿ ಪರಾರಿಯಾಗಿದ್ದಾರೆ. ಒಂದೇ ಕೋಣೆಯಲ್ಲಿದ್ದ ಕೆಲವು ಕೈದಿಗಳು, ತಮ್ಮ ಸಹ ಕೈದಿಯೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ತಕ್ಷಣ ವೈದ್ಯಕೀಯ ನೆರವು ಅಗತ್ಯವಿದೆ ಎಂದು ಕರ್ತವ್ಯದಲ್ಲಿದ್ದ ವಾರ್ಡನ್‌ಗೆ ಕೂಗಿ ತಿಳಿಸಿದ್ದಾರೆ … Continue reading ತಮಿಳುನಾಡು: ಥೇಣಿ ಉಪಜೈಲಿನಿಂದ 17 ವಿಚಾರಣಾಧೀನ ಕೈದಿಗಳ ಪರಾರಿ; ನಾಲ್ವರು ಪುನಃ ಬಂಧನ