ತಮಿಳುನಾಡು| ದಲಿತ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ; ರಸ್ತೆ ಪ್ರವೇಶಿಸದಂತೆ ತಡೆದ ಪ್ರಬಲಜಾತಿ ವೃದ್ದೆ

ದಲಿತ ಸಮುದಾಯದ ಮಕ್ಕಳು ಶಾಲೆಗೆ ತೆರಳುವ ಹಾದಿಯನ್ನು ಪ್ರಬಲ ಜಾತಿಗೆ ಸೇರಿದ ವೃದ್ಧ ಮಹಿಳೆಯೊಬ್ಬರು ತಡೆದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿನ ತಂಜಾವೂರಿನ ಕೊಲ್ಲಂಗರೈ ಗ್ರಾಮದಲ್ಲಿ ನಡೆದಿರುವ ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಯುವಕನೊಬ್ಬ ಶಾಲಾ ಮಕ್ಕಳನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಇದೇ ಸಂದರ್ಭದಲ್ಲಿ ವೃದ್ಧ ಮಹಿಳೆಯೊಬ್ಬರು ಕೋಲಿನಿಂದ ಅವರ ಹಾದಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆ ವ್ಯಕ್ತಿ ಕೋಲನ್ನು ಪಕ್ಕಕ್ಕೆ ತಳ್ಳಿ ಮಕ್ಕಳೊಂದಿಗೆ ನಡೆಯುವುದನ್ನು ಮುಂದುವರಿಸಿದ್ದಾರೆ. … Continue reading ತಮಿಳುನಾಡು| ದಲಿತ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ; ರಸ್ತೆ ಪ್ರವೇಶಿಸದಂತೆ ತಡೆದ ಪ್ರಬಲಜಾತಿ ವೃದ್ದೆ