Homeಮುಖಪುಟತಮಿಳುನಾಡು: DMK 180 ಸ್ಥಾನಗಳಲ್ಲಿ ಸ್ಪರ್ಧಿಸಲು ಹಠ ಹಿಡಿದಿರುವುದೇಕೆ?

ತಮಿಳುನಾಡು: DMK 180 ಸ್ಥಾನಗಳಲ್ಲಿ ಸ್ಪರ್ಧಿಸಲು ಹಠ ಹಿಡಿದಿರುವುದೇಕೆ?

- Advertisement -
- Advertisement -

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು ಫೆಬ್ರವರಿ ಅಂತ್ಯದಲ್ಲಿ ತನ್ನ ಚುನಾವಣಾ ಪ್ರಚಾರವನ್ನು ಹರ್ಷಚಿತ್ತದಿಂದ ಆರಂಭಿಸಿತು. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಗಳೊಂದಿಗಿನ ಮೈತ್ರಿ ಅಖಂಡವಾಗಿತ್ತು. ಅವರು ಎಐಎಡಿಎಂಕೆ ಮತ್ತು ಅದರ ಮಿತ್ರ ಭಾರತೀಯ ಭಾರತೀಯ ಪಕ್ಷ ವಿರುದ್ಧ ಒಂದೇ ಧ್ವನಿಯಲ್ಲಿ ಮಾತನಾಡಿದರು.

ಆದರೆ ಸೀಟು ಹಂಚಿಕೆ ಮಾತುಕತೆ ಶುರುವಾಗಿ ಐದು ದಿನಗಳ ನಂತರ, ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಎಲ್ಲವೂ ಸರಿಯಾಗಿಲ್ಲ, ಮತ್ತು ಡಿಎಂಕೆ ಚುನಾವಣಾ ಪ್ರಚಾರ ವ್ಯವಸ್ಥಾಪಕ ಮತ್ತು ರಾಜಕೀಯ ಪ್ರಚಾರ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೀಗ ಘರ್ಷಣೆಗೆ ಕಾರಣರಾಗಿದ್ದಾರೆ ಎಂದು ಡಿಎಂಕೆಯ ಮೂಲಗಳನ್ನು ಉಲ್ಲೇಖಿಸಿ ದಿ ಕ್ವಿಂಟ್‌ಗೆ ವರದಿ ಮಾಡಿದೆ

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಕನಿಷ್ಠ 180 ಸ್ಥಾನಗಳಿಂದ ಸ್ಪರ್ಧಿಸಲು ಡಿಎಂಕೆ ಬಯಸಿದೆ. ಉಳಿದ 54 ಸ್ಥಾನಗಳನ್ನು ತಮ್ಮ ಮೈತ್ರಿ ಪಾಲುದಾರರಿಗೆ ಬಿಡಲು ಸಿದ್ಧವಿದೆ. 30 ಸ್ಥಾನಗಳನ್ನು ಕಾಂಗ್ರೆಸ್ ಕೇಳಿದ್ದರೆ, ವಿಸಿಕೆ, ಸಿಪಿಐ, ಸಿಪಿಐ (ಎಂ) ಮತ್ತು ಐಯುಎಂಎಲ್, ಎಲ್ಲರೂ ತಲಾ 10 ಸ್ಥಾನಗಳನ್ನು ಕೇಳಿದ್ದರು. ಡಿಎಂಕೆ ಬಿಟ್ಟು ಕೊಡಲಿರುವ 54 ಸೀಟುಗಳಲ್ಲಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಸಾಧ್ಯವಿಲ್ಲ. ಈಗಾಗಲೇ, ವಿಸಿಕೆ ಮತ್ತು ಸಿಪಿಐ ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ. ಸಿಪಿಐ (ಎಂ) ಐದು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಕಾಂಗ್ರೆಸ್‌ಗೆ ಕೇವಲ 18 ಅಥವಾ ಸ್ಥಾನಗಳ ಆಫರ್ ನೀಡಲಾಗಿದೆ. ಐಯುಎಂಎಲ್ ನಾಲ್ಕು ಸ್ಥಾನಗಳನ್ನು ಪಡೆಯಬಹುದು.

ಡಿಎಂಕೆಯ ಈ ಕಠಿಣ ಸಮಾಲೋಚನೆ ಮತ್ತು 180ರಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಪ್ರಶಾಂತ್ ಕಿಶೋರ್ ತಂಡದ ಸಲಹೆಗಳೇ ಕಾರಣ ಎನ್ನಲಾಗಿದೆ. ಪ್ರಶಾಂತ್ ತಂಡ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

180 ಸ್ಥಾನಗಳಿಗೆ ಪಟ್ಟು ಏಕೆ?

ಮೂಲಗಳ ಪ್ರಕಾರ, ಕನಿಷ್ಠ 180 ಸ್ಥಾನಗಳಲ್ಲಿ ಸ್ಪರ್ಧಿಸುವ ಡಿಎಂಕೆ ನಿರ್ಧಾರಕ್ಕೆ ಕಾರಣ: ಕಡಿಮೆ ಸೀಟುಗಳನ್ನು ಗೆದ್ದರೆ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ನಡೆಸಬಹುದಾದ ಆಪರೇಷನ್ ಕಮಲದ ಭೀತಿ ಎನ್ನಲಾಗಿದೆ. ಮೈತ್ರಿ ಪಕ್ಷದ ಯಾರಾದರೂ ಬಿಜೆಪಿಯೆಡೆಗೆ ವಾಲಿದರೆ ಕಷ್ಟ ಎಂಬುದನ್ನು ಪ್ರಶಾಂತ್ ಕಿಶೋರ್ ಡಿಎಂಕೆಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಅಸೆಂಬ್ಲಿಯಲ್ಲಿ ಬಹುಮತ ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಡಿಎಂಕೆ ಹೊರಹೊಮ್ಮುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಡಿಎಂಕೆ ಪ್ರಚಾರ ತಂತ್ರಜ್ಞ ಹೊಂದಿದ್ದಾರೆ.. ಆದರೆ ಮೈತ್ರಿಕೂಟದ ಒಟ್ಟು ಶಕ್ತಿಯನ್ನು ಏಕೆ ಅವಲಂಬಿಸಬಾರದು? ಎಂಬ ಪ್ರಶ್ನೆ ಏಳುತ್ತದೆ.

“ಮೈತ್ರಿಕೂಟದ ಭಾಗವಾಗಿರುವ ಶಾಸಕರನ್ನು ಬೇಟೆಯಾಡಲು ಬಿಜೆಪಿ ಪ್ರಯತ್ನಿಸುತ್ತದೆ ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿದೆ. ಇದನ್ನು ತಡೆಗಟ್ಟಲು, ಡಿಎಂಕೆ ಸ್ವಂತವಾಗಿ ಬಹುಮತವನ್ನು ಗಳಿಸಿದ ಪಕ್ಷವಾಗಿ ಹೊರಹೊಮ್ಮಲು ಬಯಸಿದೆ” ಎಂದು ಡಿಎಂಕೆ ಮೈತ್ರಿ ಮಾತುಕತೆಗಳ ಬಗ್ಗೆ ತಿಳಿದಿರುವ ತಮಿಳುನಾಡಿನ ರಾಜಕೀಯ ಮುಖಂಡರು ದಿ ಕ್ವಿಂಟ್‌ಗೆ ತಿಳಿಸಿದ್ದಾರೆ. ಡಿಎಂಕೆ ಆರಾಮದಾಯಕವಾಗಿ ಬಹುಮತ ಪಡೆಯಲಿದೆ ಎಂದು ಅವರು ಹೇಳಿದರು.

ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹಾರುತ್ತಲೇ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಅನ್ನು ಅವಲಂಬಿಸಬೇಡಿ ಎಂದು ಪ್ರಶಾಂತ್ ಕಿಶೋರ್ ಡಿಎಂಕೆಗೆ ಸಲಹೆ ನೀಡಿದ್ದಾರೆ ಎಂದು ಡಿಎಂಕೆ ಹತ್ತಿರದ ಮೂಲವೊಂದು ತಿಳಿಸಿದೆ.

“ಕಾಂಗ್ರೆಸ್‌ನ ಪ್ರಮಾಣವು ಹೆಚ್ಚಾದರೆ ಮತ್ತು ಡಿಎಂಕೆ ಮೈತ್ರಿಕೂಟ 140 ಸ್ಥಾನಗಳ ಹತ್ತಿರದಲ್ಲಿದ್ದರೆ, ಕಾಂಗ್ರೆಸ್ ಸೇರಿ ಮಿತ್ರಪಕ್ಷಗಳ ಹಲವರು ಪಕ್ಷಾಂತರಗೊಂಡರೆ, ಸರ್ಕಾರ ರಚಿಸುವುದು ಕಷ್ಟವಾಗುತ್ತದೆ. ಎಂಬ ಲೆಕ್ಕಾಚಾರ ಈಗ ಡಿಎಂಕೆಯಲ್ಲಿ ನಡೆಯುತ್ತಿದೆ.

2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದಾಗಿನಿಂದ, ಕಾಂಗ್ರೆಸ್ ಸ್ಥಿರವಾದ ಪಕ್ಷಾಂತರಗಳನ್ನು ಕಂಡಿದೆ ಮತ್ತು ಅದರ ಉನ್ನತ ನಾಯಕರೂ ಕೂಡ ಉತ್ತಮ ರಾಜಕೀಯ ಭವಿಷ್ಯದ ಹುಡುಕಾಟದಲ್ಲಿ ಬಿಜೆಪಿಗೆ ತೆರಳಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಕಾಂಗ್ರೆಸ್ 2017 ರಲ್ಲಿ ಗೋವಾ ಮತ್ತು ಮಣಿಪುರದಲ್ಲಿ ಮತ್ತು 2020 ರಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷಾಂತರಗಳನ್ನು ಕಂಡಿದೆ. ಕಾಂಗ್ರೆಸ್ ಜೊತೆ ಸಡಿಲು ನಿಲುವು ಅನುಸರಿಸಿ ರಿಸ್ಕ್ ತೆಗೆದುಕೊಳ್ಳದಂತೆ ಪ್ರಶಾಂತ್ ರಾಜಕೀಯ ಕಾರ್ಯತಂತ್ರ ತಂಡವು ಪಕ್ಷದ ನಾಯಕತ್ವವನ್ನು ಕೇಳಿದೆ.

ಡಿಎಂಕೆ ತನ್ನದೇ ಆದ ಕನಿಷ್ಠ 150 ಸ್ಥಾನಗಳನ್ನು ಗೆಲ್ಲಲು ಕನಿಷ್ಠ 180 ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ನಂಬಿದೆ.

ಕಾಂಗ್ರೆಸ್ ಕಳಪೆ ಸಾಧನೆ

ಡಿಎಂಕೆ ಕಠಿಣ ನಿಲುವು ತಾಳಲು, 2016 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆಯೂ ಕಾರಣವಾಗಿದೆ. ಪಕ್ಷವು 40 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ ಎಂಟು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಡಿಎಂಕೆ 89 ಗೆದ್ದಿದೆ. ರಾಜ್ಯದಲ್ಲಿ ಎರಡನೇ ಬಾರಿಗೆ ಸರ್ಕಾರ ರಚಿಸಿದ ಎಐಎಡಿಎಂಕೆ 134 ಸ್ಥಾನಗಳನ್ನು ಗೆದ್ದಿತ್ತು.

ಎಬಿಪಿ ಸಿ-ವೋಟರ್ ಸಮೀಕ್ಷೆಯು ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಗೆಲ್ಲುತ್ತದೆ ಎಂದು ಅಂದಾಜಿಸಿದ ನಂತರ, ಪಕ್ಷವು ದುರ್ಬಲ ಮಿತ್ರಪಕ್ಷವನ್ನು ಅವಲಂಬಿಸಲು ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. “ರಾಹುಲ್ ಗಾಂಧಿಯವರ ಇತ್ತೀಚಿನ ಭೇಟಿಯು ಕಾಂಗ್ರೆಸ್ ಅಭಿಯಾನವನ್ನು ಹೆಚ್ಚಿಸಿದೆ” ಎಂಬುದು ಡಿಎಂಕೆಯನ್ನು ಮೆಚ್ಚಿಸಿದಂತೆ ಕಾಣುತ್ತಿಲ್ಲ. ‘ಯಾವುದೇ ಡಿಎಂಕೆ ನಾಯಕರು ಈ ಅಭಿಯಾನಗಳಿಗೆ ಹಾಜರಾಗಿಲ್ಲ” ಎಂದು ರಾಜ್ಯ ಕಾಂಗ್ರೆಸ್ ಮೂಲವೊಂದು ತಿಳಿಸಿದೆ. ಕಾಂಗ್ರೆಸ್ ಪಕ್ಷವು 2019 ರ ಲೋಕಸಭಾ ಚುನಾವಣೆಯಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದೆ.

ಕಿಶೋರ್ ಪ್ರಚಾರ ತಂತ್ರ ತಂಡವು, ಮೈತ್ರಿಕೂಟವನ್ನು ಪ್ರಬಲ ಪಕ್ಷವು (ಅಂದರೆ ಡಿಎಂಕೆ) ನಿಗದಿಪಡಿಸಿದ ಷರತ್ತುಗಳ ಮೇಲೆ ರೂಪಿಸಬೇಕು ಎಂದು ಸೂಚಿಸಿದೆ.

“ಬಿಜೆಪಿಯನ್ನು ವಿರೋಧಿಸುವ ನಾವೆಲ್ಲರೂ ಒಂದೇ ಶಕ್ತಿಯ ಭಾಗವಾಗಿದ್ದೇವೆ ಎಂಬುದನ್ನು ಡಿಎಂಕೆ ಮರೆತಿದೆ” ಎಂದು ಸ್ಥಾನ ಹಂಚಿಕೆ ಮಾತುಕತೆಗೆ ಹಾಜರಾದ ನಾಯಕರೊಬ್ಬರು ಹೇಳಿದರು. ಡಿಎಂಕೆ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರೆ, ಅದು ಮೈತ್ರಿಕೂಟದ ಆಂತರಿಕ ಚಲನಶೀಲತೆಗೆ ಹಾನಿಯಾಗಬಹುದು, ಈ ಮಧ್ಯೆ ಕಾಂಗ್ರೆಸ್ ನಾಯಕತ್ವವು “ಮಾತುಕತೆಯಲ್ಲಿ ಅವಮಾನ” ಎಂದು ಭಾವಿಸಿದೆ ಎಂದು ಆ ನಾಯಕ ಹೇಳಿದರು.

ತೋರಿಕೆಯಲ್ಲಿ ಬಿಗಿಯಾಗಿ ಕಾಣುತ್ತಿರುವ ಡಿಎಂಕೆ ತನ್ನ ಶಾಸಕ ಅಭ್ಯರ್ಥಿಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅದು ನಂಬಿದೆ. “ಪಕ್ಷವು ತನ್ನ ಶಾಸಕರಾರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಖಚಿತವಾಗಿ ನಂಬಿದೆ. ಡಿಎಂಕೆ ನಾಯಕರು ಯಾರಾದರೂ ಬಿಜೆಪಿಯನ್ನು ಬೆಂಬಲಿಸಿದರೆ ರಾಜಕೀಯದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ದ್ರಾವಿಡ ಪಕ್ಷ ಭಾವಿಸುತ್ತದೆ ”ಎಂದು ಡಿಎಂಕೆಗೆ ಹತ್ತಿರವಾದ ಮೂಲವೊಂದು ತಿಳಿಸಿದೆ.

ಅಂತಹ ಯಾವುದೇ ಪಕ್ಷಾಂತರಗಳ ಸಂಭವನೀಯತೆಯನ್ನು ಕಡಿಮೆ ಮಾಡಲು ಉತ್ತಮ ಸ್ಥಾನ ಗಳಿಕೆ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. “ನಾವು ಉತ್ತಮ ಸಂಖ್ಯೆಗಳನ್ನು ಪಡೆದರೆ, ಸರ್ಕಾರದ ಭವಿಷ್ಯವು ಸುರಕ್ಷಿತವಾಗಿರುತ್ತದೆ. ಉತ್ತಮ ಬಹುಮತವು ಯಾವುದೇ ಪಕ್ಷವನ್ನು ಉಳಿಸುತ್ತದೆ” ಎಂದು ಮೂಲ ಲೆಕ್ಕಾಚಾರ ಮಾಡಿದೆ.

ಮಾತುಕತೆ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. “ಕಾಂಗ್ರೆಸ್ ಈಗ ಕನಿಷ್ಠ 20 ಸ್ಥಾನಗಳನ್ನು ಕೇಳುತ್ತಿದೆ. ಇದು ಕಳೆದ ಚುನಾವಣೆಯಲ್ಲಿ ಸಿಕ್ಕಿದ್ದಕ್ಕಿಂತ 20 ಸ್ಥಾನಗಳು ಕಡಿಮೆ ಮತ್ತು ಈ ಚುನಾವಣೆಗೆ ಅದು ಕೇಳಿದ್ದಕ್ಕಿಂತ 10 ಕಡಿಮೆ ಇದೆ ” ಎಂದು ಸೀಟು ಹಂಚಿಕೆ ಮಾತುಕತೆ ತಿಳಿದ ರಾಜಕೀಯ ನಾಯಕ ಹೇಳಿದರು.

ಕಾಂಗ್ರೆಸ್ ಸಂಕಟವು ತನ್ನ ರಾಷ್ಟ್ರೀಯ ಎದುರಾಳಿ ಬಿಜೆಪಿಗಿಂತ ಕಠಿಣವಾಗಿದೆ. ಬಿಜೆಪಿ ಈಗಾಗಲೇ ಎಐಎಡಿಎಂಕೆ ಮೈತ್ರಿಕೂಟದಲ್ಲಿ 20 ಸ್ಥಾನಗಳನ್ನು ಪಡೆದುಕೊಂಡಿದೆ. ಅದರ ಪಾಲಿಗೆ ಅದೇ ದೊಡ್ಡದು. ಚುನಾವಣೆಯ ನಂತರ ಡಿಎಂಕೆ ಎತ್ತರವಾಗಿ ನಿಲ್ಲುತ್ತದೆಯೇ? ಅದರ ಕಠಿಣ ಚೌಕಾಶಿ ಸಮರ್ಥನೀಯವೆಂದು ತೋರುತ್ತದೆಯೇ? ಅಥವಾ ಮಿತ್ರಪಕ್ಷಗಳು ‘ನಾವು ನಿಮಗೆ ಮೊದಲೇ ಹೇಳಿದ್ದೇವು’ ಎಂದು ಹೇಳಲು ಅವಕಾಶ ಸಿಗಲಿದೆಯೇ? ಎಲ್ಲದಕ್ಕೂ ಮೇ 02ರವರೆಗೆ ಕಾಯಬೇಕಿದೆ.

ಕೃಪೆ: ದಿ ಕ್ವಿಂಟ್

ಅನುವಾದ: ಮಲ್ಲನಗೌಡರ್ ಪಿ.ಕೆ


ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘಿಸಿದ ಅಮಿತ್ ಶಾ ವಿರುದ್ಧ ಕ್ರಮವೇಕಿಲ್ಲ: ನೆಟ್ಟಿಗರ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...