ಪಾಟ್ನಾ ಸಭೆಯಲ್ಲಿ ರಾಜ್ಯಪಾಲ ರವಿ ಅವರನ್ನು ಟೀಕಿಸಿದ ತಮಿಳುನಾಡು ಸ್ಪೀಕರ್ ಅಪ್ಪಾವು

ತಮಿಳುನಾಡು ವಿಧಾನಸಭಾ ಸ್ಪೀಕರ್ ಎಂ. ಅಪ್ಪಾವು ಸೋಮವಾರ ಪಾಟ್ನಾದಲ್ಲಿ ನಡೆದ 85ನೇ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನದಿಂದ ಹೊರನಡೆದರು. “ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ಮತ್ತು ಅಲ್ಲಿನ ಜನರು, ರಾಜ್ಯ ಶಾಸಕಾಂಗವನ್ನು ಅಗೌರವಿಸಿದ್ದಾರೆ” ಎಂದು ಆರೋಪಿಸಿದರು. ರಾಜ್ಯಪಾಲರ ‘ಕಳವಳಕಾರಿ’ ಚಟುವಟಿಕೆಗಳ ಬಗ್ಗೆ ಅಪ್ಪಾವು ಕಳವಳ ವ್ಯಕ್ತಪಡಿಸಿದರು. ರಾಜ್ಯಪಾಲರ ನೇಮಕಾತಿ ಕುರಿತು ಬಹು ಆಯೋಗಗಳ ಶಿಫಾರಸುಗಳನ್ನು ಅವರು ಉಲ್ಲೇಖಿಸಿ, ರಾಜ್ಯ ಶಾಸಕಾಂಗವು ನಿರ್ಣಯದ ಮೂಲಕ ರಾಜ್ಯಪಾಲರನ್ನು ಪದಚ್ಯುತಗೊಳಿಸುವ ಅಧಿಕಾರವನ್ನು ಹೊಂದಿರಬೇಕು ಎಂದು ವಾದಿಸಿದರು. ಸಂವಿಧಾನದ 156 … Continue reading ಪಾಟ್ನಾ ಸಭೆಯಲ್ಲಿ ರಾಜ್ಯಪಾಲ ರವಿ ಅವರನ್ನು ಟೀಕಿಸಿದ ತಮಿಳುನಾಡು ಸ್ಪೀಕರ್ ಅಪ್ಪಾವು