ತಮಿಳುನಾಡು| ದಲಿತರಿಗೆ ವಿಭೂತಿ ನೀಡಲು ನಿರಾಕರಿಸಿದ ದೇವಾಲಯದ ಅರ್ಚಕ; ಎಫ್‌ಐಆರ್ ದಾಖಲು

ಜುಲೈ 6 ರಂದು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕಲಿಯುಗ ಮೆಯ್ಯ ಅಯ್ಯನಾರ್ ದೇವಾಲಯದ ಅರ್ಚಕರು ದಲಿತರಿಗೆ ವಿಭೂತಿ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ದೂರಿನ ಆಧಾರದ ಮೇಲೆ, ದೇವಾಲಯದ ಅರ್ಚಕರಾದ ಗಣೇಶ್ ಮತ್ತು ಸಂಬಂಧಂ ಗುರುಕ್ಕಲ್ ಎಂ ಅನ್ಬುಸೆಲ್ವಂ ಎಂಬುವವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಡವಲಂ ಪಂಚಾಯತ್‌ನ ದಲಿತ ನಿವಾಸಿಗಳಿಗೆ ದೀಪಾರಾಧನೆ ಸಮಯದಲ್ಲಿ ದೇವಾಲಯದ ಅರ್ಚಕರು ವಿಭೂತಿ ನೀಡಲು ನಿರಾಕರಿಸಿದ್ದಾರೆ. “ನಿಮ್ಮಂತಹ ಜನರಿಗೆ ನಾವು ವಿಭೂತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ … Continue reading ತಮಿಳುನಾಡು| ದಲಿತರಿಗೆ ವಿಭೂತಿ ನೀಡಲು ನಿರಾಕರಿಸಿದ ದೇವಾಲಯದ ಅರ್ಚಕ; ಎಫ್‌ಐಆರ್ ದಾಖಲು