ನಿನ್ನೆ ತಮಿಳುನಾಡಿನಾದ್ಯಂತ ಐತಿಹಾಸಿಕ ಪೊಂಗಲ್ ಹಬ್ಬ ಮತ್ತು ಜಲ್ಲಿಕಟ್ಟು ಕ್ರೀಡೆ ಜರುಗಿತು. ಆದರೆ ಮಧುರೈನಲ್ಲಿ ನಡೆದ ಜಲ್ಲಿಕಟ್ಟು ನಡೆಯುತ್ತಿರುವಾಗಲೇ ಐವರು ಯುವಕರು ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ. ಕಪ್ಪು ಬಟ್ಟೆ ಪ್ರದರ್ಶಿಸಿದ ಯುವಕರು ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧುರೈ ಜಿಲ್ಲೆಯ ಅವನಿಯಪುರಂ ನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿಈ ಘಟನೆ ನಡೆದಿದ್ದು ಇದರಿಂದ ಕೆಲಕಾಲ ಕ್ರೀಡೆಯನ್ನು ನಿಲ್ಲಿಸಲಾಗಿತ್ತು. ಪೊಲೀಸರು ಐವರು ಯುವಕರನ್ನು ಬಂಧಿಸಿ ಕೆಲಹೊತ್ತಿನ ನಂತರ ಬಿಡುಗಡೆ ಮಾಡಿದ್ದಾರೆ. ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
#Jallikattu bull tamers in #Madurai shout slogans against the centre's proposed #FarmLaws
They have been detained.#RahulGandhi #TNElections2021 #FarmersProtest #FarmerProtests #FarmBills pic.twitter.com/gUpOl0AR85
— Smitha T K (@smitha_tk) January 14, 2021
ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮಿಳುನಾಡು ಕೇಂದ್ರದ ಎಲ್ಲಾ ನಿರ್ಧಾರಗಳಿಗೂ ವಿಶಿಷ್ಠವಾಗಿ ಪ್ರತಿರೋಧ ತೋರುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ.
ನಿನ್ನೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಮಧುರೈಗೆ ತೆರಳಿ ಪೊಂಗಲ್ ಹಬ್ಬದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಜಲ್ಲಿಕಟ್ಟು ವೀಕ್ಷಿಸಿದ್ದರು. ಕಾರ್ಯಕ್ರಮದ ನಡುವೆ ಕೃಷಿ ಕಾಯ್ದೆಗಳನ್ನು ವಿರೋಧಿಸುವ ಮೂಲಕ ರೈತರ ಪರವಿದ್ದೇನೆ ಎಂದು ಘೋಷಿಸಿದ್ದರು. ಜೊತೆಗೆ ತಳಸಮುದಾಯದ ಜನರೊಡನೆ ಬೆರತು ಸಹಭೋಜನ ಮಾಡುವ ಮೂಲಕ ಗಮನ ಸೆಳೆದಿದ್ದರು.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ



