ಜುಲೈ 1 ರಿಂದ ಆಧಾರ್-ದೃಢೀಕೃತ ಬಳಕೆದಾರರು ಮಾತ್ರ ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ಬುಧವಾರ ಪ್ರಕಟಿಸಿದೆ. ಜುಲೈ 15 ರಿಂದ ಆನ್‌ಲೈನ್‌ನಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್ ಆಧಾರಿತ OTP ದೃಢೀಕರಣವು ಕಡ್ಡಾಯವಾಗಲಿದೆ. ಜುಲೈ 1 ರಿಂದ ಆಧಾರ್
ಪ್ರಯಾಣದ ದಿನಾಂಕಕ್ಕಿಂತ ಒಂದು ದಿನ ಮೊದಲು ರೈಲು ಟಿಕೆಟ್‌ಗಳನ್ನು ಬುಕ್ ಮಾಡುವ ವ್ಯವಸ್ಥೆಯಾಗಿದೆ ತತ್ಕಾಲ್. ಈ ವ್ಯವಸ್ಥೆಯು ಕೊನೆ ಕ್ಷಣದಲ್ಲಿ ಪ್ರಯಾಣವನ್ನು ಯೋಜಿಸುವವರಿಗೆ ಸಹಾಯ ಮಾಡುತ್ತದೆ.
“ಸಿಸ್ಟಮ್-ರಚಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆಗಳು/ಅಧಿಕೃತ ಏಜೆಂಟ್‌ಗಳ ಗಣಕೀಕೃತ PRS (ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್) ಕೌಂಟರ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಯ ಮೂಲಕ ಕಳುಹಿಸಲಾಗುತ್ತದೆ.” ಎಂದು ರೈಲ್ವೆ ಸಚಿವಾಲಯದ ಪತ್ರಿಕಾ ಪ್ರಕಟಣೆಯು ಹೇಳಿದೆ. ಈ ನಿಬಂಧನೆಯು ಜುಲೈ 15 ರಿಂದ ಜಾರಿಗೆ ಬರಲಿದೆ.
ಎಸಿ ಮತ್ತು ಎಸಿ ಅಲ್ಲದ ಎರಡೂ ಕ್ಲಾಸ್‌ಗಳಿಗೆ ತತ್ಕಾಲ್ ಬುಕಿಂಗ್ ಪ್ರಾಂಭವಾದ ಮೊದಲ 30 ನಿಮಿಷಗಳಲ್ಲಿ ಯಾವುದೇ ಏಜೆಂಟ್‌ಗೆ ಬುಕಿಂಗ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ರೈಲ್ವೆ ನಿರ್ಧರಿಸಿದೆ. ನಿರ್ಧಾರವನ್ನು ದೃಢೀಕರಿಸಿರುವ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿನ ಮಾರ್ಪಾಡುಗಳು ಬಳಕೆದಾರರ ದೃಢೀಕರಣವನ್ನು ಹೆಚ್ಚಿಸುವ ಮತ್ತು ಮೋಸದ ಏಜೆಂಟ್‌ಗಳಿಂದ ದುರುಪಯೋಗವನ್ನು ತಡೆಯುವ ಗುರಿಯನ್ನು ಹೊಂದಿವೆ ಎಂದು ಹೇಳಿದ್ದಾರೆ.
ಸಚಿವಾಲಯವು ಹೊಸ ಕಾರ್ಯವಿಧಾನವನ್ನು ವಿವರಿಸುತ್ತಾ, “ಈ ವರ್ಷ ಜುಲೈ 15 ರಿಂದ ಆನ್‌ಲೈನ್‌ನಲ್ಲಿ ಮಾಡುವ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯವಾಗಲಿದೆ.” ಎಂದು ಹೇಳಿದೆ. ಹವಾನಿಯಂತ್ರಿತ ಕ್ಲಾಸ್‌ಗಳಿಗೆ ಬೆಳಿಗ್ಗೆ 10 ರಿಂದ ಬೆಳಿಗ್ಗೆ 10.30 ರವರೆಗೆ ಮತ್ತು ಹವಾನಿಯಂತ್ರಿತವಲ್ಲದ ಕ್ಲಾಸ್‌ಗಳಿಗೆ ಬೆಳಿಗ್ಗೆ 11 ರಿಂದ ಬೆಳಿಗ್ಗೆ 11.30 ರವರೆಗೆ ನಿರ್ಬಂಧಗಳು ಅನ್ವಯಿಸುತ್ತವೆ.
ಬುಕಿಂಗ್ ವಿಂಡೋ ತೆರೆದ ತಕ್ಷಣದ ಅವಧಿಯಲ್ಲಿ ಬೃಹತ್ ಬುಕಿಂಗ್‌ಗಳನ್ನು ತಡೆಯುವುದು ನಿರ್ಬಂಧಗಳ ಉದ್ದೇಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅದಾಗ್ಯೂ, ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಇದು ಅಪ್ರಬುದ್ಧ ನಡೆ ಎಂದು ಹೇಳಿದ್ದಾರೆ. “ತತ್ಕಾಲ್ ಟಿಕೆಟ್ ಪ್ರಾರಂಭವಾದ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಅಂತದ್ದರಲ್ಲಿ ಒಟಿಪಿ ಬಂದು ಬುಕ್ ಮಾಡುವಷ್ಟರಲ್ಲಿ ಇದು ಇನ್ನಷ್ಟು ಅಧ್ವಾನ ಸೃಷ್ಟಿಯಾಗುತ್ತದೆ. ವಂಚನೆ ಮಾಡುವವರು ಎಲ್ಲದಕ್ಕೂ ಒಂದು ದಾರಿಯನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಆದರೆ ಇದರಿಂದ ತೊಂದರೆಗೆ ಒಳಗಾಗುವುದು ಸಾಮಾನ್ಯ ಜನರು ಮಾತ್ರವೆ” ಎಂದು ಹೇಳಿದ್ದಾರೆ.
ಈಗಾಗಲೆ ಸರ್ಕಾರಿ ವ್ಯವಸ್ಥೆಯಲ್ಲಿ ಒಂದೊಂದು ಒಟಿಪಿ ಬರಲು ಕೆಲವೊಮ್ಮ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯಿದೆ. ಅಂತದ್ದರಲ್ಲಿ ಟಿಕೆಟ್ ಬುಕ್ ಮಾಡಲು ಕೂಡಾ ಒಟಿಪಿ ಕೇಳುವುದು ಅನ್ಯಾಯ. ಅಷ್ಟಕ್ಕೂ ಈ ದೇಶದ 93% ಜನರಿಗಷ್ಟೆ ಆಧಾರ್ ಇವೆ. ಇಲ್ಲದವರಿಗೆ ತತ್ಕಾಲ್ ಬುಕ್ ಮಾಡಲು ಅವಕಾಶ ನೀಡದಿರುವುದು ಅಸಮಾನತೆ ಅಲ್ಲವೆ? ಸರ್ಕಾರದ ಈ ಕ್ರಮವು ಜನಸಾಮಾನ್ಯರನ್ನು ರೈಲ್ವೆಯಿಂದ ದೂರ ಸರಿಸುವ ಅದರ ಅಜೆಂಡಾದ ಭಾಗ ಎಂದು ಸಾಮಾಜಿಕ ಮಾದ್ಯಮ ಬಳಕೆದಾರರೊಬ್ಬರು ಹೇಳಿದ್ದಾರೆ. ಜುಲೈ 1 ರಿಂದ ಆಧಾರ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಾಕಿಸ್ತಾನ ಪರ ಬೇಹುಗಾರಿಕೆ | ಬಂಧಿತ ಯೂಟ್ಯೂಬರ್ ಜ್ಯೋತಿ ಜಾಮೀನು ಅರ್ಜಿ ತಿರಸ್ಕೃತ
ಪಾಕಿಸ್ತಾನ ಪರ ಬೇಹುಗಾರಿಕೆ | ಬಂಧಿತ ಯೂಟ್ಯೂಬರ್ ಜ್ಯೋತಿ ಜಾಮೀನು ಅರ್ಜಿ ತಿರಸ್ಕೃತ

