‘ತಾಂತ್ರಿಕ ಸಮಸ್ಯೆ’: ಮಹಿಳೆಯರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಟ್ಟ ಬಗ್ಗೆ ತಾಲಿಬಾನ್ ಸಚಿವ ಪ್ರತಿಕ್ರಿಯೆ

ನವದೆಹಲಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ಹೊರಗಿಟ್ಟಿರುವುದು ಉದ್ದೇಶಪೂರ್ವಕವಾಗಿರಲಿಲ್ಲ, ಅದು ತಾಂತ್ರಿಕ ಸಮಸ್ಯೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೇಳಿದ್ದಾರೆ. ಭಾನುವಾರ (ಅ.12) ಎರಡನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಕಿ, “ಶುಕ್ರವಾರದ ಪತ್ರಿಕಾಗೋಷ್ಠಿಯನ್ನು ಕಡಿಮೆ ಅವಧಿಯಲ್ಲಿ ಆಯೋಜಿಸಲಾಗಿತ್ತು. ಭಾಗವಹಿಸುವವರ ಪಟ್ಟಿಯನ್ನೂ ನಿರ್ದಿಷ್ಟ ಪತ್ರಕರ್ತರೊಂದಿಗೆ ಸೇರಿ ಸಿದ್ಧಪಡಿಸಲಾಗಿತ್ತು. ಹಾಗಾಗಿ, ಇದು ಹೆಚ್ಚಾಗಿ ತಾಂತ್ರಿಕ ಸಮಸ್ಯೆಯಾಗಿದೆ. ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಹೊರಗಿಟ್ಟಿಲ್ಲ ಎಂದಿದ್ದಾರೆ. ಎರಡನೇ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಭಾಗವಹಿಸಿದ್ದರು. ಮುತ್ತಕಿ ಆರು ದಿನಗಳ ಭಾರತ … Continue reading ‘ತಾಂತ್ರಿಕ ಸಮಸ್ಯೆ’: ಮಹಿಳೆಯರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಟ್ಟ ಬಗ್ಗೆ ತಾಲಿಬಾನ್ ಸಚಿವ ಪ್ರತಿಕ್ರಿಯೆ