ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಚೆನ್ನೂರು ಮಂಡಲದ ಶಿವಲಿಂಗಪುರ ಮತ್ತು ಅಕ್ಕೆಪಲ್ಲಿ ಗ್ರಾಮದ ಮಹಿಳೆಯರು ಕಾಡಿನಲ್ಲಿ ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿ ಶನಿವಾರದಂದು ಅರಣ್ಯಾಧಿಕಾರಿಗಳು ಐವರು ಆದಿವಾಸಿ ಮಹಿಳೆಯರನ್ನು ಬಲವಂತವಾಗಿ ಚೆನ್ನೂರು ಅರಣ್ಯ ಶಿಬಿರದ ಕಚೇರಿಯಲ್ಲಿ ಬಂಧಿಸಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯರನ್ನು ಎರಡು ಗಂಟೆಗಳ ಕಾಲ ಕ್ಯಾಂಪ್ ಕಚೇರಿಯಲ್ಲಿ ಬೀಗ ಹಾಕಲಾಗಿದ್ದು, ಇದನ್ನು ವಿರೋಧಿಸಿದ್ದಕ್ಕೆ ದೈಹಿಕ ಹಲ್ಲೆ ಕೂಡಾ ನಡೆಸಲಾಗಿದೆ ಎಂದು ವರದಿಯಾಗಿದೆ. 25 ವರ್ಷಕ್ಕೂ ಹೆಚ್ಚು ಕಾಲ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಸರಕಾರಿ ಜಮೀನಿನಲ್ಲಿ ಮರ ಕಡಿಯುತ್ತೇವೆ ಎಂದು ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೆಲವು ಮಹಿಳೆಯರು ಪೋಡು ಜಮೀನುಗಳಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಮರಗಳನ್ನು ಕಡಿದಿದ್ದು, ಇದಕ್ಕಾಗಿ ಮಹಿಳೆಯರನ್ನು ಕಚೇರಿಯೊಳಗೆ ಹಾಕಿ ಬೀಗ ಹಾಕಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ತಮ್ಮ ವಿರುದ್ಧ ನಡೆಸುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ, ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಾಗಿ ಸಂಜೆ ವೇಳೆಗೆ ಮಹಿಳೆಯರನ್ನು ಬಿಡುಗಡೆ ಮಾಡಲಾಯಿತು ಎಂದು ವರದಿ ಉಲ್ಲೇಖಿಸಿವೆ.
ಇದನ್ನೂ ಓದಿ: “ಆದಿವಾಸಿಗಳ ಬದುಕನ್ನು ಅಧ್ಯಯನ ಮಾಡುತ್ತಾ ದಲಿತಳಾದ ನನ್ನ ಬದುಕಿನ ಜೊತೆಗೂ ಸಮೀಕರಿಸಿಕೊಳ್ಳಲು ಸಾಧ್ಯವಾಯ್ತು”: ಕೆ.ಪಿ ಅಶ್ವಿನಿ
ಘಟನೆಯನ್ನು ವಿರೋಧಿಸಿ ಗ್ರಾಮಸ್ಥರು ಅರಣ್ಯ ಕ್ಯಾಂಪ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ತಾವು ಸಾಗುವಳಿ ಮಾಡುತ್ತಿರುವ ಜಮೀನಿನ ದಾಖಲೆಗಳನ್ನು ನೀಡಬೇಕು ಎಂದು ಚೆನ್ನೂರು ಶಾಸಕ ಬಾಲ್ಕ ಸುಮನ್ ಅವರಿಗೆ ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆದಿವಾಸಿಗಳು ಎಚ್ಚರಿಸಿದ್ದಾರೆ.
ಪೋಡು ಎಂಬುದು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳು ಶತಮಾನಗಳಿಂದ ಮಾಡಲ್ಪಡುವ ಒಂದು ಸಾಂಪ್ರದಾಯಿಕ ಕೃಷಿ ಅಥವಾ ಪಾಳಿ ಕೃಷಿಯ ಒಂದು ಸಾಂಪ್ರದಾಯಿಕ ರೂಪವಾಗಿದೆ. ಅದಿಲಾಬಾದ್, ಮಂಚೇರಿಯಲ್, ಮಹಬೂಬ್‌ನಗರ ಮತ್ತು ಖಮ್ಮಂ ಜಿಲ್ಲೆಗಳ ಅರಣ್ಯ ಪ್ರದೇಶದ ಗಡಿಯಲ್ಲಿ ವಾಸಿಸುವ ನಿವಾಸಿಗಳು ಪೋಡು ಭೂಮಿಯನ್ನು ಸಾಗುವಳಿ ಮಾಡುತ್ತಿದೆ.
ಪೋಡು ಭೂಮಿಯಲ್ಲಿ ಸಾಗುವಳಿ ಹಕ್ಕು ಕೋರಿ ಸಾವಿರಾರು ಅರ್ಜಿಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ. ಈ ಭೂಮಿಯನ್ನು ಅರಣ್ಯ ಇಲಾಖೆಯು ಸರ್ಕಾರಿ ಭೂಮಿ ಎಂದು ಹೇಳಿಕೊಂಡಿದೆ. ಪೋಡು ಭೂಮಿ ಹಕ್ಕು ವಿಚಾರವಾಗಿ ಅಧಿಕಾರಿಗಳು ಹಾಗೂ ಆದಿವಾಸಿಗಳ ನಡುವೆ ಹಲವು ವರ್ಷಗಳಿಂದ ಜಟಾಪಟಿ ನಡೆಯುತ್ತಲೇ ಇದೆ.
ಇದನ್ನೂ ಓದಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ
ನವೆಂಬರ್ 2021 ರಲ್ಲಿ, ತೆಲಂಗಾಣ ಸರ್ಕಾರವು ಅರ್ಹ ಹಕ್ಕುದಾರರಿಗೆ ಭೂಮಿಯ ಹಕ್ಕು ಪತ್ರಗಳನ್ನು ನೀಡುವುದಾಗಿ ಘೋಷಿಸಿತು, ಆದರೆ ಅದನ್ನು ಅದೇ ವರ್ಷ ಡಿಸೆಂಬರ್‌ನಲ್ಲಿ ಥಟ್ಟನೆ ನಿಲ್ಲಿಸಲಾಯಿತು. ಈ ವರ್ಷ ಜುಲೈ 7 ರಂದು ಮಂಚೇರಿಯಲ್ ಜಿಲ್ಲೆಯ ದಂಡೆಪಲ್ಲಿ ಮಂಡಲದ ಕೊಯಪೋಶಗುಡೆಂ ಗ್ರಾಮದಲ್ಲಿ ಅರಣ್ಯ ಇಲಾಖೆ ನೌಕರರು ವಿವಾದಿತ ಅರಣ್ಯ ಭೂಮಿಯಲ್ಲಿ ರೈತರು ನಿರ್ಮಿಸಿದ್ದ ಗುಡಿಸಲುಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದರು. ಇದನ್ನು ರೈತರು ವಿರೋಧಿಸಿದಾಗ ಅರಣ್ಯಾಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.


