ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ 2018 ರಲ್ಲಿ ನಡೆದ 23 ವರ್ಷದ ದಲಿತ ಯುವಕನ ಮರ್ಯಾದಾಗೇಡು ಹತ್ಯೆಗೆ ಸಂಬಂಧಿಸಿದಂತೆ ರಾಜ್ಯದ ನ್ಯಾಯಾಲಯವು ಸೋಮವಾರದಂದು ಅಪರಾಧಿಗಳಲ್ಲಿ ಒಬ್ಬ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ತೆಲಂಗಾಣ ಮರ್ಯಾದಾಗೇಡು ಹತ್ಯೆ
ದಲಿತ ಪ್ರಣಯ್ ಅವರನ್ನು ಕೊಲ್ಲಲು ಆರೋಪಿ ಸುಭಾಷ್ ಶರ್ಮಾ ಅವರನ್ನು ನೇಮಿಸಲಾಗಿತ್ತು ಎಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿದೆ. ನ್ಯಾಯಾಲಯವು ಶರ್ಮಾಗೆ 15,000 ರೂ. ಮತ್ತು ಇತರ ಆರು ಅಪರಾಧಿಗಳಿಗೆ ತಲಾ 10,000 ರೂ. ದಂಡವನ್ನು ವಿಧಿಸಿದೆ. ತೆಲಂಗಾಣ ಮರ್ಯಾದಾಗೇಡು ಹತ್ಯೆ
ಸೆಪ್ಟೆಂಬರ್ 14, 2018 ರಂದು ನಲ್ಗೊಂಡದ ಆಸ್ಪತ್ರೆಯಿಂದ ಹೊರಬರುತ್ತಿದ್ದಾಗ, ‘ಮೇಲ್ಜಾತಿ’ಯ ಕುಟುಂಬಕ್ಕೆ ಸೇರಿದ ಅವರ ಗರ್ಭಿಣಿ ಪತ್ನಿ ಅಮೃತ ವರ್ಷಿಣಿ ಅವರ ಮುಂದೆಯೆ ಪ್ರಣಯ್ ಅವರನ್ನು ಕೊಂದು ಹಾಕಲಾಗಿತ್ತು.
ಪ್ರಣಯ್ ಮತ್ತು ಅಮೃತ ವರ್ಷಿಣಿಯವರ ಕುಟುಂಬವು ಅವರ ಪ್ರೇಮ ಸಂಬಂಧವನ್ನು ವಿರೋಧಿಸಿದ್ದರಿಂದ ದಂಪತಿಗಳು 2018 ರ ಜನವರಿಯಲ್ಲಿ ಓಡಿಹೋಗಿ ವಿವಾಹವಾಗಿದ್ದರು. ಕೊಲೆಯಾದ ಒಂದು ದಿನದ ನಂತರ, ತನ್ನ ಗಂಡನ ಕೊಲೆಗೆ ತನ್ನ ತಂದೆ ಟಿ. ಮಾರುತಿ ರಾವ್ ಅವರೆ ಕಾರಣ ಎಂದು ಅಮೃತ ವರ್ಷಿಣಿ ಅವರು ಆರೋಪಿಸಿದ್ದರು.
2019 ರಲ್ಲಿ, ನಲ್ಗೊಂಡ ಪೊಲೀಸರು ಕೊಲೆ (302), ಕ್ರಿಮಿನಲ್ ಪಿತೂರಿ (120B), ಪ್ರಚೋದನೆ (109) ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರ. ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಹೆಸರಿಸಲಾಗಿತ್ತು.
ಅದಾಗ್ಯೂ, 2020 ಮಾರ್ಚ್ ತಿಂಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಮಾರುತಿ ರಾವ್ ಹೈದರಾಬಾದ್‌ನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಮಾರುತಿ ರಾವ್ ಅವರು ತನ್ನ ಮಗಳ ಗಂಡ ಪ್ರಣಯ್ ಅವರನ್ನು ಕೊಲೆ ಮಾಡಲು ಸುಭಾಷ್ ಶರ್ಮಾಗೆ 1 ಕೋಟಿ ರೂ. ಪಾವತಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
ದುಷ್ಕರ್ಮಿ ಶರ್ಮಾ ಪ್ರಣಯ್ ಅವರನ್ನು ಅಮೃತ ವರ್ಷಿಣಿ ಅವರ ಮುಂದೆಯೆ ಹತ್ಯ ಮಾಡುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಭಾರತದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಭಾಲ್ ಮಸೀದಿಯ ಹೊರ ಗೋಡೆಗೆ ಸುಣ್ಣ ಬಳಿದರೆ ಸಮಸ್ಯೆ ಏನು? – ಅಲಹಾಬಾದ್ ಹೈಕೋರ್ಟ್
ಸಂಭಾಲ್ ಮಸೀದಿಯ ಹೊರ ಗೋಡೆಗೆ ಸುಣ್ಣ ಬಳಿದರೆ ಸಮಸ್ಯೆ ಏನು? – ಅಲಹಾಬಾದ್ ಹೈಕೋರ್ಟ್

