ದೇಶದಲ್ಲಿ ಪೆಟ್ರೋಲ್ ಬೆಲೆ ಬೆಲೆ ದಿನೇ ಏರಿಕೆಯಾಗುತ್ತಿದೆ. 100 ರೂ ಗಡಿ ದಾಟಿ ದೇಶದ ಅನೇಕ ಕಡೆ 110 ರೂ ವರೆಗೆ ತಲುಪಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. 100 ನಾಟೌಟ್ ಹೆಸರಿನಲ್ಲಿ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದೆ. ಆದರೆ ವಿನೂತನ ಅಥವಾ ವಿಚಿತ್ರ ಎನ್ನುವ ರೀತಿಯಲ್ಲಿ ಹೈದರಾಬಾದ್‌ನಲ್ಲಿ ಪ್ರತಿಭಟನೆಯೊಂದು ನಡೆದಿದೆ. ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
Bizarre. So, this is how #Telangana #Congress youth workers/activists thought they should protest against the rising fuel prices- by throwing a bike into Hussain Sagar in #Hyderabad– a water body in the heart of the city. #Congress #PetrolDieselPriceHike pic.twitter.com/9mhRfz8mK1
— Rishika Sadam (@RishikaSadam) June 11, 2021
ತೆಲಂಗಾಣದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳದ ಪ್ರತಿಭಟನೆಯ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ತೆಲಂಗಾಣ ಯುವ ಕಾಂಗ್ರೆಸ್ ಕಾರ್ಯಕರ್ತರು ದ್ವಿ ಚಕ್ರ ವಾಹನವೊಂದನ್ನು ಕೆರೆಗೆ ಎಸೆಯುವ ಮೂಲಕ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹೈದ್ರಾಬಾದ್ ನ ಯುವ ಕಾಂಗ್ರೆಸ್ ಘಟಕವು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿ ಸಮೀಪದ ಹುಸೇನ್ ಸಾಗರ್ ಸರೋವರಕ್ಕೆ ದ್ವಿ ಚಕ್ರವಾಹನವೊಂದನ್ನು ಎಸೆದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಯ ಸಂದರ್ಭದಲ್ಲಿ ತೆಲೆಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕರಾದ ಎನ್. ಉತ್ತಮಕುಮಾರ್ ರೆಡ್ಡಿ, ರವೀಶ್‌ಕುಮಾರ್ ರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು. ಕಾಂಗ್ರೆಸ್ ದೇಶಾದ್ಯಂತ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿುಭಟನೆ ಹಮ್ಮಿಕೊಂಡಿದೆ. ಅದರ ಭಾಗವಾಗಿ ಈ ಬೈಕ್ ಎಸೆದು ಆಕ್ರೋಶ ಹೊರಹಾಕಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಕೆರೆಗೆ ಬೈಕ್ ಎಸೆದಿರುವುದು ಸರಿಯಲ್ಲ. ನದಿ, ಕೆರೆಗಳಿಗೆ ತ್ಯಾಜ್ಯವನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಬೇರೆ ರೀತಿಯಲ್ಲಿ ಪೆಟ್ರೋಲ್ ವಾಹನಗಳ ಬದಲಿಗೆ ಸೈಕಲ್ ಬಳಕೆ ಆರಂಭಿಸಿ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಬೇಕು. ಅದರಿಂದ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ಡಾಲರ್‌ಗೆ ಬೈಬೈ ಹೇಳಿದ ರಷ್ಯಾ: ಮುರಿಯಲಿದೆಯೆ ಅಮೆರಿಕನ್ ಡಾಲರ್ ಏಕಾಧಿಪತ್ಯ


