Homeಕರೋನಾ ತಲ್ಲಣಅನ್‌ಲಾಕ್‌ 3: ಚಿತ್ರಮಂದಿರ, ಜಿಮ್‌ ತೆರೆಯಲು ಅವಕಾಶ..

ಅನ್‌ಲಾಕ್‌ 3: ಚಿತ್ರಮಂದಿರ, ಜಿಮ್‌ ತೆರೆಯಲು ಅವಕಾಶ..

ಚಿತ್ರಮಂದಿರಗಳ ಸಂಘವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ 25-30 ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ಕಾರ್ಯನಿರ್ವಹಿಸಲು ಅನುಮತಿಸುವಂತೆ ಶಿಫಾರಸು ಮಾಡಿದೆ.

- Advertisement -
- Advertisement -

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಹೊರಬರುವ ಅನ್‌ಲಾಕ್ 3 ಭಾಗವಾಗಿ ಚಿತ್ರಮಂದಿರ ಹಾಗೂ ಜಿಮ್‌ಗಳನ್ನು ಹಲವಾರು ನಿರ್ಬಂಧಗಳೊಂದಿಗೆ ಮತ್ತೆ ತೆರೆಯಲು ಅನುಮತಿಸುವ ಮನವಿಯನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಶಾಲಾ ಮತ್ತು ಕಾಲೇಜುಗಳು ಆನ್‌ಲೈನ್ ತರಗತಿಗಳೊಂದಿಗೆ ಮುಂದುವರಿಯಲಿವೆ ಎಂದು ಅದು ತಿಳಿಸಿದೆ.

ಚಿತ್ರಮಂದಿರಗಳ ಸಂಘವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಶೇ. 25-30 ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ಕಾರ್ಯನಿರ್ವಹಿಸಲು ಅನುಮತಿಸುವಂತೆ ಶಿಫಾರಸು ಮಾಡಿದೆ. ವಿನಂತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ.

ಅನೇಕ ನಿರ್ಬಂಧಗಳೊಂದಿಗೆ ಜಿಮ್‌ಗಳು ಸಹ ತೆರೆಯಬಹುದು ಎಂದು ಮೂಲಗಳು ತಿಳಿಸಿವೆ.

ಮೆಟ್ರೊ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರ ಕೇಂದ್ರವನ್ನು ಕೇಳಿಕೊಂಡಿತ್ತು, ಆದರೆ ಈ ಕುರಿತು ಕೇಂದ್ರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಮುಂದಿನ ತಿಂಗಳಲ್ಲಿ ಅನೇಕ ಹಬ್ಬಗಳು ನಡೆಯುವುದರಿಂದ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಕೇಂದ್ರವು ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತವು ದಿನಕ್ಕೆ ಸುಮಾರು 50,000 ಕೊರೊನಾ ಪ್ರಕರಣಗಳನ್ನು ವರದಿ ಮಾಡುತ್ತಿರುವುದರಿಂದ ಈ ನಿರ್ಧಾರವು ದುಬಾರಿಯಾಗಿದೆ. ದೇಶದಲ್ಲಿ ಇದುವರೆಗೆ ಒಟ್ಟು 14.35 ಲಕ್ಷ ಪ್ರಕರಣಗಳು ಮತ್ತು 32,771 ಸಾವುಗಳು ಸಂಭವಿಸಿವೆ. ಅಮೆರಿಕಾ ಮತ್ತು ಬ್ರೆಜಿಲ್ ನಂತರ ಜಾಗತಿಕವಾಗಿ ಕೊರೊನಾ ಸಾಂಕ್ರಮಿಕದಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ.

ಚಿತ್ರಮಂದಿರಗಳು ಮತ್ತು ಜಿಮ್‌ಗಳನ್ನು ಪುನಃ ತೆರೆಯಲು ಕೇಂದ್ರವು ಮುಂದಾಗುತ್ತಿದ್ದರು, ಇದರ ಅಂತಿಮ ತೀರ್ಮಾನವನ್ನು ರಾಜ್ಯಗಳು ತೆಗೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ವಿಶ್ವಾದ್ಯಂತ 6 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಹರಡುವುದನ್ನು ನಿಧಾನಗೊಳಿಸಲು ಮಾರ್ಚ್ ಅಂತ್ಯದಲ್ಲಿ ಭಾರತದಾದ್ಯಂತ ಲಾಕ್‌ಡೌನ್ ಹೇರಲಾಗಿದ್ದರಿಂದ ಸಿನೆಮಾ, ಜಿಮ್‌ಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಲಾಕ್‌ಡೌನ್‌ನನ್ನು ಹಂತಹಂತವಾಗಿ ತೆರವು ಮಾಡಲಾಗುತ್ತಿದೆ. ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಗಳೊಂದಿಗೆ ಅನುಮತಿಸಲಾಗಿದೆ. ಸೀಮಿತ ವಿಮಾನಗಳು ಮತ್ತು ರೈಲು ಸೇವೆಗಳನ್ನು ಸಹ ಪುನರಾರಂಭಿಸಲಾಗಿದೆ.


ಓದಿ: ಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...