Homeಕರ್ನಾಟಕರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌‌

ರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌‌

ಕೆಂಪುಕೋಟೆ ಬಳಿ ನಡೆದಿರುವ ಅಹಿತಕರ ಘಟನೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇಡೀ ರೈತ ಹೋರಾಟವನ್ನು ಇಲ್ಲವಾಗಿಸುವ ಕೆಲಸ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

- Advertisement -
- Advertisement -

ಜನವರಿ 26 ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿರುವ ಅಹಿತಕರ ಘಟನೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇಡೀ ರೈತ ಹೋರಾಟವನ್ನು ಇಲ್ಲವಾಗಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ​ ರಮೇಶ್​ ಕುಮಾರ್​ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. “ರೈತರು ಹಾಗೂ ಸೈನಿಕರನ್ನು ಗೌರವಿಸದ ದೇಶ ದೇಶವೇ ಅಲ್ಲ. ಭಾರತದಲ್ಲಿ ಇದೀಗ ಇಂತಹ ಪರಿಸ್ಥಿತಿ ಬಂದೊದಗಿದೆ. ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದರೆ ಮಾಧ್ಯಮಗಳು ಅದನ್ನೆ ತೋರಿಸುತ್ತಿದ್ದಾರೆ” ಎಂದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಜನವರಿ 26 ರಂದು ಆಯೋಜಿಸಿದ್ದ ಟ್ರಾಕ್ಟರ್​ ರ್‍ಯಾಯಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತಾದರೂ, ಇದೇ ವೇಳೆ ಲಕ್ಷಾಂತರ ರೈತರು ತಮಗೆ ಪೊಲೀಸರು ಗೊತ್ತುಪಡಿಸಿದ ರಸ್ತೆಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದರು. ಆದರೆ, ಕೇಂದ್ರ ಸರ್ಕಾರ ಮತ್ತು ಸರ್ಕಾರದ ಪರವಾಗಿರುವ ಮಾಧ್ಯಮಗಳು ಈ ವಿಚಾರವನ್ನು ಇಟ್ಟುಕೊಂಡು ರೈತ ಹೊರಾಟವನ್ನು ಹಣಿಯಲು ಮುಂದಾಗಿದೆ.

ಇದನ್ನೂ ಓದಿ: ಗಾಜಿಪುರ್‌ ಗಡಿಯಲ್ಲಿ ನೀರು, ವಿದ್ಯುತ್ ಕಡಿತ ಮಾಡಿದ ಯುಪಿ ಸರ್ಕಾರ: ನೀರಿನ ವ್ಯವಸ್ಥೆ ಮಾಡಿದ ದೆಹಲಿ ಸರ್ಕಾರ

ಘಟನೆಯ ಕುರಿತು ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್​, “​ದೆಹಲಿ ಹೊರ ವಲಯದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಲಕ್ಷಗಟ್ಟಲೆ ಜನರು ಟ್ರಾಕ್ಟರ್‌ನಲ್ಲಿ ಬಂದು ಹೋರಾಟದ ಭಾಗವಾಗಿದ್ದಾರೆ. ಅಷ್ಟೊಂದು ಸಂಖ್ಯೆಯ ಜನ ರೈತ ಹೋರಾಟದ ಕಣಕ್ಕೆ ಧುಮುಕಿದ್ದಾರೆ ಎಂದರೆ ಅವರ ಆಕ್ರೋಶ ಎಷ್ಟಿರಬಹುದು? ಈ ವೇಳೆ ಕೆಲ ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದ್ರೆ ಮಾಧ್ಯಮಗಳು ಅದನ್ನೇ ತೋರಿಸುತ್ತಿವೆ. ಈ ಮೂಲಕ ರೈತರ ಹೋರಾಟವನ್ನು ಮರೆಮಾಚುವ ಕೆಲಸ ನಡೆಯುತ್ತಿದೆ. ರೈತ, ಸೈನಿಕನಿಗೆ ಗೌರವ ಇಲ್ಲದಿರುವ ದೇಶ, ಅದು ದೇಶವೇ ಅಲ್ಲ” ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ನಮ್ಮ ರೈತರು ನಮಗಾಗಿ ಅಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾವು ಇಲ್ಲಿ ಸುಮ್ಮನಿದ್ದೀವಿ. ನಮಗೆ ಲಜ್ಜೆ-ಪಜ್ಜೆ ಏನಿಲ್ಲ. ಆದರೆ, ರೈತರ ಹೋರಾಟದ ಫಲ ಎಲ್ಲರಿಗೂ ಸಿಗುತ್ತದೆ. ನಾಳೆಯೊಳಗೆ ದೆಹಲಿಯ ಗಾಜೀಪುರ ಗಡಿಯಲ್ಲಿ 10 ಲಕ್ಷ ರೈತರು ಜಮಾಯಿಸಲಿದ್ದಾರೆ. ನಾವೇನು ಪುಗಸಟ್ಟೆ ಬೆಳೆಯುತ್ತೀವಾ, ಬೆಲೆ ನಿಗದಿ ಬೇರೆಯವರು ಮಾಡಿದರೆ ಹೇಗೆ. ಹೇಳುವವರು ಗಂಜಲ, ಸಗಣಿ ಎತ್ತುತ್ತಾರ? ನಮ್ಮ ಹೆಣ್ಣು ಮಕ್ಕಳು ಎಲ್ಲಾ ಕೆಲಸ ಮಾಡುತ್ತಾರೆ. ಸ್ವಲ್ಪ ಬೆವರು ಬಂದರೂ ಪೌಡರ್ ಹಾಕ್ಕೋಳ್ಳುವವರು ಇದ್ದಾರೆ. ಅಂತದ್ದರಲ್ಲಿ ರೈತರು ತಮ್ಮ ಹಕ್ಕನ್ನು ಕೇಳೋದು ತಪ್ಪಾ?” ಎಂದು ರಮೇಶ್​ ಕುಮಾರ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಟಿಕಾಯತ್ ಮನವಿಗೆ ಭಾರೀ ಸ್ಪಂದನೆ: ಗಾಜಿಪುರ್ ಗಡಿಯತ್ತ ಹೊರಟ 10 ಸಾವಿರಕ್ಕೂ ಹೆಚ್ಚು ರೈತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...