Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಹೇಡಿಯಾಗಿ ಬದಲಾದ ವಿ.ಡಿ ಸಾವರ್ಕರ್ ಗಾಂಧಿ ಕೊಲೆಗೆ ಪ್ರೇರಕರಾಗಿದ್ದರು : ಎಚ್.ಎಸ್.ದೊರೆಸ್ವಾಮಿ

ಹೇಡಿಯಾಗಿ ಬದಲಾದ ವಿ.ಡಿ ಸಾವರ್ಕರ್ ಗಾಂಧಿ ಕೊಲೆಗೆ ಪ್ರೇರಕರಾಗಿದ್ದರು : ಎಚ್.ಎಸ್.ದೊರೆಸ್ವಾಮಿ

- Advertisement -
- Advertisement -

ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದಕ್ಕೆ ಮೋದಿ ಸರ್ಕಾರ ಹೋರಟಿರುವುದನ್ನು ಪ್ರತಿಭಟಿಸಿ ನಿಜ ರಾಜಕೀಯ ಬಲ್ಲವರು ವಿರೋಧಿಸಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

 

ವೀರ ಸಾವರ್ಕರ್ ಇಂಗ್ಲಿಷರ ವಿರುದ್ಧ ಎದ್ದು ನಿಂತ ಅಪ್ರತಿಮ ಹೋರಾಟಗಾರರು. ಇಂಗ್ಲೆಂಡಿಗೆ ಹೋಗಿ ಅಲ್ಲಿಂದ 20 ಬಂದೂಕುಗಳನ್ನು ತನ್ನ ತಮ್ಮನಿಗೆ ಕಳಿಸಿದವರು. ಈ ಪ್ರಕರಣದಲ್ಲಿ ಈ ತಮ್ಮ ಸಿಕ್ಕಿಹಾಕಿಕೊಂಡು ಅವರ ವಿಚಾರಣೆ ನಡೆದು ಅವರನ್ನು ಗಲ್ಲುಶಿಕ್ಷೆಗೆ ಗುರಿಮಾಡಲಾಯಿತು. ಇಂಗ್ಲೆಂಡಿನಲ್ಲಿ ಅವರ ದಸ್ತಗಿರಿಯಾಗಿ ಬ್ರಿಟಿಷ್ ಪೊಲೀಸರು ಸಾವರ್ಕರ್ ಅವರನ್ನು ಭಾರತಕ್ಕೆ ಹಡಗಿನಲ್ಲಿ ಕರೆತರುತ್ತಿದ್ದಾಗ ಅವರು ಮಾರ್ಸೆಲ್ ಬಲಲಿ ಹಡಗಿನಿಂದ ಸಮುದ್ರಕ್ಕೆ ಧುಮುಕಿ ಈಜಿಕೊಂಡು ಫ್ರಾನ್ಸ್ ದೇಶಕ್ಕೆ ನುಸುಳುವ ಪ್ರಯತ್ನ ಮಾಡಿದರು. ಆದರೆ ಪೊಲೀಸರು ಅವರನ್ನು ಹಿಡಿದು ಬಂಧಿಸಿ ಭಾರತಕ್ಕೆ ಕರೆತಂದರು. ನ್ಯಾಯಾಲಯದ ಮುಂದೆ ನಿಲ್ಲಿಸಿದರು ಸಾವರ್ಕರ್ ಅವರಿಗೆ 6 ವರ್ಷಗಳ ಕರಿನೀರ ಶಿಕ್ಷೆ  ವಿಧಿಸಿ ಕೂಡಲೆ ಸೆರೆಮನೆಗೆ ಕಳಿಸಲಾಯಿತು. ಅಲ್ಲಿಯವರೆಗೆ ಅವರು ವೀರ ಸಾವರ್ಕರರೇ ಹೌದು.

ಕರಿನೀರಿನ ಶಿಕ್ಷೆ ಅನುಭವಿಸುತ್ತಿರುವಾಗ ಸಾವರ್ಕರರಿಗೆ ಧರ್ಮಗ್ಲಾನಿಯಾಯಿತು. ಅವರು ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದು ‘ನಾನು ನಿಮ್ಮ ವಿರುದ್ಧ ನಿಂತು ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ್ದು ತಪ್ಪಾಯಿತು. ನನ್ನನ್ನು ಸೆರೆಮನೆಯಿಂದ ಬಿಡುಗಡೆಮಾಡಿ, ನಿಮ್ಮ ಆಜ್ಞಾಧಾರಕನಾಗಿ ನಡೆದುಕೊಳ್ಳುತ್ತೇನೆ’ ಎಂದು ವಿನಂತಿಸಿಕೊಂಡರು. ಬ್ರಿಟಿಷರು ಸಾವರ್ಕರರನ್ನು ಷರತ್ತುಗಳನ್ನು ಹೊರೆಸಿ ಬಿಡುಗಡೆ ಮಾಡಿದರು. ನೀವು ಮಹಾರಾಷ್ಟ್ರದ ನಿಮ್ಮ ಜಿಲ್ಲೆ ಬಿಟ್ಟು ಬೇರೆಡೆಗೆ ಹೊಗುವಂತಿಲ್ಲ, ಪತ್ರಿಕೆಗಳಿಗೆ ಹೇಳಿಕೆ ನೀಡುವಂತಿಲ್ಲ, ಲೇಖನ ಬರೆಯುವಂತಿಲ್ಲ ಮುಂತಾದ ಕಠಿಣ ನಿಯಮಗಳನ್ನು ಹೇರಿ ಅವರನ್ನು ಬಿಡುಗಡೆ ಮಾಡಿದರು.

ಅಲ್ಲಿಯವರೆಗೆ ವೀರ ಸಾರ್ವರ್ಕರರಾಗಿದ್ದ ಅವರು ಅಂದಿನಿಂದ ಹೇಡಿ ಸಾರ್ವರ್ಕರ್ ಆದರು. ಒಬ್ಬ ಪ್ರಾಮಾಣಿಕ ಹೋರಾಟಗಾರನಿಗೆ ಈ ಬಗೆಯ ಹೇಡಿತನ ಹೇಗೆ ಪ್ರಾಪ್ತವಾಯಿತು? ತಾನು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದು ತಪ್ಪು ಮಾಡಿದೆ ಎಂದು ಬ್ರಿಟಿಷ್ ಸರ್ಕಾರಕ್ಕೆ ಬರೆಯಬೇಕಾದ ದುಸ್ಥಿತಿ ಬಂದದ್ದು ಏಕೆ ಎಂಬುದು ಇಂದಿಗೂ ಚಿದಂಬರ ರಹಸ್ಯವಾಗಿದೆ. ಸಾವರ್ಕರರ ಬಗೆಗೆ ಜನರಿಗೆ ಇದ್ದ ಗೌರವ ತಾವಾಗಿಯೇ ಕಳೆದುಕೊಂಡರು. ಇಂತಹ ಹೇಡಿ ಸಾವರ್ಕರರಿಗೆ ಭಾರತರತ್ನ ನೀಡುವುದು ಆಭಾಸವಲ್ಲವೇ?

ಅಲ್ಲದೆ ಅಲ್ಲಿಂದ ಮುಂದಕ್ಕೆ ಅವರು ಹಿಂದು ಮಹಾಸಭೆ ಸೇರಿಕೊಂಡು ನಾಥುರಾಮ್ ಗೋಡ್ಸೆಗೆ ಮಹಾತ್ಮಗಾಂಧಿಯವರನ್ನು ಕೊಲ್ಲಲು ಪ್ರೇರಕ ಶಕ್ತಿಯಾದರು. ಗಾಂಧಿ ಕೊಲೆ ಮೊಕದ್ದಮೆಯಲ್ಲಿ ಸಾವರ್ಕರರೂ ಒಬ್ಬ ಅಪರಾಧಿಯಾಗಿದ್ದರು. ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಗೆ benefit of doubt ನೀಡಿ ಬಿಡುಗಡೆ ಮಾಡಲಾಯಿತು. ಗೋಡ್ಸೆಗೆ ಇವರು ಪ್ರೇರಕ ಶಕ್ತಿಯಾಗಿದ್ದರು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಂಥದರಲ್ಲಿ ರಣಹೇಡಿ ಸಾವರ್ಕರರಿಗೆ ಭಾರತರತ್ನ ನೀಡುವುದು ದುರದೃಷ್ಟಕರ. ಗೋಡ್ಸೆಗೆ ಭಾರತರತ್ನ ನೀಡುವುದು ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನ ಸಾವರ್ಕರರಿಗೆ ಭಾರತರತ್ನ ನೀಡುವುದು. ಗಾಂಧಿಯನ್ನು ಕೊಂದ ಗೋಡ್ಸೆಯ ದೇವಸ್ಥಾನ ಕಟ್ಟುವ ಮೂರ್ಖರು ಸಾವರ್ಕರ್‌ಗೆ ಭಾರತರತ್ನ ಕೊಡಿ ಎಂದು ಕೇಳಲು ಹೇಸುವವರಲ್ಲ.


ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ಬಿ.ಜೆ.ಪಿ.ಯ ಆಡಳಿತ ಮುಂದುವರಿದರೆ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಗೂ ಭಾರತ ರತ್ನ ಕೊಟ್ಟರೂ‌ ಅಚ್ಚರಿ ಇಲ್ಲ.

    • ಅವನು ಗಾಂಧಿಯನ್ನು ಏಕೆ ಕೊಂದ ಎನ್ನುವ ಪ್ರಶ್ನೆಗೆ ಉತ್ತರವಿದೆಯೇ

  2. ಜಿಂದಾಬಾದ್ ಜಿಂದಾಬಾದ್ ಸಾವರ್ಕರ್ ಜಿಂದಾಬಾದ್……
    ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಗೆ benefit of doubt ನೀಡಿ ಬಿಡುಗಡೆ ಮಾಡಲಾಯಿತು .. court nali Case Mugidi mele Nimadu Enu ? DOWN DOWN h S d…

    • ಸಾವರ್ಕರ್ ಗಾಂಧಿ ಹತ್ಯೆ ಸಂಚಿನ ಪ್ರೇರಕ ಎನ್ನಲು ನಿಮ್ಮ ಹತ್ತಿರ ಸಾಕ್ಷ್ಯಧಾರಗಳಿವೆಯೇ?
      ಗೋಡ್ಸೆ ಗಾಂಧಿಯನ್ನು ಏಕೆ ಕೊಂದ ಎಂದು ಉತ್ತರವಿದೆಯೇ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...