Homeಮುಖಪುಟ‘ಇಡಿ’ ತನಿಖೆ ನ್ಯಾಯಸಮ್ಮತಲ್ಲ, ತನಿಖೆಗೆ ಹಾಜರಾಗುವುದಿಲ್ಲ: ಅನಿಲ್ ದೇಶ್ಮುಖ್‌ ವಕೀಲ

‘ಇಡಿ’ ತನಿಖೆ ನ್ಯಾಯಸಮ್ಮತಲ್ಲ, ತನಿಖೆಗೆ ಹಾಜರಾಗುವುದಿಲ್ಲ: ಅನಿಲ್ ದೇಶ್ಮುಖ್‌ ವಕೀಲ

- Advertisement -
- Advertisement -

ಹಣ ವಂಚನೆ ಪ್ರಕರಣದಲ್ಲಿ ತನ್ನ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ನ್ಯಾಯ ಸಮ್ಮತವಲ್ಲ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್‌ ಅಭಿಪ್ರಾಯಪಟ್ಟಿದ್ದಾರೆ, ಆದ್ದರಿಂದ ಅವರು ತನಿಖೆಗೆ ಕೈಜೋಡಿಸುವುದಿಲ್ಲ ಎಂದು ಅವರ ವಕೀಲ ಬುಧವಾರ ಹೇಳಿದ್ದಾರೆ.

ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇಶ್ಮುಖ್ ಅವರ ವಕೀಲ ಕಮಲೇಶ್ ಘುಮ್ರೆ, ಇಡಿಯ ತನಿಖೆಯು ನಿಜವಾದ ತನಿಖೆಯಂತೆ ಕಾಣುತ್ತಿಲ್ಲ, ಅದು ‘ಕಿರುಕುಳ’ ಎಂದು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಇಡಿ’ ದೇಶ್ಮುಖ್ ಅವರ ಪತ್ನಿ ಆರತಿಗೆ ಬುಧವಾರ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ತನ್ನ ಮುಂದೆ ಹಾಜರಾಗುವಂತೆ ಹೇಳಿದೆ ಎಂದು ಅವರು ಹೇಳಿದ್ದಾರೆ. ಆದರೆ ತಾನು ವಿಡಿಯೊ ಕಾನ್ಫರೆನ್ಸಿಂಗ್‌‌ ಮೂಲಕ ತನಿಖೆಗೆ ಸಹಕರಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ ಎಂದು ಕಮಲೇಶ್‌‌ ತಿಳಿಸಿದ್ದಾರೆ.

ಈ ಹಿಂದೆ ಇಡಿ ಅನಿಲ್ ದೇಶ್ಮುಖ್ ಅವರಿಗೆ ಅನೇಕ ಸಮನ್ಸ್ ನೀಡಿತ್ತು, ಅವರ ಹೇಳಿಕೆಯನ್ನು ದಾಖಲಿಸುವಂತೆ ಕೇಳಿಕೊಂಡಿತ್ತು. ಆದಾಗ್ಯೂ, ದೇಶ್ಮುಖ್‌ ಅವರು ಕೊರೊನಾವನ್ನು ಉಲ್ಲೇಖಿಸಿ ಸಮನ್ಸ್‌ಗೆ ಉತ್ತರಿಸಿರಲಿಲ್ಲ.

ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ

ಅವರು ಕೂಡಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಲು ಇಡಿಗೆ ಪ್ರಸ್ತಾಪಿಸಿದ್ದರು. ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ಕೋರಿ ದೇಶ್ಮುಖ್‌ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮಾಡಿದ ಕನಿಷ್ಠ 100 ಕೋಟಿ ರೂ.ಗಳ ಲಂಚದ ಆರೋಪಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ದೇಶ್ಮುಖ್‌‌ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದರ ನಂತರ ದೇಶ್ಮುಖ್ ಮತ್ತು ಇತರರ ವಿರುದ್ಧ ಇಡಿ ಕೂಡಾ ಪ್ರಕರಣವನ್ನು ದಾಖಲಿಸಿತ್ತು.

“ದೇಶ್ಮುಖ್ ಅವರು ಈ ತನಿಖೆ ನ್ಯಾಯಸಮ್ಮತವಲ್ಲ ಎಂದು ಭಾವಿಸುತ್ತಾರೆ. ಆದ್ದರಿಂದ ಅವರು ತನಿಖೆಗೆ ಕೈಜೋಡಿಸುತ್ತಿಲ್ಲ. ತನಿಖಾ ಸಂಸ್ಥೆ ಬಯಸಿದ ಯಾವುದೇ ದಾಖಲೆಗಳ ಬಗ್ಗೆ ಕನಿಷ್ಠ ನಮಗೆ ಹೇಳಬೇಕು. ಇಡಿ ತನಿಖೆ ಕಿರುಕುಳದಂತೆ ಕಾಣುತ್ತಿದೆಯೆ ಹೊರತು, ನಿಜವಾದ ತನಿಖೆಯಲ್ಲ” ಎಂದು ವಕೀಲ ಕಮಲೇಶ್‌ ಹೇಳಿದ್ದಾರೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಮಾರ್ಗಗಳಿದ್ದರೂ, ದೇಶ್ಮುಖ್ ಅವರನ್ನು ನೇರವಾಗಿ ಪ್ರಶ್ನಿಸುವ ಸಲುವಾಗಿ ಹಾಜರಾಗುವಂತೆ ಕೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸ್‌ ಅಧಿಕಾರಿ ಪರಮ್ ಬಿರ್ ಸಿಂಗ್ ಅವರ ಆರೋಪಗಳು ನಿಜವಲ್ಲ ಎಂದಿರುವ ಕಮಲೇಶ್‌‌, “ಈ ಬಗ್ಗೆ ಅವರು ತಿಂಗಳುಗಟ್ಟಲೆ ಯಾಕೆ ಮೌನವಾಗಿದ್ದರು ಎಂದ ಹೈಕೋರ್ಟ್ ಪ್ರಶ್ನಿಸಿದೆ” ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ ನಂತರ ದೇಶ್ಮುಖ್‌ ಏಪ್ರಿಲ್‌ನಲ್ಲಿ ತನ್ನ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...