Homeಕರ್ನಾಟಕಲಖಿಂಪುರ್‌ ಖೇರಿ ಘಟನೆ: ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದ ಡಿಕೆ ಶಿವಕುಮಾರ್‌‌

ಲಖಿಂಪುರ್‌ ಖೇರಿ ಘಟನೆ: ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದ ಡಿಕೆ ಶಿವಕುಮಾರ್‌‌

- Advertisement -

ಉತ್ತರ ಪ್ರದೇಶದಲ್ಲಿ ನಾಲ್ವರು ರೈತರನ್ನು ಹತ್ಯೆಗೈದ ಪ್ರಕರಣದ ಬಗ್ಗೆ ಸೋಮವಾರ ಮಾತಾನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌‌, “ಈ ಅಮಾನವೀಯ ಘಟನೆಯ ನೈತಿಕ ಹೊಣೆ ಹೊತ್ತು ಒಕ್ಕೂಟ ಸಚಿವ ಅಜಯ್ ಮಿಶ್ರಾ, ಯುಪಿ ಸಿಎಂ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಜನ ಆತಂಕದಲ್ಲಿದ್ದಾರೆ. ಅನ್ನದಾತನಿಗೆ ರಕ್ಷಣೆಯೇ ಇಲ್ಲವಾಗಿದೆ. ಹಲವು ತಿಂಗಳುಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರ ಮೇಲೆ ಒಕ್ಕೂಟ ಸರ್ಕಾರದ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರನ್ನು ಕಗ್ಗೊಲೆ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಖಿಂಪುರ್‌ ಖೇರಿ: ರೈತರ ಬೇಡಿಕೆಗಳಿಗೆ ಮಣಿದ ಯುಪಿ ಸರ್ಕಾರ

“ಈ ಅಮಾನವೀಯ ಘಟನೆಯ ನೈತಿಕ ಹೊಣೆ ಹೊತ್ತು ಒಕ್ಕೂಟ ಸಚಿವ ಅಜಯ್ ಮಿಶ್ರಾ, ಯುಪಿ ಸಿಎಂ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಮಿಶ್ರಾ ಅವರೂ ಸೇರಿದಂತೆ ರೈತರ ಹತ್ಯೆ ಮಾಡಿದವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು” ಎಂದು ಶಿವಕುಮಾರ್‌‌ ಹೇಳಿದ್ದಾರೆ.

“ಇದು ನಾಲ್ವರು ರೈತರ ಕೊಲೆ ಮಾತ್ರವಲ್ಲ, ಇಡೀ ದೇಶದ ರೈತ ಸಮುದಾಯದ ಕಗ್ಗೊಲೆ. ಮೃತರ ಕುಟುಂಬದ ಭೇಟಿಗೆ ಮುಂದಾದ ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ನಡೆಸಿಕೊಂಡ ರೀತಿ, ಅವರ ಬಂಧನ ಖಂಡನೀಯ. ಇದು ಇಡೀ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ. ಬಿಜೆಪಿ ಆಡಳಿತದಲ್ಲಿ ಸಾಂತ್ವನ ಹೇಳುವುದೂ ಅಪರಾಧವೇ?” ಎಂದು ಪ್ರಶ್ನಿಸಿದ್ದಾರೆ.

ರೈತರನ್ನು ಹತ್ಯೆ ಮಾಡಿರುವ ಘಟನೆಯ ಬಗ್ಗೆ ಸಿಪಿಐ(ಎಂಎಲ್‌) ಲಿಬರೇಷನ್‌ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, “ಘಟನೆಗೆ ಕಾರಣವಾದ ಒಕ್ಕೂಟ ಸರ್ಕಾರದ ಸಚಿವನ ಮಗನನ್ನು ಬಂಧಿಸಬೇಕು. ಜೊತೆಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ತಮ್ಮ ಪದವಿಗೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದೆ.

ಇದನ್ನೂ ಓದಿ: ರೈತರ ಹತ್ಯೆ ಪ್ರಕರಣ: ಉತ್ತರ ಪ್ರದೇಶ ಸರ್ಕಾರ ವಜಾ ಮಾಡಲು ಸಿದ್ದರಾಮಯ್ಯ ಆಗ್ರಹ

ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಎಂಬಿ ಪಾಟಿಲ್ ಅವರು, “ಉತ್ತರ ಪ್ರದೇಶದ ರೈತರು ಪ್ರತಿಭಟಿಸುತ್ತಿರುವ ವೇಳೆ ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರರ ಪುತ್ರ ಕಾರು ನುಗ್ಗಿಸಿ ರೈತರನ್ನು ಹತ್ಯೆ ಮಾಡಿರುವ ಮೃಗೀಯ ಘಟನೆ ನಡೆದಿದೆ. ದುಷ್ಕೃತ್ಯ ನಡೆದು ಹಲವು ತಾಸುಗಳಾದರೂ ಯಾರನ್ನೂ ಬಂಧಿಸದಿರುವುದು ಮಹಾಅಪರಾಧ. ಈ ಘಟನೆಯನ್ನು ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.

 

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಅವರು, “ಉತ್ತರಪ್ರದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ. ಪ್ರಜಾ ರಕ್ಷಕರಾದ ಒಕ್ಕೂಟ ಸರ್ಕಾರದ ಸಚಿವರೇ ಪ್ರಜಾ ಭಕ್ಷಕರಾಗಿ,ರೈತರ ಹೋರಾಟಗಳನ್ನು ಹತ್ತಿಕ್ಕಲು ರೈತರ ಮೇಲೆ ಕಾರು ಹತ್ತಿಸಿರುವುದು ಅಮಾನುಷ. ಇದನ್ನು ಪ್ರಶ್ನಿಸಿದ ಪ್ರಿಯಾಂಕ ಗಾಂಧಿಯವರ ಬಂಧನ ಹೇಯ ಕೃತ್ಯ. ಈ ರೈತ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ದ ರೈತರು ನಡೆಸಿದ ಪ್ರತಿಭಟನೆಗೆ ಸರ್ಕಾರ ಮಣಿದಿದೆ. ಮೃತ ರೈತರ ಕುಟುಂಬಕ್ಕೆ 45 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ. ರಾಕೇಶ್‌ ಟಿಕಾಯತ್‌‌ ಅರೊಂದಿಗೆ ಸೇರಿ ನಡೆಸಿದ ಜ೦ಟಿ ಪತ್ರಿಕಾಗೋಷ್ಠಿಯಲ್ಲಿ ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾ೦ತ್‌ ಕುಮಾರ್‌ ಅವರು ಸರ್ಕಾರದ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಸೂಕ್ತ ಪರಿಹಾರ ನೀಡದೆ ಮೃತಪಟ್ಟ ರೈತರ ಅಂತ್ಯ ಸ೦ಸ್ಕಾರ ಮಾಡುವುದಿಲ್ಲವೆಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಘೋಷಿಸಿದ್ದರು.

ಇದನ್ನೂ ಓದಿ: ರೈತರ ವಿರುದ್ಧ ದೊಣ್ಣೆ ಎತ್ತಲು ಕಾರ್ಯಕರ್ತರಿಗೆ ಕರೆ ನೀಡಿದ ಹರ್ಯಾಣ ಸಿಎಂ: ವಿಡಿಯೋ ವೈರಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial