ಸಭಾಪತಿ ಹೊರಟ್ಟಿ ಉಮಾಶ್ರೀ ಜೊತೆ ಬಳಸಿದ ಭಾಷೆ ಶಿಸ್ತಿನ ಹೆಸರಿನ ಅಹಂಕಾರ: ನಿರ್ದೇಶಕಿ ಸುಮನಾ ಕಿತ್ತೂರು

ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್‌ನಲ್ಲಿ ಉಮಾಶ್ರೀ ಅವರಿಗೆ ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿದೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುರುವಾರ (ಫೆ.5) ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅವರು, “ಇತ್ತೀಚೆಗೆ ವಿಧಾನಪರಿಷತ್ತಿನ ಸಭೆಯಲ್ಲಿ ಉಮಾಶ್ರೀ ಮೇಡಮ್ ಅವರೊಂದಿಗೆ ಸಭಾಪತಿ ಹೊರಟ್ಟಿ ಅವರು ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿತ್ತು. ಸಭಾಧ್ಯಕ್ಷರ ಕುರ್ಚಿ ಎನ್ನುವುದು ವ್ಯಂಗ್ಯಕ್ಕೆ ಅಲ್ಲ. ಗೌರವ, ಸಮತೋಲನ ಮತ್ತು ಸಂವಿಧಾನಾತ್ಮಕ ಶಿಷ್ಟಾಚಾರಕ್ಕೆ ಅನ್ನುವುದನ್ನು ಅವರು ಮರೆತಂತಿತ್ತು” ಎಂದಿದ್ದಾರೆ. “ಮಾತಿಗೆ … Continue reading ಸಭಾಪತಿ ಹೊರಟ್ಟಿ ಉಮಾಶ್ರೀ ಜೊತೆ ಬಳಸಿದ ಭಾಷೆ ಶಿಸ್ತಿನ ಹೆಸರಿನ ಅಹಂಕಾರ: ನಿರ್ದೇಶಕಿ ಸುಮನಾ ಕಿತ್ತೂರು