ಕಳೆದ ಒಂದು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲು ಸಿದ್ಧಪಡಿಸಿದ ಟಿಪ್ಪಣಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಉಲ್ಲೇಖಿಸದಿರುವುದರಿಂದ ಗೃಹ ಸಚಿವಾಲಯದ ಮಾಧ್ಯಮ ವಿಭಾಗವನ್ನು ಎತ್ತಂಗಡಿ ಮಾಡಲಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಈಗಿರುವ ತಂಡವನ್ನು ವರ್ಗಾವಣೆ ಮಾಡಿ ಹೊಸ ತಂಡಕ್ಕೆ ಮಾಧ್ಯಮ ನಿರ್ವಹನೆ ಜವಾಬ್ದಾರಿ ನೀಡಲಾಗಿದೆ. ಇದೀಗ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ವಕ್ತಾರರಾಗಿದ್ದ ನಿತಿನ್ ವಕಾಂಕರ್‌ರವರು ಡೈರೆಕ್ಟರ್ ಜನರಲ್-ಬ್ಯೂರೋ ಆಫ್ ಔಟ್‌ರೀಚ್ ಮತ್ತು ಕಮ್ಯುನಿಕೇಷನ್ಸ್‌ನ ನೇತೃತ್ವ ವಹಿಸಲಿದ್ದಾರೆ.
ಮೂಲಗಳ ಪ್ರಕಾರ ಸರ್ಕಾರವು ಮಾಧ್ಯಮ ವಿಭಾಗದ ಸರಣಿ ದೋಷಗಳಿಂದಾಗಿ ಅದರ ಬಗ್ಗೆ ತೀವ್ರ ಅತೃಪ್ತಿ ಹೊಂದಿತ್ತು. ಇದೀಗ ಅದಕ್ಕೆ ತೆರೆ ಎಳೆದಿದ್ದು ಹೊಸ ತಂಡವನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಮೇ 28 ರಂದು ಗೃಹ ಸಚಿವಾಲಯದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಆಕಸ್ಮಿಕವಾಗಿ ವಿಸ್ಕಿ ತುಂಬಿದ ಎರಡು ರಾಯಲ್ ಸ್ಟಾಗ್ ಮದ್ಯದ ಬಾಟಲಿಗಳು, ಕನ್ನಡಕ ಮತ್ತು ಕೆಲವು ತಿಂಡಿಗಳನ್ನು ಹೊಂದಿರುವ ಟೇಬಲ್‌ನ ಫೋಟೋವನ್ನು ಅಪ್‌ಲೋಡ್ ಮಾಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತದ ನಂತರ ಸರ್ಕಾರದ ಪುನರ್ವಸತಿ ಪ್ರಯತ್ನಗಳನ್ನು ತೋರಿಸುವ ಪೋಸ್ಟ್‌ನಲ್ಲಿ ಈ ಫೋಟೊ ಸಹ ಸೇರಿಕೊಂಡಿತ್ತು.

ಆಕಸ್ಮಿಕವಾಗಿ ಈ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ಕಿರಿಯ ಉದ್ಯೋಗಿಗೆ ಇದಕ್ಕಾಗಿ ಲಿಖಿತ ವಿವರಣೆಯನ್ನು ನೀಡುವಂತೆ ಕೇಳಲಾಗಿದ್ದರೂ, ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಮೇಲ್ವಿಚಾರಣೆ ಮಾಡದಿದ್ದಕ್ಕಾಗಿ ಸರ್ಕಾರವು ಮಾಧ್ಯಮ ವಿಭಾಗವನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ತತ್‌ಕ್ಷಣದ ಕಾರಣವಾಗಿ ಸರ್ಕಾರದ ಸಾಧನೆಗಳ ಪಟ್ಟಿಯಲ್ಲಿ ಸಿಎಎ ಬಿಟ್ಟು ಹೋಗಿರುವುದು ಸರ್ಕಾರವನ್ನು ಕೆರಳಿಸಿದ್ದು, ಮಾಧ್ಯಮ ವಿಭಾಗದ ಬದಲಾವಣೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಮೊದಲೇ ಕೆಲವು ಆಂತರಿಕ ಸಮಸ್ಯೆಗಳು ಇದ್ದವು, ಆದರೆ ಸಾಧನೆಗಳ ಪಟ್ಟಿಯಲ್ಲಿ ಸಿಎಎ ಅನ್ನು ಉಲ್ಲೇಖಿಸದಿರುವುದು ಒಂದು ಪ್ರಮುಖ ಅಂಶವಾಗಿರಬಹುದು ಎಂದು ಮೂಲವೊಂದು ತಿಳಿಸಿದೆ.
ಇದನ್ನೂ ಓದಿ: ಮದ್ಯ ಬಾಟಲಿಗಳ ಚಿತ್ರ ಪೋಸ್ಟ್ ಮಾಡಿದ ಗೃಹ ಸಚಿವಾಲಯ: ಟ್ವಿಟ್ಟರ್‌ನಲ್ಲಿ ಟ್ರೋಲ್



ಆಡಳಿತಾರೂಢರ ಆಸ್ಥಾನದಲ್ಲಿ ಪುಂಗಿದಾಸರಿಗೆ ಮಾತ್ರ ಸ್ತಾನ. ಇದು ಇಂದಿನ ನೀತಿ.