Homeರಾಷ್ಟ್ರೀಯಸರ್ಕಾರಿ ಸಮಾರಂಭದಲ್ಲಿ ನಿರ್ಧಿಷ್ಟ ಧರ್ಮದ ಪೂಜೆಗೆ ತಡೆ; ಪುರೋಹಿತನನ್ನು ಹೊರಗೆ ಕಳುಹಿಸಿದ DMK ಸಂಸದ

ಸರ್ಕಾರಿ ಸಮಾರಂಭದಲ್ಲಿ ನಿರ್ಧಿಷ್ಟ ಧರ್ಮದ ಪೂಜೆಗೆ ತಡೆ; ಪುರೋಹಿತನನ್ನು ಹೊರಗೆ ಕಳುಹಿಸಿದ DMK ಸಂಸದ

ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರವಾಗಿದ್ದು, ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ ಎಂದು ಸಂಸದ ಡಾ. ಸೆಂತಿಲ್ ಕುಮಾರ್‌ ಹೇಳಿದ್ದಾರೆ

- Advertisement -
- Advertisement -

ತಮಿಳುನಾಡಿನ ಧರ್ಮಪುರಿಯ ಡಿಎಂಕೆ ಸಂಸದ ಡಾ. ಸೆಂತಿಲ್‌ಕುಮಾರ್ ಅವರು ಸರ್ಕಾರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯುತ್ತಿದ್ದ ಭೂಮಿ ಪೂಜೆಯನ್ನು ತಡೆದು ಅಧಿಕಾರಿಗಳನ್ನು ತರಾಟೆಗೆ ಪಡೆದು, ಅರ್ಚಕನನ್ನು ವಾಪಾಸು ಕಳುಹಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಧಾರ್ಮಿಕತೆಯನ್ನು ದೂರ ಇಟ್ಟಿದ್ದಕ್ಕಾಗಿ ನೆಟ್ಟಿಗರು ಅವರನ್ನು ಶ್ಲಾಘಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಅವರು, ಭೂಮಿ ಪೂಜೆಯೂ ಹಿಂದೂ ಸಂಪ್ರದಾಯದಂತೆ ಮಾತ್ರ ನಡೆಯುತ್ತಿದ್ದುದನ್ನು ಪ್ರಶ್ನಿಸಿದ್ದಾರೆ. ಸ್ಥಳದಲ್ಲಿ ಇದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಇವುಗಳನ್ನೆಲ್ಲಾ ನಡೆಸಬಾರದು ಎಂದು ನಿಮಗೆ ಸೂಚನೆ ಇದೆಯೆ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹಿಂದೂ ಧರ್ಮದ ಪ್ರಕಾರ ಭೂಮಿ ಪೂಜೆ ನಡೆಸುವುದಾದರೆ, ಉಳಿದ ಧರ್ಮಗಳ ಧರ್ಮಗುರುಗಳು ಎಲ್ಲಿ? ಕ್ರಿಶ್ಚಿಯನ್, ಮುಸ್ಲಿಂ, ದ್ರಾವಿಡರು ಎಲ್ಲಿ? ಧರ್ಮವನ್ನೇ ಆಚರಿಸದವರು ಎಲ್ಲಿ?” ಎಂದು ಅಧಿಕಾರಿಯೊಂದಿಗೆ ಸೆಂತಿಲ್ ಕುಮಾರ್‌ ಪ್ರಶ್ನಿಸಿದ್ದಾರೆ.

“ಮಸೀದಿಯ ಇಮಾಂ, ಚರ್ಚಿನ ಫಾದರ್‌ ಸೇರಿದಂತೆ ಎಲ್ಲರನ್ನೂ ಕರೆಯಿರಿ” ಎಂದು ಸ್ಥಳದಲ್ಲಿ ಇದ್ದ ಅರ್ಚಕನನ್ನು ತೆರಳುವಂತೆ ಸಂಸದರು ಕೇಳಿಕೊಂಡಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿ ಇವೆಲ್ಲಾ ಮಾಡಬಾರದು ಎಂದು ನಿಮಗೆ ಗೊತ್ತಿಲ್ಲವೆ ಎಂದು ಸ್ಥಳದಲ್ಲಿದ್ದ ಅಧಿಕಾರಿಯನ್ನು ಪ್ರಶ್ನಿಸಿದ ಸಂಸದರು, ‘‘ನಿಮಗೆ ಸೂಚನೆ ಇದೆಯೆ-ಇಲ್ಲವೆ? ಈ ರೀತಿಯ ಕಾರ್ಯಕ್ರಮಕ್ಕೆ ನನ್ನನ್ನು ದಯವಿಟ್ಟು ಕರೆಯದಿರಿ. ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರ. ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ” ಎಂದು ಹೇಳಿದ್ದಾರೆ.

“ಈ ರೀತಿ ಮಾಡಬೇಡಿ ಎಂದು ಹೇಳುವುದಿಲ್ಲ. ಎಲ್ಲಾ ಧರ್ಮದವರನ್ನೂ ಕರೆಯಿರಿ, ಧರ್ಮ ನಂಬದವರನ್ನೂ ಕರೆಯಿರಿ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಿಯರನ್ನೂ ಕರೆಯಿರಿ” ಎಂದು ಹೇಳಿದ್ದಾರೆ.

ತಮಿಳುನಾಡಿನ ಧರ್ಮಪುರಿ ಕ್ಷೇತ್ರವನ್ನು 2019ರಿಂದ ಸಂಸತ್ತಿನಲ್ಲಿ ಪ್ರತಿನಿಧಿಸಿಸುತ್ತಿರುವ ಡಾ. ಎಸ್. ಸೆಂಥಿಲ್‌ಕುಮಾರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 70,753 ಮತಗಳ ಅಂತರದಿಂದ ಗೆದ್ದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಈ ಅಯೋಗ್ಯನಿಗೆ ಹಿಂದೂ ನೆಲೆಗಟ್ಟಿನ ಆದಾರದ ಮೇಲೆನೆ ಈ ಸಮಾಜ ನಿಂತಿರೋದು ಅನ್ನೋದು ತಿಳಿದಿರಬೇಕು,ಹಿಂದೂ ನೆಲೆಗಟ್ಟಿನಲ್ಲಿ ಇರಲು ಆಗದ ಆಯೋಗ್ಯರು ತೊಲಗಲಿ ಇಲ್ಲಿಂದ

  2. ಅಂದಾಜು ಪಟ್ಟಿಯಲ್ಲಿ ಈಬಗೆಯ ಪೂಜೆಮಾಡಲು ವೆಚ್ಚಕ್ಕೆ ಹಣಮೀಸಲಿಡುವುದಿಲ್ಲ. ಆದರೂ ಸಾವಿರಾರು ರುಪಾಯಿ ವೆಚ್ಚಮಾಡಿ ಪೂಜೆಮಾಡಲಾಗುತ್ತದೆ

  3. Height of stupidity displayed by DMK leader just for show off and minority votes appeasement

    Just for 5 minutes pooja so much hungammas but years together government projects gets delayed but these leaders are not seen in those times

  4. after inviting the priest at least you respect him. have a religious tolerance. sending back to priest and cancelling the pooja is not a good idea. he should allowed Pooja and next time he would have cancelled priorly. being a public representative he should be tolerant to religious activities

  5. ಹಿಂದೂ ಎನ್ನುವುದೇ ಇಲ್ಲಾ…. ಇದೆಲ್ಲಾ ಕಟ್ಟುಕಥೆ… ನಿಮ್ಮ ಕಟ್ಟು ಕಥೆಗಳನ್ನು ನಿಮ್ಮ ಮನೆಯವರಿಗೆ ಹೇಳಿ ಬೇರೆಯವರಿಗೆ ಅಲ್ಲಾ… ತಮ್ಮ ಹೊಟ್ಟೆ ಪಾಡಿಗಾಗಿ ಈ ರೀತಿಯಾಗಿ ಹಿಂದೂ ಹಿಂದೂ ಅಂತ ನಮ್ಮ ತಲೆಯಲ್ಲಿ ಹಾಕಿದ್ದಾರೆ….. ನಾವು ದ್ರಾವಿಡರು, ಮೂಲ ನಿವಾಸಿಗಳು….
    ಸೂಪರ್ ಸರ್…. ಹಿಂದೂ ಎಂಬ ನೆಪದಲ್ಲಿ ನಮ್ಮ ದೇಶದ ಸಂವಿಧಾನದ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ, ಅಸಮಾನತೆ ಉಂಟು ಮಾಡುತ್ತಿದ್ದಾರೆ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ, ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ….. ಕಾನೂನಿನ ಅರಿವು ಮುಡಿಸಿದ್ದಕ್ಕಾಗಿ ತಮಗೆ ಅಭಿನಂದನೆಗಳು ಸರ್

  6. ಅವರು ಡಾಕ್ಟರ್ ಓಡಿದ್ದಕ್ಕೂ ಸಾರ್ಥಕ..! ತುಂಬಾ ವೈಜ್ಞಾನಿಕವಾದ ಒಂದು ಸಾಮಾಜಿಕ ಸರ್ವ ಸಮಾನತೆಯ ನಿರ್ಧಾರ.. ಎಲ್ಲಾಕಡೆಯೂ ಇಂತಹಾ ಗೊಡ್ಡು ಮೂಢನಂಬಿಕೆಯ ಆಚರಣೆಗನ್ನು ತಿರಸ್ಕರಿಸಿ ವೈಜ್ಞಾನಿಕ ಮನೋಧರ್ಮ ತಿಳಿಸಿ ಬೆಳೆಸುವ ಆಚರಣೆಗಳು ಬರಬೇಕು. ಆಗಲೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಸರ್ವಧರ್ಮ ಸಮನ್ವಯ ಭಾವದ ಈ “ಪ್ರಬುದ್ಧ ಭಾರತದ” ದ ಕನಸು ನನಸಾಗಿ ಅಭಿವೃದ್ಧಿ, ಉನ್ನತಿ ಆಗಲು ಸಾಧ್ಯ. ಜೈಭೀಮ್…✊✊✊

    He is really worthy of being a doctor and worth appreciating wholeheartedly..! A very scientific Decision of bringing social equality.. There should be practices everywhere to reject such superstitious beliefs, practices and teach scientific thoughts among people. Then only Dr. Babasaheb Ambedkar’s dream of “Enlightened India” of interfaith harmony can become a reality and development and upliftment of the Country can be realized… Jai Bheem ✊✊✊

  7. ಕಾರ್ಯಕ್ರಮ ದ ಉದ್ದೇಶವೇ ಭೂಮಿ ಪೂಜೆ ಮಾಡುವುದು.. ಹೀಗಿರುವಾಗ ಪೂಜೆ ಗೆ ಬಂದ ಪುರೋಹಿತ ನನ್ನು ವಾಪಸ್ ಕಳಿಸುವಂತೆ ಮಾಡಿದ dmkಸಂಸದನೊಬ್ಬ ತನ್ನ ಅವಿವೇಕತನದ ಪ್ರದರ್ಶನ ಮಾಡಿ ಅನಾಗರಿಕತೆ ಮೆರೆದಿದ್ದಾನೆ.

  8. ಪ್ರಪಂಚದಲ್ಲಿ ಹಿಂದೂ ಸಮಾಜ ಒಂದೇ ಚೆನ್ನಾಗಿ ಬದುಕುತ್ತಿಲ್ಲ. ಬೇರೆ ಸಮಾಜಗಳು ಹಿಂದೂ ಸಮಾಜಕ್ಕಿಂತ ಚೆನ್ನಾಗೇ ಬದುಕುತ್ತಿವೆ. ಹಿಂದೂ ಧರ್ಮದಿಂದಲೇ ನಮ್ಮ ಸಮಾಜ ಸಾವಿರಾರು ವರ್ಷಗಳಿಂದ ತೆವೆಳುತ್ತಾ ಬಂದಿದೆ. ಇನ್ನೂ ಎಷ್ಟು ಶತಮಾನಗಳ ಕಾಲ ಹೀಗೇ ತೆವಳುತ್ತಾ ಬರುತ್ತದೋ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...