Homeಮುಖಪುಟಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

'ಹಿಂದೂ-ಮುಸ್ಲಿಮ್ ಗಲಭೆ ನಡೆದರೆ ಎಬಿವಿಪಿ ಆ ಸ್ಥಳಕ್ಕೆ ಹಾಜರಾಗುತ್ತಿತ್ತು. ಆದರೆ ದಲಿತರ ಮೇಲೆ ಮೇಲುಜಾತಿಯ ಹಿಂದೂಗಳು ದೌರ್ಜನ್ಯ ನಡೆಸಿದರೆ ಎಬಿವಿಪಿ ಅಲ್ಲಿಗೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್.

- Advertisement -
- Advertisement -

ಈಗ ಎಲ್ಲೆಡೆ ಚಂದ್ರಶೇಖರ್ ಆಜಾದ್ ಎಂಬ ಯುವಕನದ್ದೇ ಸದ್ದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಏರಿ ಮೂರು ತಿಂಗಳೂ ಆಗಿಲ್ಲ; ಆಗಲೇ ಅಲ್ಲಿನ ಮುಖ್ಯಮಂತ್ರಿಗೆ ಮುಖಭಂಗ ಮಾಡಿರುವ ಚಂದ್ರಶೇಖರ್ ಯೋಗಿಯ ನಿದ್ದೆಕೆಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ದೇಶದಾದ್ಯಂತ ಪ್ರಗತಿಪರರಲ್ಲಿ ಸಂಚಲನ ಮೂಡಿಸಿರುವ ಚಂದ್ರಶೇಖರ್ ಯುವಜನತೆಯಲ್ಲಿ ರೋಮಾಂಚನ ಸೃಷ್ಟಿಸಿದ್ದಾರೆ.

ತನ್ನ ಯೌವನವನ್ನು ಡೆಹರಾಡೂನ್‌ನಲ್ಲಿ ಕಳೆದ ಚಂದ್ರಶೇಖರ್ 2013ರ ಹೊತ್ತಿಗೆ ಕಾನೂನು ಪದವಿ ಪಡೆದು ವಕೀಲನಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ ಅದೇ ಹೊತ್ತಿಗೆ ಅವರ ತಂದೆ ಗೋವರ್ಧನ್ ದಾಸ್ ಅವರಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿತು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ದಾಸ್ ಅವರು ತಮ್ಮ ವೃತ್ತಿಯ ನಿಮಿತ್ತ ಬೇರೆಬೇರೆ ಕಡೆ ಸೇವೆ ಸಲ್ಲಿಸಿದ್ದರಿಂದ ಅವರ ಅರಿವಿಗೆ ಬಾರದಂತೆ ತಂದೆ ಮತ್ತು ಮಗನ ನಡುವೆ ಅಂತರ ಬೆಳೆದಿತ್ತು. ಆದರೆ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಿಸುವಾಗ ಅವರಿಬ್ಬರೂ ಹತ್ತಿರವಾದರು. ದಲಿತರಾದ ದಾಸ್ ಅವರು ಜಾತಿಕಾರಣಕ್ಕೆ ತಮಗಾದ ಅವಮಾನಗಳನ್ನು ತಮ್ಮ ಪುತ್ರನಿಗೆ ವಿವರಿಸಿದರು. ಅವರು ಶಾಲೆಯ ಮುಖ್ಯಸ್ಥರಾಗಿದ್ದರೂ ಶಾಲಾ ಸಿಬ್ಬಂದಿ ಅವರಿಗೆ ಪ್ರತ್ಯೇಕವಾಗಿ ಕುಡಿಯುವ ನೀರು ಇಡುತ್ತಿದ್ದರು. ಸಭೆಗಳಲ್ಲಿ ಅವಮಾನ ಮಾಡುತ್ತಿದ್ದರು. ಇಂತಹ ನೂರಾರು ಪ್ರಕರಣಗಳನ್ನು ಅವರು ನೆನಪು ಮಾಡಿಕೊಂಡರು. ಚಂದ್ರಶೇಖರ್ ಅವರಿಗೆ ಇಂತಹ ಅವಮಾನಗಳು ಆಗಿರದಿದ್ದರೂ ತಂದೆಯ ಬದುಕು ಅವರ ಕಣ್ಣು ತೆರೆಸಿತು. ದಾಸ್ ಅವರು ತೀರಿಕೊಂಡ ನಂತರ ತನ್ನ ಜನರಿಗೆ ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ ಚಂದ್ರಶೇಖರ್ ಶಹರನಪುರ್ ಜಿಲ್ಲೆಯಲ್ಲಿರುವ ತನ್ನ ಮೂಲ ಊರಾದ ಚುತ್ಮಲಪುರಕ್ಕೆ ಹಿಂದಿರುಗಿದರು. ಚುತ್ಮಲಪುರ್ ಹೆಚ್ಚಾಗಿ ದಲಿತರು ಮತ್ತು ಮುಸಲ್ಮಾನರು ಇರುವ ಊರು. ಅಲ್ಲಿ ತನ್ನ ಹಲವು ದಲಿತ ಮಿತ್ರರನ್ನು ಜೊತೆಹಾಕಿಕೊಂಡ ಚಂದ್ರಶೇಖರ್ ಎರಡು ವರ್ಷಗಳ ಹಿಂದೆ ‘ಭೀಮ್‌ಆರ್ಮಿ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಇದರ ಉದ್ದೇಶ ಜಾತಿ ದೌರ್ಜನ್ಯವನ್ನು ವಿರೋಧಿಸುವುದು.

ಭೀಮಸೇನೆ ಎಲ್ಲರ ಗಮನಕ್ಕೆ ಬಂದದ್ದು ಹೋದ ವರ್ಷ. ಶಹರನಪುರ್ ಹತ್ತಿರದಲ್ಲೇ ಇರುವ ಘರ್ಕೊಲಿ ಎಂಬ ಹಳ್ಳಿಯಲ್ಲಿ ದಲಿತ ಯುವಕರು ಅಂಬೇಡ್ಕರ್ ಪ್ರತಿಮೆಯ ಹತ್ತಿರ ‘ದಿ ಗ್ರೇಟ್ ಚಮ್ಮಾರ್ ಡಾ. ಭೀಮ್‌ರಾವ್ ಅಂಬೇಡ್ಕರ್ ಗ್ರಾಮ ಘರ್ಕೊಲಿ’ ಎಂಬ ಬೋರ್ಡ್ ಹಾಕಿದರು. ಇದು ಅದೇ ಹಳ್ಳಿಯ ಥಾಕೂರರನ್ನು ಕೆರಳಿಸಿತು. “ಚಮ್ಮಾರನೊಬ್ಬ ಅದು ಹೇಗೆ ‘ಗ್ರೇಟ್ ಆಗಲು ಸಾಧ್ಯ’ ಎಂದು ವಾದಿಸಿದ ಥಾಕೂರರು ಮೊದಲು ಆ ಬೋರ್ಡ್ ಕಿತ್ತುಹಾಕಬೇಕೆಂದು ತಾಕೀತು ಮಾಡಿದರು. ಅದಕ್ಕೆ ಬಗ್ಗದ ದಲಿತ ಯುವಕರು “ನಾವು ಅದನ್ನು ನಮಗೆ ಸೇರಿರುವ ಖಾಸಗಿ ಭೂಮಿಯಲ್ಲಿ ಹಾಕಿಕೊಂಡಿದ್ದೇವೆ. ನಿಮ್ಮದೇನು ರಗಳೆ” ಎಂದರು. ಥಾಕೂರರು ಪೊಲೀಸರಿಗೆ ದೂರು ಸಲ್ಲಿಸಿದರು. ಈ ಪ್ರಕರಣದ ಇತ್ಯರ್ಥಕ್ಕೆ ಡಿವೈಎಸ್ಪಿ ಆನಂದ್ ಪಾಂಡೆ ಬಂದ. ಆತ ಬ್ರಾಹ್ಮಣ. ಥಾಕೂರರ ಜೊತೆ ಕೈಜೋಡಿಸಿದ ಪೊಲೀಸಪ್ಪ ಆ ಬೋರ್ಡ್‌ಗೆ ಕಪ್ಪು ಬಣ್ಣ ಬಳಿಸಿದ. ಅದಾದ ಕೆಲ ಗಂಟೆಗಳಲ್ಲಿ ಅದ್ಯಾರೋ ಅಂಬೇಡ್ಕರ್ ಅವರ ಪ್ರತಿಮೆಗೂ ಕಪ್ಪು ಬಣ್ಣ ಬಳಿದರು. ಇದು ದಲಿತರನ್ನು ಕೆರಳಿಸಿತು. ಅವರಲ್ಲಿ ಒಬ್ಬ ಭೀಮಸೇನೆಗೆ ಫೋನ್ ಮಾಡಿದ. ತಮ್ಮ ಪಂಚಾಯತಿಯನ್ನು ವಿರೋಧಿಸಿದ ದಲಿತರನ್ನು ಬಡಿಯಲು ಪೊಲೀಸರು ಸಜ್ಜಾಗುತ್ತಿದ್ದಂತೆ ಹತ್ತಾರು ಮೋಟಾರ್ ಬೈಕ್‌ಗಳನ್ನೇರಿ ದೊಡ್ಡ ಗುಂಪೊಂದು “ಜೈ ಭೀಮ್’ ಎಂದು ಕೂಗುತ್ತಾ ಹಾಜರಾಯಿತು. ಅದರ ನೇತೃತ್ವ ವಹಿಸಿದ್ದವ ಬಿಳಿ ಶರ್ಟ್, ಕಪ್ಪು ಪ್ಯಾಂಟ್, ಕೊರಳ ಸುತ್ತ ನೀಲಿ ಸ್ಕಾರ್ಫ್ ಕಟ್ಟಿಕೊಂಡಿದ್ದ ಅಂದವಾದ ಯುವಕ. ಅವರೇ ಚಂದ್ರಶೇಖರ್ ಆಜಾದ್. ಅವತ್ತು ದಲಿತರ ಮತ್ತು ಪೊಲೀಸರ ನಡುವೆ ನಡೆದ ಚಕಮಕಿಯಲ್ಲಿ ಡಿವೈಎಸ್ಪಿ ಸಾಹೇಬನಿಗೂ ಲಾತಾ ಬಿದ್ದು ಪೊಲೀಸರೆಲ್ಲ ಓಡಿಹೋದರು.

ಆನಂತರ ಚಂದ್ರಶೇಖರರನ್ನು ಪೊಲೀಸರು ಬಂಧಿಸಿದರಲ್ಲದೆ ಅವರ ವಿರುದ್ಧ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಮುಂದಾದರು. ದಲಿತರ ಪರ ಹೋರಾಡಿದ್ದಕ್ಕೆ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಕ್ರಮವೇ ಎಂದು ವಿರೋಧಿಸಿದ ಪ್ರಜ್ಞಾವಂತರು ಚಂದ್ರಶೇಖರ್ ಪರವಾಗಿ ದೊಡ್ಡ ರ್‍ಯಾಲಿಯನ್ನು ನಡೆಸಿದರು. ಪೊಲೀಸರು ತೆಪ್ಪಗಾಗಿ ಚಂದ್ರಶೇಖರ ಅವರನ್ನು ಬಿಡುಗಡೆ ಮಾಡಿದರು. ಈ ಪ್ರಕರಣದ ನಂತರ ಭೀಮ ಸೇನೆ ಇನ್ನೂ ದೊಡ್ಡದಾಯಿತು. ಚಂದ್ರಶೇಖರ್ ಪ್ರಕಾರ ಇವತ್ತು ಭೀಮಸೇನೆಯಲ್ಲಿ 40,000 ಯುವಕರು ಇದ್ದಾರಲ್ಲದೆ, ಇತರೆ ಏಳು ರಾಜ್ಯಗಳಲ್ಲಿ ಅದರ ವಿಭಾಗಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಭೀಮ ಸೇನೆಯು ಇಂದು ದಲಿತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಿದ್ದು ತಮ್ಮ ಮೇಲೆ ದೌರ್ಜನ್ಯ ಎಸಗುವವರನ್ನು ವಿರೋಧಿಸುವ ಛಲ ಸೃಷ್ಟಿ ಮಾಡಿದೆ.

ವಿಚಿತ್ರವೆಂದರೆ ಚಂದ್ರಶೇಖರ್ ವಿದ್ಯಾರ್ಥಿಯಾಗಿದ್ದಾಗ ಸಂಘ ಪರಿವಾರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲಿದ್ದವರು. ಆಗ ಅವರಿಗೆ ಆರೆಸ್ಸೆಸ್‌ನ ಅಸಲಿಯತ್ತು ಅರ್ಥವಾಯಿತು. “ಹಿಂದೂ-ಮುಸ್ಲಿಮ್ ಗಲಭೆ ನಡೆದರೆ ಎಬಿವಿಪಿ ಆ ಸ್ಥಳಕ್ಕೆ ಹಾಜರಾಗುತ್ತಿತ್ತು. ಆದರೆ ದಲಿತರ ಮೇಲೆ ಮೇಲುಜಾತಿಯ ಹಿಂದೂಗಳು ದೌರ್ಜನ್ಯ ನಡೆಸಿದರೆ ಎಬಿವಿಪಿ ಅಲ್ಲಿಗೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್. ಆಗ ಅಂಬೇಡ್ಕರ್ ಬರಹಗಳನ್ನು ಓದಲಾರಂಭಿಸಿದ ಚಂದ್ರಶೇಖರ್ ಭೀಮ ಸೇನೆ ಸ್ಥಾಪಿಸಿ ತನ್ನ ಸಮುದಾಯದ ಏಳಿಗೆಗೆ ದುಡಿಯಲು ನಿರ್ಧರಿಸಿದರು. ಅವರ ಭೀಮಸೇನೆ ಇವತ್ತು ಶಹರನಪುರದಲ್ಲಿ ಹಲವಾರು ‘ಶಾಲೆ’ಗಳನ್ನು ನಡೆಸುತ್ತದೆ. ಅದಕ್ಕೆ ಭೀಮ್ ಪಾಠಾಶಾಲಾ ಎಂದು ಕರೆಯಲಾಗುತ್ತದೆ. ಅಲ್ಲಿ ಕಾಲೇಜು ಮುಗಿಸಿರುವ ದಲಿತ ಯುವಕರು ಶಾಲೆಗಳಲ್ಲಿ ಓದುತ್ತಿರುವ ದಲಿತ ಮಕ್ಕಳಿಗೆ ಪ್ರತಿದಿನ ಪಾಠ ಹೇಳಿಕೊಡುತ್ತಾರೆ. ಹಾಗೆಯೇ ಹಿರಿಯ ದಲಿತ ಅಧಿಕಾರಿಗಳು ಯುವ ದಲಿತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಕೊಡುತ್ತಾರೆ.

ನೀಲಿ ಆಗಸದಲ್ಲಿ ಚಂದ್ರಶೇಖರ್ ಆಜಾದ್ ಎಂಬ ಇನ್ನೊಂದು ನಕ್ಷತ್ರ ಪ್ರಜ್ವಲಿಸಲಾರಂಭಿಸಿದೆ. ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಉಮರ್‌ ಖಾಲಿದ್, ಶೆಹ್ಲಾ ರಶೀದ್ ಮತ್ತು ಚಂದ್ರಶೇಖರ್ ಎಂಬ ಈ ನಕ್ಷತ್ರಗಳು ಎಲ್ಲರಲ್ಲಿ ಭರವಸೆ ಮೂಡಿಸುತ್ತಿವೆ.

  • ಗೌರಿ ಲಂಕೇಶ್

ಮೇ, 31 2017.


ಇದನ್ನೂ ಓದಿ: ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...