ಉತ್ತರ ಪ್ರದೇಶದ ಕಾನ್ಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯ ಪ್ರಾಂಶುಪಾಲೆ ಮತ್ತು ಹಿರಿಯ ವೈದ್ಯರೊಬ್ಬರು ಇಸ್ಲಾಮಿಕ್ ಪಂಥದ “ತಬ್ಲೀಘಿ ಜಮಾಅತ್” ಸದಸ್ಯರನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ ಅವರನ್ನು ‘ಆಸ್ಪತ್ರೆಗಳ ಬದಲಾಗಿ ಕತ್ತಲಕೋಣೆಯಲ್ಲಿ ಕೂಡಿಹಾಕಬೇಕು ಅಥವಾ ಕಾಡುಗಳಿಗೆ ಅಟ್ಟಬೇಕು ಎಂದು ಕ್ಯಾಮರ ಎದುರೇ ಹೇಳಿದ್ದಾರೆ.
ಆರತಿ ಲಾಲ್‌ಚಂದಾನಿ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಕೊರೊನಾ ವೈರಸ್ ಮುನ್ನೆಚ್ಚರಿಕೆಗಳನ್ನು ಉಲ್ಲಂಘಿಸಿ ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ತಬ್ಲೀಘಿ ಜಮಾಅತ್ ಸದಸ್ಯರು ತನ್ನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಏಪ್ರಿಲ್ ತಿಂಗಳಿನಲ್ಲಿ ಅವರು ದುರ್ನಡತೆ ತೋರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸುಮ್ಮನೆ ಉಗುಳುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಮಾತುಕತೆಯನ್ನು ನಗರದ ಪತ್ರಕರ್ತರು ಕುಟುಕು ಕಾರ್ಯಾಚರಣೆಯಲ್ಲಿ ಚಿತ್ರೀಕರಿಸಿದ್ದಾರೆ. ಅದರಲ್ಲಿ ಪ್ರಾಂಶುಪಾಲರು “ನಾವು ಭಯೋತ್ಪಾದಕರಿಗೆ ವಿಐಪಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಕಾರಣದಿಂದಾಗಿ ಅನೇಕ ವೈದ್ಯರು ಸಂಪರ್ಕತಡೆಯಲ್ಲಿದ್ದಾರೆ. ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಈ ಜನರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಒಲೈಕೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರನ್ನು ಜೈಲಿಗೆ ಹಾಕಬೇಕು” ಎಂದು ಅವರು ಹೇಳಿದ್ದಾರೆ.
Dr. Aarti Lalchandani refers COVID +ve Muslims as terrorists, Wants govt to send Jamatis to Jungle & Jail instead of exhausting resources. She is the same lady who'd earlier alleged that Jamatis were spitting, misbehaving & demanding Biryani. @DMKanpurpic.twitter.com/N05xM78D2p
— Mohammed Zubair (@zoo_bear) May 31, 2020
ಮುಂದುವರಿದು ಅವರು “ಅವರನ್ನು ಕಾಡುಗಳಿಗೆ ಕಳುಹಿಸಿ, ಅವರನ್ನು ಕತ್ತಲಕೋಣೆಯಲ್ಲಿ ತಳ್ಳಿರಿ. ಈ 30 ಕೋಟಿ ಜನರಿಂದಾಗಿ 100 ಕೋಟಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಕಾರಣದಿಂದಾಗಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ.” ಎಂದು ಹೇಳಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ತೀವ್ರ ಟೀಕೆ ಎದುರಾಗಿದೆ. ನಂತರ ಅವರು ನಾನು ಹಾಗೆ ಹೇಳಿಲ್ಲ, ಅದು ತಿರುಚಿರುವ ವಿಡಿಯೋ. ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಯಾರೋ ಮಾಡಿರುವ ಪಿತೂರಿ ಎಂದು ಮಾತು ಬದಲಿಸಿದ್ದಾರೆ. ನಾನು ಯಾವುದೇ ಸಮುದಾಯದ ಹೆಸರಿಡಿದು ಮಾತನಾಡಿಲ್ಲ, ನಾನು ಆ ಸಮುದಾಯವನ್ನು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಕಾನ್ಪುರ ಮೂಲದ ಮಾಜಿ ಸಂಸದೆ ಮತ್ತು ಸಿಪಿಐ (ಎಂ) ಪೊಲಿಟ್‌ಬ್ಯುರೊ ಸದಸ್ಯೆ ಸುಭಾಶಿನಿ ಅಲಿಯವರು ಪ್ರಾಂಶುಪಾಲೆ ವಿರುದ್ಧ ಕಿಡಿಕಾರಿದ್ದಾರೆ. ಅವರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ. “ಇದು ಅಸಂವಿಧಾನಿಕವಾಗಿದ್ದು ಅವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಕೂಡಲೇ ಈ ವೀಡಿಯೊವನ್ನು ತನಿಖೆ ಮಾಡಬೇಕು ಮತ್ತು ಅದು ನಿಜವೆಂದು ಕಂಡುಬಂದಲ್ಲಿ ಪ್ರಾಂಶುಪಾಲೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವುತ್ತು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತರು, ರಣಹದ್ದುಗಳು ಹಾಗೂ ಮತ್ತೊಬ್ಬ ಸಾಲಿಸಿಟರ್ ಜನರಲ್


