Homeಮುಖಪುಟಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ನೀವು ‘ಪೆಂಗ್ವಿನ್‌’ ಆಗಿರಬೇಕು!

ಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ನೀವು ‘ಪೆಂಗ್ವಿನ್‌’ ಆಗಿರಬೇಕು!

- Advertisement -
- Advertisement -

ಹೌದು, ಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ಇದು ನಿಮ್ಮ ಅನುಭವಕ್ಕೆ ಬರಬೇಕಾದರೆ ನೀವು ‘ಪೆಂಗ್ವಿನ್’ ಆಗಿರಬೇಕು! ಏನಿದು ವಿಚಿತ್ರ ಹೇಳಿಕೆ ಎಂದು ನಿಮಗನಿಸುತ್ತಿದೆಯೆ? ಮುಂದಕ್ಕೆ ಓದಿ.

ಡಿಸೆಂಬರ್ ಬಂತೆಂದರೆ ಜಗತ್ತಿನ ನಾಶ, ಪ್ರಳಯ, ಎಂಬ ಸುದ್ದಿಯೆಲ್ಲಾ ಓಡಾಡುತ್ತವೆ. ಆದರೆ ಈ ಸುದ್ದಿ ಆ ರೀತಿಯ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಕಟ್ಟಿದ ಕಟ್ಟುಕತೆಯಲ್ಲ. ಅಷ್ಟಕ್ಕೂ ಇದು ಜಗತ್ತು ನಾಶವಾಗುವ ಕತೆಯಲ್ಲ, ಜಗತ್ತು ಅಂದು ಕೊನೆಗೊಳ್ಳುವುದೂ ಇಲ್ಲ. ನಮ್ಮ ಭೂಮಿಯಲ್ಲಿ ಸಾಮಾನ್ಯವಾಗಿ ನಡೆಯುವ ಒಂದು ವಿದ್ಯಮಾನ ಮಾತ್ರವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡಿಸೆಂಬರ್‌‌ 21ರಂದು ನಿಜಕ್ಕೂ ಸೂರ್ಯ ಅಸ್ತಮಿಸದ ದಿನವಾಗಿದೆ. ಆದರೆ ಇದನ್ನು ನೀವು ನೋಡಬೇಕಾದರೆ ಭೂಮಿಯ ದಕ್ಷಿಣ ಧ್ರುವಕ್ಕೆ ತೆರಳಬೇಕಾಗುತ್ತದೆ. ಅಥವಾ ಅಲ್ಲಿಯೇ ಬದುಕುತ್ತಿರುವ ಪೆಂಗ್ವಿನ್ ನೀವಾಗಿರಬೇಕಾಗುತ್ತದೆ. ಹಾಗೆಯೇ ಡಿಸೆಂಬರ್‌ 21ರಂದು ಸೂರ್ಯೋದಯ ಕೂಡಾ ಆಗದ ದಿನವಾಗಿದೆ. ಇದರ ಅನುಭವ ಬರಬೇಕಾದರೆ, ಕತೆಗಳಲ್ಲಿ ಬರುವ ಸಾಂಟಾಕ್ಲಾಸ್‌ನಂತೆ ನೀವು ಉತ್ತರ ಧ್ರವದಲ್ಲಿ ವಾಸಿಸುತ್ತಿರಬೇಕು!

ಇದನ್ನೂ ಓದಿ:ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಇದು ಹೇಗೆ ಸಾಧ್ಯ? ವೈಜ್ಞಾನಿಕ ಕಾರಣಗಳೇನು?

ಭೂಮಿಯು ತನ್ನ ಅಕ್ಷದಲ್ಲಿ ಸುತ್ತುವುದರಿಂದ ಸೂರ್ಯ ಉದಯಿಸಿದ ಹಾಗೆ ಮತ್ತು ಸೂರ್ಯ ಮುಳುಗುವ ಹಾಗೆ ಕಾಣುತ್ತದೆ. ಭೂಮಿ ತನ್ನ ಅಕ್ಷದಲ್ಲಿ ವಾರೆಯಾಗಿ ಸುತ್ತುತ್ತದೆ (ಮೇಲಿನ ಚಿತ್ರ ನೋಡಿ). ಭೂಮಿ ತನ್ನ ಅಕ್ಷದಲ್ಲಿ ಓರೆಯಾಗಿ ಸುತ್ತುವ ಕಾರಣದಿಂದಲೇ, ಭೂಮಿಯ ಉತ್ತರ ಮತ್ತು ದಕ್ಷಿಣ ಗೋಲದಲ್ಲಿ ಇರುವವರಿಗೆ ಹಗಲು ಮತ್ತು ರಾತ್ರಿಗಳ ಸಮಯ ವ್ಯತ್ಯಾಸ ಆಗುತ್ತದೆ.

ಭೂಮಿಯ ದಕ್ಷಿಣ ಗೋಳವು ಸೂರ್ಯನೆಡೆಗೆ ಬಾಗಿದ್ದಾಗ ಆ ಪ್ರದೇಶದ ಜನರಿಗೆ ಹಗಲು ಹೆಚ್ಚು ದೀರ್ಘವಾಗಿ ಇರುತ್ತದೆ. ಉತ್ತರ ಧ್ರುವವು ಸೂರ್ಯನಿಂದ ದೂರವಾಗಿ ಇದ್ದರೆ ಈ ಪ್ರಕ್ರಿಯೆಯು ಹಿಂದುಮುಂದಾಗಿ ಇರುತ್ತದೆ. ಉದಾಹರಣೆಗೆ, ಭಾರತ ಉತ್ತರಾರ್ಧಗೋಳದಲ್ಲಿ ಇರುವುದರಿಂದ ನಮಗೆ ಡಿಸೆಂಬರ್‌ ತಿಂಗಳಲ್ಲಿ ರಾತ್ರಿ ಅತೀ ದೀರ್ಘವಾಗಿ ಹಗಲು ಚಿಕ್ಕದಾಗಿರುತ್ತದೆ.

ಆದ್ದರಿಂದಲೇ, ಡಿಸೆಂಬರ್‌ 21ರಂದು ಭೂಮಿಯ ಉತ್ತರ ಧ್ರವದಲ್ಲಿ ಸೂರ್ಯನ ಬೆಳಕೇ ಇರುವುದಿಲ್ಲ. ಇದಕ್ಕೆ ‘ಧ್ರುವ ರಾತ್ರಿ’ ಎಂದು ಕರೆಯುತ್ತಾರೆ. ಈ ದಿನ ಅಲ್ಲಿ ಸೂರ್ಯೋದಯ ಆಗುವುದಿಲ್ಲ. ಅದೇ ಸಮಯದಲ್ಲಿ ಭೂಮಿಯ ದಕ್ಷಿಣ ಧ್ರುವದಲ್ಲಿ ಸೂರ್ಯಾಸ್ತ ಆಗುವುದಿಲ್ಲ. ಮಧ್ಯ ರಾತ್ರಿಯ ಸಮಯವಾದರೂ ಅಲ್ಲಿ ಸೂರ್ಯ ಕಾಣುತ್ತಾ ಇರುತ್ತಾನೆ. ಈ ದಿನವನ್ನು ಧ್ರುವ ದಿನ ಅಥವಾ ಮಧ್ಯರಾತ್ರಿಯ ಸೂರ್ಯ ಎಂದು ಕರೆಯುತ್ತಾರೆ.

ಹೀಗಾಗಿ ಡಿಸೆಂಬರ್‌ 21 ರಂದು ಭೂಮಿಯ ಉತ್ತರ ಧ್ರವದಲ್ಲಿ ಸೂರ್ಯ ಹುಟ್ಟುವುದೇ ಇಲ್ಲ. ಹಾಗೂ ಅದೇ ದಿನ ಭೂಮಿಯ ದಕ್ಷಿಣ ಧ್ರುವದಲ್ಲಿ ಸೂರ್ಯ ಅಸ್ತಮಿಸುವುದೇ ಇಲ್ಲ.

ಹಾಗೆ ನೋಡಿದರೆ ಸೂರ್ಯ ‘ಹುಟ್ಟವುದುದು ಮತ್ತು ಮುಳುಗುವುದು’ ಎಂಬ ಪದಗಳು ಕೇವಲ ಆಡು ಮಾತುಗಳಾಗಿದ್ದು, ವೈಜ್ಞಾನಿಕವಾಗಿ ಇದು ಸರಿಯಲ್ಲ. ಸೂರ್ಯ ಪ್ರತಿ ದಿನ ಹುಟ್ಟುವುದು ಮತ್ತು ಮುಳುಗುವುದು ಕೂಡಾ ಇಲ್ಲ. ಸೂರ್ಯ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಇರುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವುದರಿಂದ ಸೂರ್ಯ ಹುಟ್ಟಿದ ಹಾಗೆ ಮತ್ತು ಅಸ್ತಮಿಸಿದ ಹಾಗೆ ಕಾಣುತ್ತದೆ.

ಇದನ್ನೂ ಓದಿ:ವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...