ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿರುವ ‘ಶಿವಲಿಂಗ’ ಎಷ್ಟು ವರ್ಷಗಳ ಹಿಂದಿನದ್ದು ಎನ್ನುವುದನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ ಸೇರಿದಂತೆ ”ವೈಜ್ಞಾನಿಕ ಸಮೀಕ್ಷೆ”ಗೆ ಅವಕಾಶ ನೀಡುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ಪೀಠವು ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಹುಜೆಫಾ ಅಹ್ಮದಿ ಅವರ ಸಲ್ಲಿಕೆಗಳನ್ನು ಗಮನಿಸಿದ ನಂತರ ಅರ್ಜಿಯನ್ನು ಆಲಿಸಿತು.
ಹೈಕೋರ್ಟ್ ಆದೇಶದ ವಿರುದ್ಧ ಮಸೀದಿ ಸಮಿತಿಯ ಮನವಿಗೆ ಸುಪ್ರೀಂ ಕೋರ್ಟ್ ಕೇಂದ್ರ, ಉತ್ತರ ಪ್ರದೇಶ ಸರ್ಕಾರ ಮತ್ತು ಹಿಂದೂ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದೆ. “ಆಕ್ಷೇಪಿಸಲಾದ ಆದೇಶದ ಪರಿಣಾಮಗಳು ನಿಕಟ ಪರಿಶೀಲನೆಗೆ ಅರ್ಹವಾದ ಕಾರಣ, ಆದೇಶಸ ಅನುಷ್ಟಾನವನ್ನು ಮುಂದಿನ ದಿನಾಂಕದವರೆಗೆ ಮುಂದೂಡಲಾಗುವುದು” ಎಂದು ಪೀಠವು ಹೇಳಿದೆ.
”ಶಿವಲಿಂಗ್”ದ ವೈಜ್ಞಾನಿಕ ಸಮೀಕ್ಷೆಯನ್ನು ಸದ್ಯಕ್ಕೆ ಮುಂದೂಡುವ ಮನವಿಗೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಎರಡೂ ಒಪ್ಪಿಕೊಂಡಿವೆ.
ಇದನ್ನೂ ಓದಿ: ಪರಿಶಿಷ್ಟ ಪಂಗಡಕ್ಕೆ ಮೈತಿ ಸಮುದಾಯ ಸೇರಿಸುವ ವಿಚಾರ; ಮಣಿಪುರ ಹೈಕೋರ್ಟ್ ಆದೇಶ ವಾಸ್ತವವಾಗಿ ತಪ್ಪು ಎಂದ ಸುಪ್ರೀಂ
ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ಅಲಹಾಬಾದ್ ಹೈಕೋರ್ಟ್, ಕಳೆದ ವರ್ಷ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಳೆದ ವರ್ಷ ವಿಡಿಯೋಗ್ರಾಫಿಕ್ ಸಮೀಕ್ಷೆಯ ವೇಳೆ ಕಂಡುಬಂದಿದೆ ಎಂದು ಹೇಳಲಾದ “ಶಿವಲಿಂಗ” ಕಾರ್ಬನ್ ಡೇಟಿಂಗ್ ಸೇರಿದಂತೆ “ವೈಜ್ಞಾನಿಕ ಸಮೀಕ್ಷೆ” ಗೆ ಮೇ 12 ರಂದು ನಿರ್ದೇಶನ ನೀಡಿತ್ತು.
ಕಳೆದ ವರ್ಷ ಮೇ 16ರಂದು ಮಸೀದಿ ಆವರಣದಲ್ಲಿ ಸಮೀಕ್ಷೆಯ ನಡೆಸುವಾಗ ಒಂದು ರಚನೆ ಕಂಡುಬಂದಿದ್ದು, ಅದನ್ನು ಹಿಂದೂಗಳ ಕಡೆಯವರು “ಶಿವಲಿಂಗ” ಮತ್ತು ಮುಸ್ಲಿಂ ಕಡೆಯವರು ”ಕಾರಂಜಿ” ಎಂದು ಹೇಳಿಕೊಂಡಿದ್ದರು.
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಅಕ್ಟೋಬರ್ 14, 2022 ರಂದು ”ಶಿವಲಿಂಗ” ದ ವೈಜ್ಞಾನಿಕ ಸಮೀಕ್ಷೆ ಮತ್ತು ಕಾರ್ಬನ್ ಡೇಟಿಂಗ್‌ಗಾಗಿ ಅವರ ಅರ್ಜಿಯನ್ನು ತಿರಸ್ಕರಿಸಿದ ನಂತರ, ಅರ್ಜಿದಾರರಾದ ಲಕ್ಷ್ಮಿ ದೇವಿ ಮತ್ತು ಇತರ ಮೂವರು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.


