ಕೆಲವು ಶಿಕ್ಷಕರು ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ ಆರು ವರ್ಷದ ದಲಿತ ಮಗುವನ್ನು, ಜನಸತ್ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿಯಲ್ಲಿ ಕೂಡಿಹಾಕಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದ್ದು, ಪ್ರಾಥಮಿಕ ಶಿಕ್ಷಣ ಇಲಾಖೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಪ್ರಾಂಶುಪಾಲರಾದ ಸಂಧ್ಯಾ ಜೈನ್ ಮತ್ತು ತರಗತಿ ಶಿಕ್ಷಕಿ ರವಿತಾ ರಾಣಿ ಅವರ ನಿರ್ಲಕ್ಷ್ಯದ ಕಾರಣಕ್ಕಾಗಿ ಒಂದನೇ ತರಗತಿಯ ಆರು ವರ್ಷದ ವಿದ್ಯಾರ್ಥಿಯೊಬ್ಬ ಶಾಲೆಯ ತರಗತಿಯಲ್ಲಿ ಕೂಡಿಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, “ದಲಿತ ಮಕ್ಕಳ ಮೇಲೆ ದ್ವೇಷ ಹೊಂದಿದ್ದರಿಂದ ಇಬ್ಬರು ಶಿಕ್ಷಕರು ನನ್ನ ಮಗನಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ಒತ್ತಾಯಿಸುತ್ತಿದ್ದರು” ಎಂದು ಆರೋಪಿಸಿದ್ದಾರೆ.
ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆ ಮುಚ್ಚಿದ ಒಂದು ಗಂಟೆಗೂ ಹೆಚ್ಚು ಕಾಲ ತನ್ನ ಮಗ ಬೀಗ ಹಾಕಿದ್ದ ತರಗತಿ ಕೋಣೆಯಲ್ಲಿ ಸಿಲುಕಿದ್ದ ಎಂದು ಆರೋಪಿಸಿದರು. ಶಾಲೆಯನ್ನು ಮುಚ್ಚಿದ ನಂತರ ತನ್ನ ಮಗ ಮನೆಗೆ ಬಾರದಿದ್ದಾಗ, ಅವರು ಇತರ ವಿದ್ಯಾರ್ಥಿಗಳೊಂದಿಗೆ ಅವನ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಅವರು ಆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಶಾಲೆ ಬಳಿಗೆ ಹೋದಾಗ ಬೀಗ ಹಾಕಿರುವುದು ಕಂಡು ತನ್ನ ಮಗುವಿನ ಅಳಲು ಕೇಳಿದ ನಂತರ ಗ್ರಾಮಸ್ಥರು ಮತ್ತು ಆಕೆಯ ಕುಟುಂಬಸ್ಥರು ಪ್ರಾಂಶುಪಾಲರಿಗೆ ಕರೆ ಮಾಡಿದ್ದಾರೆ. ಬಳಿಕ ಶಿಕ್ಷಕಿ ರವಿತಾ ರಾಣಿ ಅವರ ಪತಿ ಕೀ ಸಮೇತ ಶಾಲೆಗೆ ಆಗಮಿಸಿ ತೆರೆದರು. ಮಗು ತರಗತಿಯಲ್ಲಿ ಮಲಗಿರಬಹುದು ಎಂದು ರಾಣಿಯ ಪತಿ ಜನರಿಗೆ ಹೇಳಿದ್ದಾರೆ.
ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದ್ದು, ಶಿಕ್ಷಕಿ ರಾಣಿ ಅವರಿಗೆ ವರ್ಗಾವಣೆ ನೀಡಲಾಗಿದೆ ಎಂದು ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಸಂದೀಪ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಬ್ಲಾಕ್ ಶಿಕ್ಷ ಣಾಧಿಕಾರಿ ಜನಸತ್ ಮತ್ತು ಶಹಪುರ ನೇತೃತ್ವದ ದ್ವಿಸದಸ್ಯ ಸಮಿತಿ ಪರಿಶೀಲನೆ ನಡೆಸಿ ಮೂರು ದಿನಗಳಲ್ಲಿ ವರದಿ ಸಲ್ಲಿಸಲಿದೆ.
ಶಾಲೆ ಮುಚ್ಚುವ ಮುನ್ನ ತರಗತಿ ಕೊಠಡಿಗಳನ್ನು ಪರಿಶೀಲಿಸುವಂತೆ ಎಲ್ಲ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಕುಮಾರ್ ಹೇಳಿದರು.
ಇದಕ್ಕೆ ತರಗತಿ ಶಿಕ್ಷಕಿಯೇ ಕಾರಣ ಎಂಬ ಕಾರಣಕ್ಕೆ ಆಕೆಗೆ ಅನ್ಯಾಯವಾಗಿದೆ ಎಂದು ಪ್ರಾಂಶುಪಾಲ ಜೈನ್ ಹೇಳಿದ್ದಾರೆ. “ಮಗು ಮಲಗಿದ್ದರೂ ತರಗತಿಗೆ ಬೀಗ ಹಾಕುವ ಮುನ್ನ ತಪಾಸಣೆ ನಡೆಸಬೇಕಿತ್ತು” ಎಂದು ಹೇಳಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; “ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಬಂಧಿಸುವಿರಾ..?’; ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್


